More

    ಮದುವೆಯಾಗುವುದಾಗಿ ನಂಬಿಸಿ ಯುವತಿಗೆ 13.55 ಲಕ್ಷ ರೂ. ವಂಚನೆ

    ಶಿವಮೊಗ್ಗ: ಒಕ್ಕಲಿಗ ಮ್ಯಾಟ್ರೋಮೊನಿಯಲ್ಲಿ ಪರಿಚಿತನಾದ ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಬರೋಬ್ಬರಿ 13.55 ಲಕ್ಷ ರೂ. ವಂಚಿಸಿದ್ದಾನೆ.
    ಚಿಕ್ಕಮಗಳೂರು ಜಿಲ್ಲೆ ತರಿಕೆರೆ ವಿನಾಯಕನಗರದ ವಂಚನೆಗೆ ಒಳಗಾದ ಯುವತಿ. ಈಕೆ ಶಿವಮೊಗ್ಗದಲ್ಲಿ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು ಜು.24ರಂದು ಮದುವೆ ಆಗುವ ಉದ್ದೇಶದಿಂದ ಮ್ಯಾಟ್ರೋಮನಿಯಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಬೆಂಗಳೂರಿನ ವಿಜಯ್‌ರಾಜ್ ಗೌಡ ಎಂಬಾತನ ಪ್ರೋಫೈಲ್ ಸಿಕ್ಕಿತ್ತು. ಅದಕ್ಕೆ ಯುವತಿ ರಿಕ್ವೆಸ್ಟ್ ಕಳುಹಿಸಿದ್ದಳು.
    ರಿಕ್ವೆಟ್ಸ್ ಕಳುಹಿಸಿದ ಒಂದು ಗಂಟೆಯಲ್ಲೇ ಪ್ರೋಫೈಲ್ ಇಷ್ಟವಾಗಿದ್ದು ಮೊಬೈಲ್ ನಂಬರ್ ಕಳುಹಿಸುವಂತೆ ಹೇಳಿದ್ದ. ಈ ವೇಳೆ ಇಬ್ಬರ ನಡುವೆ ಪರಸ್ಪರ ಪರಿಚಯವಾಗಿ ಮೊಬೈಲ್ ನಂಬರ್‌ಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಮಾಡಲು ಶುರು ಮಾಡಿದ್ದರು. ಆ.5ರಂದು ಕರೆ ಮಾಡಿದ್ದ ವಿಜಯ್‌ರಾಜ್ ಗೌಡ ತನ್ನ ಮನೆ ಮತ್ತು ಕಚೇರಿ ಮೇಲೆ ಐಟಿ ದಾಳಿಯಾಗಿದೆ. ಹಾಗಾಗಿ ತಕ್ಷಣ ಹಣ ಬೇಕಾಗಿದೆ. ವಾಪಸ್ ನೀಡುವುದಾಗಿ ನಂಬಿಸಿದ್ದ.
    ಯುವತಿ ಆತ ಹೇಳಿದಂತೆ ಆ.5ರಿಂದ 22ರವರೆಗೆ ಹಂತ ಹಂತವಾಗಿ 13.55 ಲಕ್ಷ ರೂ.ನ್ನು ಆತ ಹೇಳಿದ್ದ ಖಾತೆಗೆ ಜಮಾ ಮಾಡಿದ್ದಳು. ಪುನಃ ಹಣಕ್ಕೆ ಬೇಡಿಕೆ ಇಟ್ಟಾಗ ಹಣ ಕೊಡಲು ನಿರಾಕರಿಸಿದ್ದರು. ಆನಂತರ ಕರೆ ಸ್ವೀಕರಿಸದೇ ಇದ್ದಾಗ ಸ್ನೇಹಿತರೊಂದಿಗೆ ಚರ್ಚಿಸಿ ಸೈಬರ್‌ಕ್ರೈಂಗೆ ಹಣ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts