More

    20 ದಿನಗಳಲ್ಲಿ ಸಾವಿರಾರು ವೆಂಟಿಲೇಟರ್​ ತಯಾರಿ, ಕೋವಿಡ್​ 19 ವಿರುದ್ಧ ಹೋರಾಟದಲ್ಲಿ ದೇಶದ ಕಾರು ತಯಾರಿಕಾ ಕಂಪನಿಗಳ ಕೊಡುಗೆ

    ನವದೆಹಲಿ: ಕರೊನಾ ಪಿಡುಗಿನ ಹೋರಾಟದಲ್ಲಿ ಸೋಂಕಿತರನ್ನು ಉಸಿರಾಟದ ತೊಂದರೆಯಿಂದ ಪಾರು ಮಾಡಲು ವೆಂಟಿಲೇಟರ್​ಗಳು ತುಂಬಾ ಅಗತ್ಯ. ದೇಶದಲ್ಲಿ ಇಂಥ ವೆಂಟಿಲೇಟರ್​ಗಳ ಕೊರತೆ ಹೆಚ್ಚಾಗಿದ್ದು, ವಿದೇಶದಿಂದ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಆದರೆ, ರಾಷ್ಟ್ರದ ಈ ಸಂಕಷ್ಟವನ್ನು ಅರ್ಥ ಮಾಡಿಕೊಂಡಿರುವ ದೇಶದ ಕಾರು ತಯಾರಿಕಾ ಕಂಪನಿಗಳಾದ ಮಾರುತಿ ಸುಜುಕಿ ಹಾಗೂ ಮಹೀಂದ್ರಾ ಮತ್ತು ಮಹೀಂದ್ರಾ ಕಂಪನಿಗಳು ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿ, ವೆಂಟಿಲೇಟರ್​ಗಳ ಉತ್ಪಾದನೆಗೆ ಮುಂದಾಗಿವೆ.
    ಕಳೆದ 20 ದಿನಗಳ ಅವಧಿಯಲ್ಲಿ ಮಾರುತಿ ಸುಜುಕಿ ಕಂಪನಿ 1,500 ವೆಂಟಿಲೇಟರ್​ಗಳನ್ನು ತಯಾರಿಸಿದೆ. ಅಲ್ಲದೆ, ಕೇಂದ್ರ ಸರ್ಕಾರದಿಂದ ವೆಂಟಿಲೇಟರ್​ಗಳಿಗಾಗಿ ಆರ್ಡರ್​ಗಳನ್ನು ನಿರೀಕ್ಷಿಸುತ್ತಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಮಾರುತಿ ಸುಜುಕಿ ಕಂಪನಿಯ ಚೇರ್ಮನ್​ ಆರ್​.ಸಿ. ಭಾರ್ಗವ, ವೆಂಟಿಲೇಟರ್​ಗಳ ಕೊರತೆ ಇರುವ ಹಿನ್ನೆಲೆಯಲ್ಲಿ ಅವುಗಳನ್ನು ತಯಾರಿಸುವಂತೆ ಕೇಂದ್ರ ಸರ್ಕಾರ ನಮ್ಮನ್ನು ಕೇಳಿತು. ಅದರಂತೆ ನಾವು ವೆಂಟಿಲೇಟರ್​ಗಳನ್ನು ತಯಾರಿಸಿದೆವು. ಸರ್ಕಾರಿ ಸಂಸ್ಥೆ ಎಚ್​ಎಲ್​ಎಲ್​ ಅವುಗಳನ್ನು ಪರಿಶೀಲಿಸಿದೆ. ದುರದೃಷ್ಟವಶಾತ್​ ಸಂಸ್ಥೆ ಇನ್ನೂ ನಮಗೆ ಯಾವುದೇ ವರದಿ ಕಳುಹಿಸಿಲ್ಲ. ಹಾಗಾಗಿ, ಸಿದ್ಧವಾಗಿರುವ ವೆಂಟಿಲೇಟರ್​ಗಳ ದಾಸ್ತಾನಿನೊಂದಿಗೆ ಆರ್ಡರ್​ಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.
    ರಾಷ್ಟ್ರಾದ್ಯಂತ ಲಾಕ್​ಡೌನ್​ ಘೋಷಿಸಿರುವ ಹಿನ್ನೆಲೆಯಲ್ಲಿ ಕಾರು ಮಾರಾಟವೂ ಸ್ಥಗಿತವಾಗಿದೆ. ಹಾಗಾಗಿ ಉತ್ಪಾದನೆಯೂ ಸ್ಥಗಿತವಾಗಿದೆ. ಈ ಅವಕಾಶವನ್ನು ಬಳಸಿಕೊಂಡು ವೆಂಟಿಲೇಟರ್​ಗಳನ್ನು ತಯಾರಿಸುವಂತೆ ಕಾರು ತಯಾರಿಕಾ ಕಂಪನಿಗಳಿಗೆ ಹೇಳಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಗಳು ವೆಂಟಿಲೇಟರ್​ಗಳ ತಯಾರಿಕೆಯಲ್ಲಿ ತೊಡಗಿದ್ದವು.

    ಮಾರುತಿ ಸುಜುಕಿ ಕಂಪನಿ ತಯಾರಿಸಿರುವ ವೆಂಟಿಲೇಟರ್​ಗಳನ್ನು ಗುರುಗ್ರಾಮದ ಮೇದಾಂತಾ ಹಾಸ್ಪಿಟಲ್​ನವರು ಬಳಸಿದ್ದಾರೆ. ಕಳೆದೆರಡು ವಾರಗಳಿಂದ ಇವನ್ನು ಅಲ್ಲಿ ಬಳಸಲಾಗುತ್ತಿದ್ದು, ಅವುಗಳ ಕಾರ್ಯತತ್ಪರತೆ ಬಗ್ಗೆ ಆಸ್ಪತ್ರೆಯ ವೈದ್ಯರು ಸಂತೃಪ್ತರಾಗಿದ್ದಾರೆ. ಹಾಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ವೆಂಟಿಲೇಟರ್​ಗಳನ್ನು ಪೂರೈಸುವಂತೆ ಮನವಿ ಮಾಡಿಕೊಳ್ಳುತ್ತಿರುವುದಾಗಿ ಭಾರ್ಗವ ಹೇಳಿದ್ದಾರೆ.

    ವೆಂಟಿಲೇಟರ್​ಗಳ ತಯಾರಿಕೆಯ ಕಂಪನಿಯ ಸಿಬ್ಬಂದಿ ಅವರ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ವಿವರಿಸಿರುವ ಅವರು, ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಮನೋಭಾವದಲ್ಲಿ ಅವರು ವೆಂಟಿಲೇಟರ್​ಗಳ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಈ ಹಿನ್ನೆಲೆಯಲ್ಲಿ ಅವರೆಲ್ಲರೂ ತಡರಾತ್ರಿಯವರೆಗೂ ಶ್ರಮಪಟ್ಟು ವೆಂಟಿಲೇಟರ್​ಗಳನ್ನು ತಯಾರಿಸಿದರು. ಕೇವಲ 20 ದಿನಗಳಲ್ಲಿ ಶೂನ್ಯದಿಂದ 300 ವೆಂಟಿಲೇಟರ್​ಗಳನ್ನು ಉತ್ಪಾದಿಸಲು ಇದರಿಂದ ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.

    ಲಾಕ್​ಡೌನ್​ ನಡುವೆಯೂ ದೇಶದೆಲ್ಲೆಡೆ ಸಂಚರಿಸುತ್ತಿರುವ ಪಂಜಾಬ್​ ಸರ್ಕಾರಿ ಬಸ್​ಗಳು; ಶಾಪವಲ್ಲ, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಜನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts