More

    ಸೆಪ್ಟೆಂಬರ್​ ತಿಂಗಳಿಂದ ಏರಲಿದೆ, ಮಾರುತಿ ಕಾರುಗಳ ಬೆಲೆ!

    ನವದೆಹಲಿ: ಬರುವ ಸೆಪ್ಟೆಂಬರ್​ ತಿಂಗಳಿಂದ ತನ್ನ ವಿವಿಧ ಮಾಡೆಲ್​ ಕಾರುಗಳ ಬೆಲೆಗಳನ್ನು ಏರಿಸುವುದಾಗಿ ಮಾರುತಿ ಸುಜುಕಿ ಇಂಡಿಯಾ ಕಂಪೆನಿಯು ತಿಳಿಸಿದೆ. ಹಲವು ಇನ್​ಪುಟ್​ ಕಾಸ್ಟ್​ಗಳ ಹೆಚ್ಚಳವಾಗಿರುವ ಕಾರಣದಿಂದ ಕಂಪೆನಿ ಈ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ವರದಿಗಳು ತಿಳಿಸಿವೆ.

    ಯಾವ ಮಾದರಿ ಕಾರಿನ ಮೇಲೆ ಎಷ್ಟು ಏರಿಕೆಯಾಗುತ್ತದೆ ಎಂದು ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಬಗ್ಗೆ ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​ನಲ್ಲಿ ಜೂನ್​​ ತಿಂಗಳಲ್ಲಿ ಸಲ್ಲಿಸಿದ ಹೇಳಿಕೆಯಲ್ಲೂ ಕಂಪೆನಿ ಸುಳಿವು ನೀಡಿತ್ತು.

    ಇದನ್ನೂ ಓದಿ: ಪ್ರತಿದಿನ 5 ಲಕ್ಷ ಲಸಿಕೆ ನೀಡಲು ತೀರ್ಮಾನ; ವಾರಕ್ಕೊಮ್ಮೆ ಲಸಿಕೆ ಉತ್ಸವ!

    “ಕಳೆದ ವರ್ಷದಲ್ಲಿ ವಿವಿಧ ಇನ್​ಪುಟ್​ ಕಾಸ್ಟ್​ಗಳ ಹೆಚ್ಚಳವು ಕಂಪೆನಿಯ ವಾಹನಗಳ ತಯಾರಿಕಾ ವೆಚ್ಚದ ಮೇಲೆ ವಿಪರೀತ ಪ್ರಭಾವ ಬೀರಿದೆ. ಹೀಗಾಗಿ ಈ ಹೆಚ್ಚುವರಿ ವೆಚ್ಚದ ಸ್ವಲ್ಪ ಪ್ರಮಾಣವನ್ನು ಬೆಲೆ ಏರಿಕೆಯ ಮೂಲಕ ಗ್ರಾಹಕರಿಗೆ ವರ್ಗಾಯಿಸುವುದು ಅವಶ್ಯಕವಾಗಿದೆ. ಎಲ್ಲಾ ಮಾಡೆಲ್​ಗಳ ಮೇಲೆ ಸೆಪ್ಟೆಂಬರ್ 2021 ರಿಂದ ಬೆಲೆ ಏರಿಸಲು ಯೋಜಿಸಲಾಗಿದೆ” ಎಂದು ಕಂಪೆನಿ ಹೇಳಿಕೆಯಲ್ಲಿ ತಿಳಿಸಿದೆ ಎನ್ನಲಾಗಿದೆ. (ಏಜೆನ್ಸೀಸ್)

    ನಮ್ಮ ಮೆಟ್ರೊ: ಇಂದಿನಿಂದ ಕೆಂಗೇರಿ ಟರ್ಮಿನಲ್ ಕಾರ್ಯಾರಂಭ; ರೈಲುಗಳ ವಿವರ ಇಲ್ಲಿದೆ

    ಬೆನ್ನುನೋವು ನಿಯಂತ್ರಣಕ್ಕೆ ಮಗುವಿನಂತೆ ಮಲಗುವ ಈ ಸರಳ ಯೋಗಾಸನ ಮಾಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts