More

    ಕರುನಾಡಿನ ಸಂಸ್ಕೃತಿ ಪಸರಿಸುವುದು ಎಲ್ಲರ ಕರ್ತವ್ಯ: ಬಿಎಂಎಂ ಕಂಪನಿ ಉಪಾಧ್ಯಕ್ಷ ಮನೀಷ್ ವಣೇಕರ್ ಅಭಿಪ್ರಾಯ

    ಮರಿಯಮ್ಮನಹಳ್ಳಿ: ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ. ಇದರಿಂದ ಕನ್ನಡಿಗನು ಗರ್ವದಿಂದ ಕನ್ನಡವನ್ನು ಕಟ್ಟುವ ಛಲ ಹೊಂದಬೇಕು ಎಂದು ಬಿಎಂಎಂ ಕಂಪನಿ ಉಪಾಧ್ಯಕ್ಷ ಮನೀಷ್ ವಣೇಕರ್ ಹೇಳಿದರು.

    ಸಮೀಪದ ಬಿಎಂಎಂ ಕಂಪನಿ ಆವರಣದಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಕೋಠಿ ಕಂಠ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ನಾಡು, ನುಡಿ, ಜಲ ಉಳಿವಿಗಾಗಿ ಶತಮಾನಗಳಿಂದಗಲೂ ಹೋರಾಟಗಳು ನಡೆದಿವೆ. ಗಡಿ ಪ್ರದೇಶಗಳಲ್ಲಿ ಕನ್ನಡವನ್ನು ಅವಮಾನಿಸುವ ಕೃತ್ಯಗಳು ಈಗಲೂ ನಡೆಯುತ್ತಿದ್ದು, ಕನ್ನಡ ಕಟ್ಟಾಳುಗಳು ತಮ್ಮ ಪ್ರಾಣವನ್ನು ಲೆಕ್ಕಿಸದೆ ಗಡಿಯಲ್ಲಿ ಕನ್ನಡ ಕಂಪನ್ನು ಪಸರಿಸುವ ಕೆಲಸ ಮಾಡುತ್ತಿದ್ದಾರೆ. ಕರುನಾಡಿನ ಸಾಂಸ್ಕೃತಿಕ, ಸಾಹಿತ್ಯ ಜಗತ್ತಿನಾದ್ಯಂತ ಹರಡಿದೆ. ಇದನ್ನು ಉಳಿಸಿ ಬೆಳೆಸುವ ಕೆಲಸ ಪ್ರತಿಯೊಬ್ಬರೂ ಮಾಡಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ಮಾನವ ಸಂಪನ್ಮೂಲ ಅಧಿಕಾರಿ ಗಣೇಶ ಹೆಗಡೆ ಮಾತನಾಡಿ, ಕನ್ನಡದ ಮಹತ್ವವನ್ನು ಹೆಚ್ಚಿಸಲು ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪೂರ್ವದಲ್ಲಿ ಕೋಟಿ ಕಂಠ ಗಾಯನ ಆಯೋಜನೆಗೆ ಆದೇಶಿಸಿರುವುದು ಶ್ಲಾಘನೀಯ. ನಮ್ಮಲ್ಲಿ ಹೆಚ್ಚು ಕೈಗಾರಿಕೆಗಳು ಇರುವುದರಿಂದ ಪ್ರತಿಯೊಬ್ಬರೂ ಕನ್ನಡದಲ್ಲಿ ಮಾತನಾಡುವುದು, ವ್ಯವಹರಿಸುವುದು ಸೇರಿದಂತೆ ಇತರೆ ಎಲ್ಲ ಕಾರ್ಯಗಳನ್ನು ಮಾಡುವುದರ ಮೂಲಕ ಕನ್ನಡದ ಋಣ ತೀರಿಸಬೇಕು ಎಂದರು.

    ದಾಸ್ ಗುಪ್ತಾ, ಕುಮಾರ್ ಅಂಗಡಿ, ಪ್ರಶಾಂತ್ ಕುಮಾರ್, ಭಾಸ್ಕರ್ ರಾವ್, ಸತೀಶ್‌ಗೌಡ, ಮಹಾಬಲೇಶ್ವರ, ಜಹಾಂಗೀರ್, ವಂಶಿಕೃಷ್ಣ, ಜೆ.ನಂದೀಶ್, ಮಲ್ಲನಗೌಡ, ಬಾಬಾ ಸಾಹೇಬ್, ವಿಲಾಶ್ ಘೆವಡೆ, ಆರ್.ವಿ.ಡೇವಿಡ್, ಮಮತಾ, ಮಾಳವಿಕಾ, ಗೌರಿ, ಡಿ.ಬಿ.ನಾಯ್ಕ್, ಮಾರುತಿ, ಎಂ.ವಿ.ಶೇಶು, ಶ್ರೀನಿವಾಸ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts