More

    ಪ್ರೇಕ್ಷಕರಿಲ್ಲದ ಕ್ರಿಕೆಟ್, ವಧುವಿಲ್ಲದ ಮದುವೆಯಂತೆ!

    ಲಾಹೋರ್: ಕ್ರೀಡಾ ಚಟುವಟಿಕೆಗಳನ್ನು ಪುನರಾರಂಭ ಮಾಡುವ ಮೊದಲ ಹಂತದಲ್ಲಿ ಪ್ರೇಕ್ಷಕರ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡಲಾಗುತ್ತಿಲ್ಲ. ಖಾಲಿ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ಆಯೋಜಿಸುವ ಚಿಂತನೆಗೆ ಈಗಾಗಲೆ ಕೆಲ ಹಾಲಿ-ಮಾಜಿ ಕ್ರಿಕೆಟಿಗರು ಬೆಂಬಲವನ್ನೂ ನೀಡಿದ್ದಾರೆ. ಆದರೆ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಮಾತ್ರ ಇದಕ್ಕೆ ಅಪಸ್ವರ ಎತ್ತಿದ್ದಾರೆ. ‘ಖಾಲಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವುದೆಂದರೆ, ಮದುಮಗಳು ಇಲ್ಲದೆ ಮದುವೆ ನಡೆಸಿದಂತೆ’ ಎಂದು ಅವರು ಹಾಸ್ಯ ಮಾಡಿದ್ದಾರೆ.

    ಇದನ್ನೂ ಓದಿ: ಬಾಹುಬಲಿಯಾದ ಡೇವಿಡ್ ವಾರ್ನರ್….!

    ‘ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸುವುದು ಈಗ ಕಾರ್ಯಸಾಧ್ಯವಾಗುವುದು. ಕ್ರಿಕೆಟ್ ಮಂಡಳಿಗಳಿಗೂ ಇದು ಅನಿವಾರ‌್ಯವಾಗಿದೆ. ಆದರೆ ಇದನ್ನು ಮಾರುಕಟ್ಟೆ ಮಾಡುವುದು ಕಷ್ಟ. ಪಂದ್ಯಗಳನ್ನು ಆಡಬೇಕಾದರೆ ಪ್ರೇಕ್ಷಕರು ಇರುವುದು ಅಗತ್ಯ. ಕರೊನಾ ಭೀತಿ ಒಂದು ವರ್ಷದೊಳಗೆ ನಿವಾರಣೆಯಾಗುವ ನಿರೀಕ್ಷೆಯಲ್ಲಿದ್ದೇನೆ’ ಎಂದು ಅಖ್ತರ್ ಹಲೋ ಲೈವ್ ಮಾತುಕತೆಯ ವೇಳೆ ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ: ಪ್ರೇಕ್ಷಕರ ಬದಲಿಗೆ ಸೆಕ್ಸ್ ಡಾಲ್! ಕೊರಿಯಾ ಫುಟ್‌ಬಾಲ್ ಸ್ಟೇಡಿಯಂನಲ್ಲಿ ವಿವಾದ

    ಈ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಪ್ರೇಕ್ಷಕರಿಲ್ಲದೆ ಪಂದ್ಯಗಳನ್ನು ಆಡಿದರೆ ಎಂದಿನ ಮ್ಯಾಜಿಕ್ ಸೃಷ್ಟಿಸುವುದು ಕಷ್ಟ. ಪ್ರೇಕ್ಷಕರ ಎದುರು ಆಡುವ ಮಜಾವೇ ವಿಶೇಷವಾದುದು ಎಂದು ಅಭಿಪ್ರಾಯಪಟ್ಟಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts