More

    ಟೋಕಿಯೊ ಒಲಿಂಪಿಕ್ಸ್​ನಿಂದ ಹೊರಬಿದ್ದ ಸ್ಟಾರ್​ ಷಟ್ಲರ್​, ಪಿವಿ ಸಿಂಧುಗಿದೆ ಸ್ವರ್ಣ ಗೆಲುವಿನ ಅವಕಾಶ..

    ಮ್ಯಾಡ್ರಿಡ್​: ಹಾಲಿ ಒಲಿಂಪಿಕ್​ ಚಾಂಪಿಯನ್​ ಸ್ಪೇನ್​ನ ಕ್ಯಾರೊಲಿನಾ ಮರಿನ್​ ಮುಂಬರುವ ಟೋಕಿಯೊ ಒಲಿಂಪಿಕ್ಸ್​ನಿಂದ ಹೊರಗುಳಿಯವುದಾಗಿ ಪ್ರಕಟಿಸಿದ್ದಾರೆ. 27 ವರ್ಷದ ಮರಿನ್​ ಮುಂದಿನ ವಾರ ಮೊಣಕಾಲು ನೋವಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಹೀಗಾಗಿ ಟೋಕಿಯೋ ಒಲಿಂಪಿಕ್ಸ್​ನಿಂದ ಹೊರುಗುಳಿಯುವುದೇ ಸೂಕ್ತ ಎಂದು ಹೇಳಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಮರಿನ್​, ಕಳೆದ ವಾರ ವೈದ್ಯರನ್ನು ಭೇಟಿಯಾಗಿದ್ದೆ, ನನ್ನ ಮೊಣಕಾಲಿನ ನೋವಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಸೂಚಿಸಿದರು. ಇದೇ ವಾರ ಶಸ್ತ್ರಚಿಕಿತ್ಸೆಗೆ ಒಳಾಗಲಿದ್ದು, ತಕ್ಷಣವೇ ಪುನಶ್ಚೇತನಗೊಳ್ಳುವೆ ಎಂದು ಬರೆದಿದ್ದಾರೆ.

    ಇದನ್ನೂ ಓದಿ: ಹೊಸ ಬೈಕ್​ನಲ್ಲಿ ಪೋಸ್​ ನೀಡಲು ಹೋಗಿ ನೆಟ್ಟಿಗರಿಂದ ಕಾಲೆಳೆಸಿಕೊಂಡ ವೇಗದ ಬೌಲರ್ ನವದೀಪ್​ ಸೈನಿ..

    ಇದುವರೆಗೂ ನನಗೆ ಪ್ರೋತ್ಸಾಹಿಸಿರುವ ಪ್ರತಿಯೊಬ್ಬರಿಗೆ ಅಭಾರಿಯಾಗಿದ್ದೇನೆ. ಇದು ನನಗೆ ಹಿನ್ನಡೆಯಾಗಿರಬಹುದು ಎಂದು ಹೇಳಿದ್ದಾರೆ. ಕಳೆದ ಎರಡೂ ತಿಂಗಳಿಂದ ಸರಿಯಾಗಿ ಅಭ್ಯಾಸ ಮಾಡಲು ಆಗುತ್ತಿರಲಿಲ್ಲ. ಒಲಿಂಪಿಕ್ಸ್​ಗೆ ಉತ್ತಮ ಸಿದ್ಧತೆ ಕೈಗೊಳ್ಳಬೇಕು ಎಂಬುದು ನನ್ನ ಇಚ್ಛೆಯಾಗಿತ್ತು. ಆದರೆ, ಇದು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಮರಿನ್​ ಅಲಭ್ಯತೆಯಿಂದಾಗಿ ಕಳೆದ ಬಾರಿ ರಿಯೋ ಒಲಿಂಪಿಕ್ಸ್​ನ ಫೈನಲ್​ ಪಂದ್ಯದಲ್ಲಿ ಸೋತಿದ್ದ ಭಾರತದ ಪಿವಿ ಸಿಂಧುಗೆ ಸ್ವರ್ಣ ಗೆಲುವಿಗೆ ಅವಕಾಶ ಸಿಕ್ಕಂತಾಗಿದೆ.

    ಇದನ್ನೂ ಓದಿ: ಯುಎಇಯಲ್ಲಿ ಐಪಿಎಲ್​ ಖಚಿತಗೊಂಡ ಬೆನ್ನಲ್ಲೇ ಟ್ರೋಲ್​ ಆದ ಸುರೇಶ್ ರೈನಾ

    ಹಾಲಿ ವಿಶ್ವ ಚಾಂಪಿಯನ್​ ಪಿವಿ ಸಿಂಧು ಸದ್ಯ ಹೈದರಾಬಾದ್​ನಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದು, 2019ರಲ್ಲಿ ವಿಶ್ವ ಚಾಂಪಿಯನ್​ನಲ್ಲಿ ಸ್ವರ್ಣ ಗೆದ್ದ ಬಳಿಕ ಏಕೈಕ ಪದಕ ಜಯಿಸುವಲ್ಲಿ ವಿಲರಾಗಿದ್ದಾರೆ. ಕ್ಯಾರೊಲಿನಾ ಮರಿನ್​, ಒಮ್ಮೆ ಒಲಿಂಪಿಕ್​, ಮೂರು ಬಾರಿ ವಿಶ್ವ ಚಾಂಪಿಯನ್​ ಹಾಗೂ ಐದು ಬಾರಿ ಯುರೋಪಿಯನ್​ ಚಾಂಪಿಯನ್​ ಆಗಿದ್ದಾರೆ.

    ಅವಳಿ ಒಲಿಂಪಿಕ್​ ಪದಕ ವಿಜೇತ ಪೈಲ್ವಾನ್​ ಸುಶೀಲ್​ ಕುಮಾರ್​ಗೆ ದೆಹಲಿ ಪೊಲೀಸರಿಂದ ಶಾಕ್​ ಮೇಲೆ ಶಾಕ್​..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts