More

    ಜನವರಿಯಲ್ಲಿ ಮಾರುತಿ ವಾಹನಗಳ ಬೆಲೆ ಏರಿಕೆ

    ನವದೆಹಲಿ: ಕಚ್ಚಾ ಸಾಮಗ್ರಿಗಳ ಬೆಲೆಯೇರಿಕೆ ಹಾಗೂ ಒಟ್ಟಾರೆ ಹಣದುಬ್ಬರದ ಕಾರಣ ಮುಂದಿನ ವರ್ಷ ಜನವರಿಯಲ್ಲಿ ತನ್ನ ಕಾರುಗಳ ಬೆಲೆಗಳನ್ನು ಏರಿಸುವುದಾಗಿ ದೇಶದ ಮುಂಚೂಣಿ ಆಟೋಮೊಬೈಲ್ ತಯಾರಿಕಾ ಕಂಪನಿ ಮಾರುತಿ ಸುಝುುಕಿ ಸೋಮವಾರ ತಿಳಿಸಿದೆ.

    ಬೆಲೆಯೇರಿಕೆಯ ನಿಖರ ಪ್ರಮಾಣವನ್ನು ಕಂಪನಿ ತಿಳಿಸಿಲ್ಲವಾದರೂ ವಿವಿಧ ಮಾಡೆಲ್​ಗಳ ಆಧಾರದಲ್ಲಿ ದರ ಏರಿಕೆ ವ್ಯತ್ಯಯ ಆಗಲಿದೆ ಎಂದು ಹೇಳಿದೆ. ಕಾರುಗಳ ಬೆಲೆಗಳನ್ನು ಇಳಿಸಲು ಗರಿಷ್ಠ ಪ್ರಯತ್ನ ಮಾಡಲಾಗುತ್ತದೆ. ಆದರೂ ಬೆಲೆಯೇರಿಕೆಯ ಸ್ವಲ್ಪ ಪ್ರಮಾಣವನ್ನು ಗ್ರಾಹಕರ ಮೇಲೆ ವರ್ಗಾಯಿಸ ಬೇಕಾಗಬಹುದು ಎಂದು ಮಾರುತಿ ತಿಳಿಸಿದೆ.

    ಮಾರುತಿ ಸುಝುುಕಿ ಅಕ್ಟೋಬರ್​ನಲ್ಲಿ 1.99 ಲಕ್ಷ ವಾಹನಗಳ ಬುಕ್ಕಿಂಗ್ ಸ್ವೀಕರಿಸಿದ್ದು ಇದು ಯಾವುದೇ ತಿಂಗಳಲ್ಲಿ ದಾಖಲಾದ ಮಾರಾಟವಾಗಿದೆ. ಕಳೆದ ವರ್ಷ ಇದೇ ಅವಧಿಗಿಂತ ಶೇಕಡ 19ರಷ್ಟು ಏರಿಕೆಯಾಗಿದೆ.ಇದೇ ವೇಳೆ, ಸೆಪ್ಟೆಂಬರ್​ನಲ್ಲಿ ಕಂಪನಿಯ ನಿವ್ವಳ ಲಾಭ ಶೇ. 80.3ರಷ್ಟು ಏರಿಕೆಯಾಗಿ 3,716.5 ಕೋಟಿ ರೂಪಾಯಿಗೆ ತಲುಪಿದೆ.

    ದಿನಕ್ಕೆ 100 ರೂ. ಹೂಡಿಕೆ ಮಾಡಿ 15 ಲಕ್ಷದ ಕಾರು ಖರೀದಿಸುವುದು ಹೇಗೆ? SIPಯಿಂದ ಇದು ಸಾಧ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts