More

    ಪುಟಾಣಿ ಮಕ್ಕಳಿಗೆ ನಾಯಿಯೊಂದಿಗೆ ಮದುವೆ! ಕಾರಣ ಕೇಳಿದರೆ ಗಾಬರಿಯಾಗುತ್ತೀರ

    ಭುವನೇಶ್ವರ: ಮೂಢನಂಬಿಕೆಯಿಂದಾಗಿ ಕತ್ತೆ ಮದುವೆ, ಕಪ್ಪೆ ಮದುವೆಯನ್ನೆಲ್ಲ ಮಾಡುವುದನ್ನು ಕೇಳಿರುತ್ತೀರ. ಆದರೆ ನಾಯಿ ಮದುವೆ ಮಾಡುವುದನ್ನು ಕೇಳಿರುವುದು ಕಷ್ಟಸಾಧ್ಯ. ಅದರಲ್ಲೂ ಮನೆಯಂಗಳದಲ್ಲಿ ಆಡಿಕೊಂಡಿರುವ ಮಕ್ಕಳಿಗೆ ನಾಯಿಯೊಂದಿಗೆ ಮದುವೆ ಮಾಡುವುದೆಂದರೆ?

    ಇದನ್ನೂ ಓದಿ: ಬೆಣ್ಣೆಹೊಳೆ ಫಾಲ್ಸ್​ ಬಳಿ ಪ್ರೇಮಿಗಳಿಬ್ಬರ ಶವ ಸಿಕ್ಕ ಮರುದಿನವೇ ಪ್ರಿಯಕರನ ತಂದೆ ಸಾವು! ಮನಕಲಕುತ್ತೆ ಸಾವಿನ ಕಾರಣ

    ಆಶ್ಚರ್ಯ ಎನಿಸಿದರೂ ಇದು ಸತ್ಯವೇ. ಇಂತದ್ದೊಂದು ಮೂಢನಂಬಿಕೆ ಒಡಿಶಾದ ಮಯೂರ್ಭಂಜ್​ನಲ್ಲಿ ಅನುಸರಿಸಲಾಗುತ್ತಿದೆ. ಅಲ್ಲಿನ ಗಂಭರಿಯಾ ಗ್ರಾಮದ ಬುಡಕಟ್ಟು ಸಮುದಾಯದಲ್ಲಿ ಇತ್ತೀಚೆಗೆ ಇಬ್ಬರು ಸಣ್ಣ ಮಕ್ಕಳಿಗೆ ನಾಯಿಯೊಂದಿಗೆ ಮದುವೆ ಮಾಡಲಾಗಿದೆ. ಈ ಸುದ್ದಿ ಎಲ್ಲೆಡೆ ಹರಿದಾಡಿದೆ.

    ಅಷ್ಟಕ್ಕೂ ಈ ರೀತಿ ನಾಯಿಯೊಂದಿಗೆ ಮದುವೆ ಮಾಡುವುದಕ್ಕೂ ಒಂದು ಕಾರಣವಿದೆಯಂತೆ. ಮದುವೆ ಮಾಡಲಾಗಿರುವ ಇಬ್ಬರೂ ಮಕ್ಕಳಿಗೆ ಬೇಗ ಹಲ್ಲು ಹುಟ್ಟಿದೆಯಂತೆ. ಅದು ಅವರ ಪ್ರಕಾರ ಒಳ್ಳೆಯದಲ್ಲವಂತೆ. ಹಾಗಾಗಿ ಮಕ್ಕಳ ಮೇಲಿನ ದುಷ್ಟ ಶಕ್ತಿಯ ಕಣ್ಣು ಹೋಗಲೆಂದು, ಅವರಿಗೆ ಅಂಟಿಕೊಂಡಿರುವ ದರಿದ್ರ ದೂರಾಗಲೆಂದು ಈ ರೀತಿ ನಾಯಿಯೊಂದಿಗೆ ಮದುವೆ ಮಾಡಿಸಲಾಗಿದೆಯಂತೆ.

    ಇದನ್ನೂ ಓದಿ: ಶವ ಸಾಗಿಸುತ್ತಿದ್ದ ಆಂಬ್ಯುಲೆನ್ಸ್‌ ಅಪಘಾತ: ಚಾಲಕ, ಕುಟುಂಬಸ್ಥರು ಸೇರಿ ಐವರ ಸಾವು

    ಪುಟಾಣಿ ಮಕ್ಕಳಿಗೆ ನಾಯಿಯೊಂದಿಗೆ ಮದುವೆ! ಕಾರಣ ಕೇಳಿದರೆ ಗಾಬರಿಯಾಗುತ್ತೀರ
    ಈ ಕುರಿತಾಗಿ ಮಾತನಾಡಿರುವ ಮಯೂರ್​ಭಂಜ್​ ಪೊಲೀಸ್ ವರಿಷ್ಠಾಧಿಕಾರಿ ಸ್ಮಿತ್ ಪರ್ಮಾರ್, “ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದೇವೆ. ಈ ರೀತಿಯ ಮೂಢನಂಬಿಕೆಗಳನ್ನು ತಡೆಯಲು ಜಿಲ್ಲಾಧಿಕಾರಿಗಳ ಜತೆ ಸೇರಿ ಕೆಲ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು” ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ಕೊನೆಗೂ ಸಾವಿನ ಮನೆಯ ಕದ ತಟ್ಟಿದ ನಟಿ ಜಯಶ್ರೀ! ಕಳೆದ 7 ತಿಂಗಳಲ್ಲಿ ಆಕೆ ಅನುಭವಿಸಿದ್ದ ನರಕಯಾತನೆ ಇಲ್ಲಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts