More

    ಮದುವೆಗೆ ಒಲ್ಲೆ ಎಂದವಳನ್ನು ಹೊತ್ತೊಯ್ದ ದುಷ್ಕರ್ಮಿಗೆ ಯುವತಿ ಚಳ್ಳೆಹಣ್ಣು ತಿನ್ನಿಸಿದ್ದೇ ರೋಚಕ!

    ಹೊಳೆನರಸೀಪುರ: ಮದುವೆಯಾಗಲು ನಿರಾಕರಿಸಿದ ಯುವತಿಯನ್ನು ಯುವಕನೊಬ್ಬ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಬೆದರಿಸಿದ್ದಲ್ಲದೆ, ಆಕೆಯನ್ನು ಅಪಹರಿಸಿಕೊಂಡು ಕಾರಿನಲ್ಲಿ ಹೊರಟೇ ಹೋದ. ಮಾರ್ಗ ಮಧ್ಯೆ ಹುಡುಗಿ ಮಾಡಿದ್ಲು ನೋಡಿ ಚಮತ್ಕಾರ… ಎದ್ನೋ ಬಿದ್ನೋ ಎಂದು ದುಷ್ಕರ್ಮಿಗಳ ತಂಡ ಅಲ್ಲಿಂದ ಕಾಲ್ಕಿತ್ತಿದೆ.
    ಹಳ್ಳಿ ಮೈಸೂರು ಹೋಬಳಿಯ ರಂಗೇನಹಳ್ಳಿಯ ಯುವತಿಯೊಬ್ಬಳು ಸಮಯಪ್ರಜ್ಞೆ ತೋರಿ ಅಪಹರಣಕಾರರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡು ಬಂದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ರಂಗೇನಹಳ್ಳಿಯ ಲೋಕೇಶ್​ ಅವರ 19 ವರ್ಷದ ಪುತ್ರಿಯನ್ನು ಕೆ.ಆರ್​.ಪೇಟೆ ತಾಲೂಕಿನ ಮಂದಗೆರೆ ಗ್ರಾಮ ಸಮೀಪದ ಕಾಳೇನಹಳ್ಳಿಯ ಚಿಕ್ಕ ಈರೇಗೌಡರ ಪುತ್ರ ಪ್ರತಾಪ್​(25) ವಿವಾಹವಾಗಲು ನೋಡಿದ್ದ. ಆದರೆ, ಯುವತಿ ಮದುವೆಗೆ ಒಪ್ಪಿರಲಿಲ್ಲ, ಇದರಿಂದ ಕುಪಿತನಾಗಿದ್ದ ಪ್ರತಾಪ್​, ಸಂಚು ರೂಪಿಸಿ ಸ್ನೇಹಿತರ ಸಹಾಯದಿಂದ ಸೆ.29ರಂದು ಯುವತಿಯ ಮನೆಯಿಂದ ಆಕೆಯನ್ನು ಮಾರಕಾಸ್ತ್ರಗಳಿಂದ ಹೆದರಿಸಿ ಅಪಹರಿಸಿದ್ದ.

    ಇದನ್ನೂ ಓದಿರಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು: ಸ್ಫೋಟಕ ಹೇಳಿಕೆ ನೀಡಿದ್ಲು ಶಿವಾನಂದ ವಾಲಿ ಪತ್ನಿ

    ನಂತರ ಕೆ.ಆರ್​.ಪೇಟೆಯಲ್ಲಿ ಕಾರನ್ನು ಬದಲಿಸಿ, ಹುಣಸೂರು ರಸ್ತೆಯಲ್ಲಿ ತೆರಳಿದ್ದ. ಹುಣಸೂರು ಸಮೀಪದ ಕೆ.ಬಿ.ಕೊಪ್ಪಲು ಬಳಿ ತೆರಳುವಾಗ ಯುವತಿ ಶೌಚಗೃಹಕ್ಕೆ ಹೋಗಬೇಕು ಎಂದು ಚೀರಾಡಿದ್ದಾಳೆ. ಅಪಹರಣಕಾರರ ತಂಡ ಗ್ರಾಮದಲ್ಲಿದ್ದ ಸಂಬಂಧಿಕರ ಮನೆಗೆ ಬಿಟ್ಟಿದ್ದಾರೆ. ಯುವತಿ ತಂದೆಗೆ ಫೋನ್​ ಮಾಡಬೇಕು, ಮೊಬೈಲ್​ ಕೊಡಿ ಎಂದು ಆ ಮನೆಯವರನ್ನು ಕೋರಿದ್ದಳು. ಆದರೆ ಮನೆಯವರು ನಿರಾಕರಿಸಿದಾಗ ಸಮಯಪ್ರಜ್ಞೆ ತೋರಿದ ಯುವತಿ, ಎದುರು ಮನೆಗೆ ಓಡಿಹೋಗಿ ಬಾಗಿಲು ಹಾಕಿಕೊಂಡು ಮನೆಯವರಿಗೆ ವಿಷಯ ತಿಳಿಸಿದಳು.

    ಆ ಮನೆಯ ಯುವಕನೊಬ್ಬ ಈ ಕೃತ್ಯ ಖಂಡಿಸಿ ಪ್ರಶ್ನಿಸಲು ಹೋದ ಸಂದರ್ಭದಲ್ಲಿ ಅವರಿಗೂ ಮಾರಕಾಸ್ತ್ರದಿಂದ ಬೆದರಿಸಿದ ಪ್ರತಾಪ್​, ಅಕ್ಕಪಕ್ಕದ ಮನೆಯ ಜನರು ಹೊರ ಬರುವುದನ್ನು ಕಂಡು ಯುವತಿಯನ್ನು ಅಲ್ಲೇ ಬಿಟ್ಟು ಸ್ನೇಹಿತರೊಂದಿಗೆ ಪರಾರಿಯಾಗಿದ್ದಾನೆ. ಯುವತಿಯ ಸಮಯಪ್ರಜ್ಞೆ ಮತ್ತು ಆಕೆಯ ಸಹಾಯಕ್ಕೆ ಬಂದ ಯುವಕನ ದಿಟ್ಟತನ ಹಾಗೂ ಗ್ರಾಮಸ್ಥರ ಸಹಕಾರದಿಂದ ಯುವತಿ ಸುರಕ್ಷಿತವಾಗಿ ಮನೆ ಸೇರಿದ್ದಾಳೆ.

    ಯುವತಿಯ ತಂದೆ ಲೋಕೇಶ್​ ನೀಡಿರುವ ದೂರಿನ ಅನ್ವಯ ಹಳ್ಳಿಮೈಸೂರು ಠಾಣೆಯಲ್ಲಿ 17 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

    ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಮೊಬೈಲ್​ಗಳು ಸ್ವಿಚ್​ ಆಫ್​ ಆಗಿದೆ. ಆರೋಪಿಗಳಿಗೆ ಸಹಕಾರ ನೀಡಿದ ಕ್ವಾಟಳ್ಳಿ ಶ್ರೀನಿವಾಸನನ್ನು ಬಂಧಿಸಲಾಗಿದೆ ಎಂದು ಹಳ್ಳಿಮೈಸೂರು ಗ್ರಾಮಾಂತರ ಠಾಣೆ ಪಿಎಸ್ಸೆ ರಾಜಪ್ಪ ತಿಳಿಸಿದ್ದಾರೆ.

    PHOTO GALLERY| ಚಿರು ಫೋಟೋ ಇಟ್ಟುಕೊಂಡು ಸೀಮಂತ ಶಾಸ್ತ್ರ ಮಾಡಿಸಿಕೊಂಡ ಮೇಘನಾ ರಾಜ್​

    ನನ್ನ ಮಗನನ್ನು ಅವರ ಮನೆಯಲ್ಲೇ ಕೂರಿಸಿಕೊಳ್ಳಲಿ… ನಮಗೆ ಊಟ ಕೊಟ್ಟರೆ ಸಾಕೆಂದ ಡಿಕೆಶಿ ತಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts