More

    ಷೇರುಪೇಟೆಯಲ್ಲಿ ಇದ್ದಕ್ಕಿದ್ದಂತೆ ಭಾರಿ ಜಿಗಿತ ಆಗಿದ್ದೇಕೆ ಗೊತ್ತೇ?; ಷೇರುಪೇಟೆ ಪರಿಣತ ಕೆ.ಜಿ.ಕೃಪಾಲ್ ಇದೀಗ ವಿಜಯವಾಣಿ ಕ್ಲಬ್​ನಲ್ಲಿ…

    ಬೆಂಗಳೂರು: ಷೇರುಪೇಟೆ ಸೂಚ್ಯಂಕ ಇತ್ತೀಚೆಗೆ 60 ಸಾವಿರ ದಾಟಿದ ಹಿನ್ನೆಲೆಯಲ್ಲಿ ಷೇರುಪೇಟೆ ಪರಿಣತ ಕೆ.ಜಿ.ಕೃಪಾಲ್​ ಷೇರು ಮಾರುಕಟ್ಟೆಯ ಸಮಗ್ರ ಚಿತ್ರಣವನ್ನು ಇದೀಗ ವಿಜಯವಾಣಿ ಕ್ಲಬ್​ನಲ್ಲಿ ಕಟ್ಟಿಕೊಡುತ್ತಿದ್ದಾರೆ. ಮಾತ್ರವಲ್ಲ ಷೇರುಪೇಟೆಯ ರಿಸ್ಕ್​, ಹೂಡಿಕೆಯಲ್ಲಿನ ಎಚ್ಚರಿಕೆ, ಲಾಭದ ಸಾಧ್ಯತೆ ಇತ್ಯಾದಿ ಬಗ್ಗೆಯೂ ತಮ್ಮ ಅನುಭವ-ಅನಿಸಿಕೆ ಹಂಚಿಕೊಳ್ಳಲಿದ್ದಾರೆ.

    ಮೊದಲೆಲ್ಲ ಹೂಡಿಕೆ ಎಂದರೆ ಅಲ್ಲಿ ಸ್ವಾರ್ಥಕ್ಕೆ ಆದ್ಯತೆ ಇರುತ್ತಿರಲಿಲ್ಲ. ಅದೊಂಥರ ಸರ್ಕಸ್​ ಅಖಾಡ ಥರ, ಅಲ್ಲಿ ಪ್ರಾಣಿಗಳಿಂದ ರಕ್ಷಣೆಗಾಗಿ ಒಂದು ಮೆಟಾಲಿಕ್ ರಿಂಗ್ ಇಡುತ್ತಿದ್ದರು. ಆದರೆ ಈಗಿನ ಹೂಡಿಕೆಗಳಲ್ಲಿ ಸ್ವಾರ್ಥಕ್ಕೆ ಮೊದಲ ಸೇವೆ ಎಂಬಂತಾಗಿದೆ. ಇದೊಂಥರ ನಾವು ಬನ್ನೇರುಘಟ್ಟ ಝೂನಲ್ಲಿ ಇದ್ದ ಹಾಗೆ. ಇಲ್ಲಿ ನಾವೇ ಬೌಂಡರಿ ಹಾಕಿಕೊಳ್ಳಬೇಕು. ಏನೇ ಸುರಕ್ಷೆ ಇದ್ದರೂ ಹೂಡಿಕೆದಾರರ ಮೇಲೆಯೇ ಹೆಚ್ಚಿನ ಜವಾಬ್ದಾರಿ ಇರುತ್ತದೆ ಎಂದು ಕೃಪಾಲ್ ಅಭಿಪ್ರಾಯ ಪಟ್ಟಿದ್ದಾರೆ.

    ಇದನ್ನೂ ಓದಿ: ಐನೂರು ವರ್ಷದ ಸೊಸೆಯಂದಿರ ಬಾವಿಯಲ್ಲಿ ಈಜಲು ಹೋಗಿ ಸಾವಿಗೀಡಾದ ಬಾಲಕ!

    ಕರೊನಾ ಮೊದಲ ಅಲೆಯಲ್ಲಿ ಜನರು ಹೆದರಿದ್ದರೂ ಷೇರುಪೇಟೆ ಚುರುಕಾಗಿತ್ತು. ಷೇರುಪೇಟೆ ಓಪನ್ ಇತ್ತು. 2020ರ ಜುಲೈನಲ್ಲಿ 5.2 ಕೋಟಿ ನೋಂದಾಯಿತ ಗ್ರಾಹಕರಿದ್ದರು. ಈಗ 8.18 ಕೋಟಿ ನೋಂದಾಯಿತ ಗ್ರಾಹಕರಿದ್ದಾರೆ. ಈಗ ಹೂಡಿಕೆದಾರರ ಪ್ರಮಾಣ ಶೇ. 55ರಷ್ಟು ಏರಿಕೆ ಕಂಡಿದೆ. ಇವರಿಂದ ಬಂದ ಹೂಡಿಕೆಯೂ ಷೇರುಪೇಟೆಯಲ್ಲಿನ ಏರಿಕೆಗೂ ಕಾರಣವಾಗಿವೆ. ಸರ್ಕಾರಿ ಯೋಜನೆಗಳಿಂದ ಹರಿದಾಡುವ ಹಣವೂ ಹೆಚ್ಚಾಗಿದೆ. ಕಾರ್ಪೋರೇಟ್ ಕಾರ್ಯಕ್ಷಮತೆ ಕೂಡ ಉತ್ತಮ ಚೇತರಿಕೆ ಕಂಡಿದೆ ಎಂದು ಸೂಚ್ಯಂಕ ಏರಿಕೆಗೆ ಕಾರಣಗಳನ್ನು ತಿಳಿಸಿದ ಅವರು, ಷೇರುಪೇಟೆ ಬಗ್ಗೆ ಚುಟುಕಾಗಿ ಹೇಳುವುದು ಕಷ್ಟ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ; ನೇಣಿಗೆ ಕೊರಳೊಡ್ಡಿದ ಸಹಾಯಕ ಸಬ್​ ಇನ್​​ಸ್ಪೆಕ್ಟರ್!​

    ಷೇರುಪೇಟೆ ಬಗ್ಗೆ ಅವರು ಹಲವಾರು ವಿಷಯಗಳನ್ನು ಹಂಚಿಕೊಳ್ಳುತ್ತಿದ್ದು ನೀವೂ ಅವರ ಮಾತನ್ನು ಕೇಳಬಹುದು, ಅವರೊಂದಿಗೆ ಮಾತನಾಡಲೂ ಬಹುದು. ಸಂವಾದಕ್ಕೆ ಸೇರಿಕೊಳ್ಳಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

    https://www.clubhouse.com/join/vijayavani/vXfE6UZ8/PrbVpXLW

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts