More

    ದಿನಕ್ಕೆ 100 ರೂ. ಹೂಡಿಕೆ ಮಾಡಿ 15 ಲಕ್ಷದ ಕಾರು ಖರೀದಿಸುವುದು ಹೇಗೆ? SIPಯಿಂದ ಇದು ಸಾಧ್ಯ!

    ಪ್ರಸ್ತುತ ಕಾಲದಲ್ಲಿ 100 ರೂಪಾಯಿ ಅಂದರೆ ಅದು ಸಣ್ಣ ಮೊತ್ತ. ತಿನ್ನಲು ಅಥವಾ ಕುಡಿಯಲು ಯಾವುದೇ ಸಣ್ಣ ಪ್ರಮಾಣದ ಆಹಾರಗಳನ್ನು ಆರ್ಡರ್ ಮಾಡಿದರೂ ಸಹ, 100 ರೂಪಾಯಿ ನೀವು ಸುಲಭವಾಗಿ ಖರ್ಚಾಗುತ್ತದೆ. ನಿಮ್ಮ ದೈನಂದಿನ ವೆಚ್ಚಗಳ ವಿಚಾರಕ್ಕೆ ಬಂದರೆ, 100 ರೂ. ಸಣ್ಣ ಮೊತ್ತವಾಗಿದೆ. ಏಕೆಂದರೆ, ನಿಮ್ಮ ಖರ್ಚುಗಳನ್ನು ನಿರ್ವಹಿಸಲು 100 ರೂ. ಸಾಕಾಗುವುದಿಲ್ಲ. ಅದಕ್ಕಾಗಿ ಹೆಚ್ಚು ಹಣ ಬೇಕಾಗುತ್ತದೆ. ಆದರೆ ಹೂಡಿಕೆ ವಿಚಾರ ಬಂದಾಗ ಯಾವುದೇ ಮೊತ್ತವು ಚಿಕ್ಕದಲ್ಲ. ದಿನಕ್ಕೆ 100 ರೂ.ಗಳಷ್ಟು ಸಣ್ಣ ಹೂಡಿಕೆಯು ನಿಮ್ಮ ಜೀವನದಲ್ಲಿ ಜಾದೂ ಮಾಡಬಹುದು. ಕೆಲವೇ ವರ್ಷಗಳಲ್ಲಿ 15 ಲಕ್ಷ ರೂ. ಮೌಲ್ಯದ ಕಾರನ್ನು ಖರೀದಿಸಲು ಸಾಕಷ್ಟು ಹಣವನ್ನು ಸಂಗ್ರಹಿಸಲು ಹೂಡಿಕೆ ನಿಮಗೆ ಸಹಾಯ ಮಾಡುತ್ತದೆ.

    ಕನಸಿನ ಕಾರು ಕೊಳ್ಳಬಹುದು
    ಉತ್ತಮ ಆದಾಯವನ್ನು ಹಿಂಪಡೆಯಲು ಹಣ ಹೂಡಿಕೆ ಮಾಡಲು ಹಲವಾರು ದಾರಿಗಳಿವೆ. ಆದರೆ, ವ್ಯವಸ್ಥಿತ ಹೂಡಿಕೆ ಯೋಜನೆ (SIP) ಮೂಲಕ ನೀವು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದರೆ, ಅದು ನಿಮಗೆ ಪ್ರತಿ ವರ್ಷ 12 ಪ್ರತಿಶತ ಲಾಭವನ್ನು ತಂದುಕೊಡುತ್ತದೆ. ಅಂದಹಾಗೆ ಮ್ಯೂಚುವಲ್​ ಫಂಡ್​ಗಳು ಷೇರು ಮಾರುಕಟ್ಟೆಗೆ ಲಿಂಕ್​ ಆಗಿರುವುದರಿಂದ ಪ್ರತಿ ವರ್ಷ 12 ಪ್ರತಿಶತ ಲಾಭ ಬರುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ಮ್ಯೂಚುವಲ್ ಫಂಡ್‌ಗಳ ಐತಿಹಾಸಿಕ ದತ್ತಾಂಶದ ಆಧಾರದ ಮೇಲೆ 12 ಪ್ರತಿಶತ ಆದಾಯವನ್ನು ಅಂದಾಜಿಸಲಾಗಿದೆ.

    ಎಸ್​ಐಪಿ ಮೂಲಕ ಮ್ಯೂಚುವಲ್​ ಫಂಡ್​ನಲ್ಲಿ ನೀವೇನಾದರೂ ಪ್ರತಿ ತಿಂಗಳು 3 ಸಾವಿರ ರೂ. ಹೂಡಿಕೆ ಮಾಡಿದರೆ, 15 ವರ್ಷಗಳಲ್ಲಿ ನಿಮ್ಮ ಹೂಡಿಕೆ 5,40,000 ರೂಪಾಯಿಗಳಾಗುತ್ತದೆ. ಶೇ. 12 ರಷ್ಟು ಬಡ್ಡಿದರದಂತೆ ನೀವು ನಿಮ್ಮ ಹೂಡಿಕೆ ಹಣದ ಮೇಲೆ ಮೇಲೆ ದುಪ್ಪಟ್ಟು ಲಾಭವನ್ನು ಪಡೆಯುತ್ತೀರಿ. 12 ರಷ್ಟು ಬಡ್ಡಿ ಅಂದರೆ, 15 ವರ್ಷಗಳಲ್ಲಿ 9,73, 728 ರೂಪಾಯಿ ಲಾಭವನ್ನು ಪಡೆಯುತ್ತೀರಿ. ಅಲ್ಲಿಗೆ ನಿಮ್ಮ ಹೂಡಿಕೆ ಮತ್ತು ಲಾಭ ಎರಡನ್ನೂ ಸೇರಿಸಿದರೆ 15,13,728 ರೂಪಾಯಿ ಆಗಲಿದೆ. ಈ ಹಣದಲ್ಲಿ ನೀವು ಸುಲಭವಾಗಿ ಕಾರನ್ನು ಖರೀದಿ ಮಾಡಬಹುದಾಗಿದೆ.

    ಇದರ ಹೊರತಾಗಿ ನೀವು ಎಸ್​ಐಪಿಯಲ್ಲಿ ಹೆಚ್ಚಿನ ಐದು ವರ್ಷಗಳಿಗೆ ಪ್ರತಿ ತಿಂಗಳು 3000 ರೂಪಾಯಿಯಂತೆ 20 ವರ್ಷಗಳವರೆಗೆ ಹೂಡಿಕೆ ಮಾಡಿದರೆ, 29,97,444 ರೂಪಾಯಿಯನ್ನು ಪಡೆಯಬಹುದು.

    10 ವರ್ಷದಲ್ಲಿ 15 ಲಕ್ಷದ ಕಾರು ಖರೀದಿ ಹೇಗೆ?
    ನೀವಿಗ 20ರ ದಶಕದ ಆರಂಭದಲ್ಲಿದ್ದರೆ, ಈಗಷ್ಟೇ ಕೆಲಸವನ್ನು ಆರಂಭಿಸಿದ್ದರೆ 30ರ ದಶಕದ ನಡುವೆ ಕಾರನ್ನು ಖರೀದಿಸುವುದು ನಿಮಗೆ ತುಂಬಾ ತಡವಾಗಿರುತ್ತದೆ ಎಂದು ನೀವು ಭಾವಿಸಬಹುದು. ಕೇವಲ 10 ವರ್ಷಗಳಲ್ಲಿ 15 ಲಕ್ಷ ರೂ. ಮೌಲ್ಯದ ಕಾರನ್ನು ಖರೀದಿಸುವ ಟಾರ್ಗೆಟ್​ ಇಟ್ಟುಕೊಂಡರೆ ತಿಂಗಳಿಗೆ 6500 ರೂ. ಹೂಡಿಕೆ ಮಾಡಬೇಕು. ಅಂದರೆ, ದಿನಕ್ಕೆ 200 ರೂ.ಗಿಂತ ಕೊಂಚ ಹೆಚ್ಚ ಹಣವನ್ನು ವ್ಯಯಿಸಬೇಕು. ತಿಂಗಳಿಗೆ 6,500 ರೂ.ನಂತೆ 10 ವರ್ಷಕ್ಕೆ 7,75,200 ರೂ. ಹೂಡಿಕೆ ಮಾಡಿದಂತಾಗುತ್ತದೆ. ಶೆ. 12 ರಷ್ಟು ಬಡ್ಡಿ ಸೇರಿದರೆ 7,25,710 ರೂ. ಲಾಭ ದೊರೆಯಲಿದ್ದು, 10 ವರ್ಷಗಳಲ್ಲಿ ಒಟ್ಟು 15,00,910 ರೂಪಾಯಿ ಆಗಲಿದೆ.

    5 ವರ್ಷಗಳಲ್ಲಿ 15 ಲಕ್ಷದ ಕಾರು ಖರೀದಿ ಹೇಗೆ?
    10 ವರ್ಷಗಳ ನಂತರ ನೀವು ಖರೀದಿಸುವ 15 ಲಕ್ಷ ರೂಪಾಯಿಯ ಕಾರು ನಿಮ್ಮ ನೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿರುವುದಿಲ್ಲ ಎಂದು ನೀವು ಭಾವಿಸಿದರೆ ಮತ್ತು ಕಾರನ್ನು ಖರೀದಿಸುವ ನಿಮ್ಮ ನಿರ್ಧಾರವನ್ನು ಐದು ವರ್ಷಗಳವರೆಗೆ ಇಳಿಸಲು ಇಚ್ಛಿಸಿದರೆ, ವ್ಯವಸ್ಥಿತ ಹೂಡಿಕೆ ಮೂಲಕ ಅದನ್ನು ಹೇಗೆ ಸಾಧಿಸಬಹುದು ಎಂಬುದನ್ನು ನೋಡುವುದಾದರೆ, ಕೇವಲ 5 ವರ್ಷಗಳಲ್ಲಿ 15 ಲಕ್ಷ ರೂ. ಪಡೆಯುವುದಾದರೆ, ತಿಂಗಳಿಗೆ 18,185 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಈ ರೀತಿ ಹೂಡಿಕೆ ಮಾಡಿದರೆ, ನಿಮ್ಮ ಹೂಡಿಕೆ ಹಣ 10,91,100 ರೂ. ಆಗಲಿದೆ, 5 ವರ್ಷಕ್ಕೆ 12 ರಷ್ಟು ಬಡ್ಡಿ ಅಂದರೆ, 4,08,915 ರೂ. ಲಾಭ ಸಿಗಲಿದೆ. ಹೂಡಿಕೆ ಮತ್ತು ಬಡ್ಡಿಯ ಲಾಭ ಸೇರಿ 5 ವರ್ಷಗಳಲ್ಲಿ 15 ಲಕ್ಷ ರೂ. ಪಡೆಯಬಹುದು.

    ಕಡಿಮೆ ಸಮಯದಲ್ಲಿ ಇಷ್ಟು ಹಣ ಹೇಗೆ ಸಂಪಾದಿಸಬಹುದು ಎನ್ನುವುದಾದರೆ, ನೀವು ಮ್ಯೂಚುಯಲ್ ಫಂಡ್‌ಗಳ ಮೇಲೆ ಸಂಯುಕ್ತ ಬಡ್ಡಿಯನ್ನು ಸಹ ಪಡೆಯುತ್ತೀರಿ. ಇದು ದೀರ್ಘಾವಧಿಯಲ್ಲಿ ಕಡಿಮೆ ಹೂಡಿಕೆಯೊಂದಿಗೆ ಹೆಚ್ಚಿನ ಸಂಪತ್ತನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ಹೀಗಾಗಿ ನಮ್ಮ ಹೂಡಿಕೆಯು ಎಷ್ಟೇ ಚಿಕ್ಕದಾಗಿದ್ದರೂ ಹೂಡಿಕೆ ಮಾಡುವುದನ್ನು ತಡೆಯಬಾರದು. ದಿನಕ್ಕೆ 100 ರೂಪಾಯಿಗಳ ಅಲ್ಪ ಮೊತ್ತದ ಹೂಡಿಕೆಯು ಕೆಲವೇ ವರ್ಷಗಳಲ್ಲಿ 15 ಲಕ್ಷ ರೂಪಾಯಿಗಳಷ್ಟು ದುಬಾರಿ ಕಾರನ್ನು ಖರೀದಿಸಲು ಸಾಕಷ್ಟು ಸಂಪತ್ತನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. (ಏಜೆನ್ಸೀಸ್​)

    ಭಾರತವಿಲ್ಲದೆ ಅಂತಾರಾಷ್ಟ್ರೀಯ ಸಮಸ್ಯೆಗಳಿಗೆ ಪರಿಹಾರ ಅಸಾಧ್ಯ: ನಾರ್ವೆ ಉಪ ವಿದೇಶಾಂಗ ಸಚಿವ

    ಕಸಬ್​ನನ್ನು​ ಗುರುತಿಸಿದ ಅಪ್ರಾಪ್ತೆ ಈಗ 24ರ ಯುವತಿ! ದೇವಿಕಾಳ ಹೋರಾಟದ ಬದುಕೇ ಒಂದು ಸ್ಫೂರ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts