More

    ಹುತಾತ್ಮ ಯೋಧನ ಕುಟುಂಬಕ್ಕೆ ನಿವೇಶನ ಹಂಚಿಕೆ: ಕರೊನಾ ಸಂಕಷ್ಟದ ಮಧ್ಯೆ ಅಂತಃಕರಣ ಮೆರೆದ ಮುಖ್ಯಮಂತ್ರಿ

    ಬೆಂಗಳೂರು: ಕರೊನಾ ಸಂಕಷ್ಟದಿಂದಾಗಿ ಬಿಡುವಿಲ್ಲದ ಕೆಲಸಗಳ ಮಧ್ಯೆಯೂ ಹುತಾತ್ಮ ಯೋಧನ ಪತ್ನಿಯ ವೇದನೆಭರಿತ ನಿವೇದನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತುರ್ತಾಗಿ ಸ್ಪಂದಿಸಿ, ಅಂತಃಕರಣ ಮೆರೆದಿದ್ದಾರೆ.

    ಹುತಾತ್ಮ ಯೋಧ ಎ. ಮುನಿಯಪ್ಪನ್ ಕುಟುಂಬಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ಹಂಚಿಕೆಯಾಗಿದ್ದನ್ನು ಯೋಧನ ಪತ್ನಿ ಎಂ. ದೇವಿ ಅವರಿಗೆ ಪತ್ರ ಬರೆದು ತಿಳಿಸಿರುವ ಸಿಎಂ, ಮಂಜೂರಾತಿ ಪತ್ರವನ್ನು ಕಳುಹಿಸಿದ್ದಾರೆ.

    ಸೈನಿಕ ಕಲ್ಯಾಣ ಇಲಾಖೆ ಶಿಾರಸಿನಂತೆ ನಿವೇಶನ ಹಂಚಿಕೆಯಾಗಿದ್ದು, ದೇಶ ಸೇವೆಗೆ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಮುನಿಯಪ್ಪನ್ ಅವರ ತ್ಯಾಗ ಸ್ಮರಣೀಯ ಎಂದು ಬಿಎಸ್‌ವೈ ಹೇಳಿದ್ದು, ನಿವೇಶನ ಹಂಚಿಕೆಯಾಗದೆ ತಾವು ತೊಂದರೆ ಅನುಭವಿಸುತ್ತಿರುವ ವಿಷಯ ತಿಳಿದು ಬಿಡಿಎ ಅಧಿಕಾರಿಗಳಿಂದ ಮಾಹಿತಿ ತರಿಸಿ ಪರಿಶೀಲಿಸಿದಾಗ ನಿವೇಶನ ಹಂಚಿಕೆಯಾಗಿರುವುದು ತಿಳಿದು ಬಂದಿರುತ್ತದೆ ಎಂದಿದ್ದಾರೆ.

    ನಾಗಾಲ್ಯಾಂಡ್‌ನಲ್ಲಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ 24 ವರ್ಷಗಳ ಹಿಂದೆಯೇ ಸಿಪಾಯಿ ಎ. ಮುನಿಯಪ್ಪನ್ ಮೃತಪಟ್ಟಿದ್ದು, ನೀವೂ ಅನಾರೋಗ್ಯಪೀಡಿತವೆಂದು ತಿಳಿದು ಅತ್ಯಂತ ದುಃಖವಾಗಿದೆ. ಭಗವಂತನು ಆಯುರಾರೋಗ್ಯ ನೀಡಿ ರಕ್ಷಿಸಲಿ, ಕುಟುಂಬಕ್ಕೂ ಒಳಿತಾಗಲಿ ಎಂದು ಬಿಎಸ್‌ವೈ ಆತ್ಮಸ್ಥೈರ್ಯ ತುಂಬಿದ್ದಾರೆ.

    ನಿರಂತರ 24 ವರ್ಷಗಳ ಅಲೆದಾಟ:
    ನಾಗಾಲ್ಯಾಂಡ್‌ನಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ‘ಆಪರೇಷನ್ ಆರ್ಕಿಡ್’ ಕಾರ್ಯಾಚರಣೆಯಲ್ಲಿ ಮುನಿಯಪ್ಪನ್ ಭಾಗಿಯಾಗಿದ್ದರು. 1996ರ ಈ ಕಾರ್ಯಾಚರಣೆ ವೇಳೆ 30 ವರ್ಷ ವಯಸ್ಸಿನ ಸಿಪಾಯಿ ಮುನಿಯಪ್ಪನ್‌ಗೆ ಗುಂಡೇಟು ತಗುಲಿ ವೀರಮರಣವನ್ನಪ್ಪಿದ್ದರು. ಈ ಕುಟುಂಬಕ್ಕೆ ನಿವೇಶನ ಮಂಜೂರು ಮಾಡುವಂತೆ ಸೈನಿಕ ಕಲ್ಯಾಣ ಇಲಾಖೆ ಶಿಾರಸು ಮಾಡಿತ್ತು. ಆಗಿನಿಂದಲೂ ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಕಟ್ಟಿಕೊಂಡು ಹುತಾತ್ಮ ಯೋಧನ ಪತ್ನಿ ಎಂ. ದೇವಿ ನಿವೇಶನಕ್ಕಾಗಿ ಅಲೆಯುತ್ತಲೇ ಇದ್ದರು. ಕಳೆದ ಡಿಸೆಂಬರ್‌ನಲ್ಲಿ ರಾಜಭವನದಲ್ಲಿ ಸಿಎಂ ಯಡಿಯೂರಪ್ಪ ಮುಂದೆಯೂ ಅಳಲು ತೋಡಿಕೊಂಡಿದ್ದರು. ಹುತಾತ್ಮ ಯೋಧನ ಪುತ್ರಿಯ ಅಹವಾಲು ಆಲಿಸಿದ ಸಿಎಂ ಸೂಕ್ತ ಕ್ರಮವಹಿಸುವ ಭರವಸೆ ನೀಡಿದ್ದರು.

    ಹುತಾತ್ಮನ ಕುಟುಂಬದ ಸಂಕಟ:
    ವೀರಯೋಧನ ಪತ್ನಿ ಏ. 6ರಂದು ಸಿಎಂಗೆ ಪತ್ರ ಬರೆದು, ಅವರು ಕೊಟ್ಟಿದ್ದ ಭರವಸೆ ನೆನಪಿಸಿದ್ದರು. ಬಿಡಿಎ ಪಟ್ಟಿಯಲ್ಲಿ 30/40 ಅಡಿ ಅಳತೆಯ ನಿವೇಶನ ಮಂಜೂರಾದ ಬಗ್ಗೆ ಹೆಸರಿದ್ದರೂ ಇನ್ನೂ ಹಂಚಿಕೆಯಾಗಿಲ್ಲ. ಹೂ, ಹಣ್ಣು ಮಾರಿಕೊಂಡು ಮೂವರು ಮಕ್ಕಳನ್ನು ಬೆಳೆಸಿದ್ದು, ಕ್ಯಾನ್ಸರ್ ಪೀಡಿತಳಾಗಿ ಕಳೆದ 1 ವರ್ಷದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವೆ. ಮೂವರು ಮಕ್ಕಳು ದುಡಿಯುವುದು ಬಿಟ್ಟು ನನ್ನ ಆರೈಕೆಯಲ್ಲಿ ತೊಡಗಿದ್ದು, ವೈದ್ಯರು ತಿಳಿಸಿದಂತೆ ಕ್ಯಾನ್ಸರ್ ಶ್ವಾಸಕೋಶಕ್ಕೆ ಹರಡಿದೆ. ಮಂಜೂರಾದ ನಿವೇಶವನ್ನು ನಾನು ಕಾಲವಾದ ಬಳಿಕ ನನ್ನ ಮಕ್ಕಳಿಗಾದರೂ ಹಂಚಬೇಕು ಎಂದು ನಿವೇದಿಸಿಕೊಂಡಿದ್ದರು.

    ಗುಣಮುಖರಾದವರಲ್ಲಿ ಮತ್ತೆ ಸೋಂಕು: ತಲೆನೋವು ತಂದ ಕರೊನಾ ವೈರಸ್​ ಹೊಸ ವರಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts