More

    ಮಾರ್ಕಂಡೇಯ ನದಿಗೆ ಚೆಕ್ ಡ್ಯಾಂ

    ಗೋಕಾಕ: ಬೃಹತ್ ನೀರಾವರಿ ಇಲಾಖೆಯಿಂದ ಗೋಕಾಕ ಹೊರವಲಯದಲ್ಲಿರುವ ಮಾರ್ಕಂಡೇಯ ನದಿಗೆ 250 ಕೋಟಿ ರೂ. ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

    ನಗರ ಹೊರವಲಯದ ಗಟ್ಟಿ ಬಸವಣ್ಣ ಮಲ್ಟಿಪರ್ಪಸ್ ಯೋಜನೆಯ ಸ್ಥಳ ಪರಿಶೀಲಿಸಿದ ಬಳಿಕ ಅವರು ಮಾತನಾಡಿ, ಈ ಯೋಜನೆ ನನ್ನ ಕನಸಾಗಿದ್ದು, ಸರ್ಕಾರದಿಂದ ಮಂಜೂರಾತಿ ದೊರೆತಿದೆ. ಶೀಘ್ರ ಕಾಮಗಾರಿ ಆರಂಭಿಸಲಾಗುವುದು. ಈ ಯೋಜನೆಯಿಂದ ನಗರಕ್ಕೆ ಕುಡಿಯುವ ನೀರು ಹಾಗೂ ಏತ ನೀರಾವರಿ ಮೂಲಕ ಕೃಷಿ ಜಮೀನುಗಳಿಗೆ ನೀರು ಕಲ್ಪಿಸಲಾಗುವುದು ಎಂದರು.

    ಗೋಕಾಕ ನಗರದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಪುರುಷ ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ಈಜುಕೊಳ ಸೌಲಭ್ಯವುಳ್ಳ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗುವುದು. ಸುಕ್ಷೇತ್ರ ಯೋಗಿಕೊಳ್ಳಕ್ಕೆ ಮೂಲಸೌಲಭ್ಯ ಕಲ್ಪಿಸಿ, ಯಾತ್ರಾ ಸ್ಥಳ ಮಾಡಲಾಗುವುದು. ಅಭಿವೃದ್ಧಿಯೇ ನನ್ನ ಗುರಿಯಾಗಿದ್ದು, ಜನತೆ ಸಲಹೆ, ಸೂಚನೆ ನೀಡಬೇಕು ಎಂದು ಕೋರಿದರು.

    ರಾಜ್ಯ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಸಚಿವರ ಆಪ್ತ ಕಾರ್ಯದರ್ಶಿ ರುದ್ರಯ್ಯ, ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ, ಎಇಇ ಸಿದ್ರಾಮ ಕೊಟಬಾಗಿ ಹಾಗೂ ಬೃಹತ್ ಮತ್ತು ಸಣ್ಣ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಪಂ ಸದಸ್ಯರು, ನಗರಸಭೆ ಸದಸ್ಯರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts