More

    ಹುಬ್ಬಳ್ಳಿಗೆ ಹೋಗಿಬಂದವನಲ್ಲಿ ಕರೊನಾ ಸೋಂಕು: ಶಿರಸಿಯ ಪ್ರಸಿದ್ಧ ಮಾರಿಕಾಂಬಾ ದೇವಸ್ಥಾನ ಸೀಲ್​ಡೌನ್​

    ಶಿರಸಿ: ಉತ್ತರ ಕನ್ನಡದಲ್ಲಿ ಇಂದು ಒಂದೇ ದಿನ 21 ಕರೊನಾ ಪಾಸಿಟಿವ್​ ಕೇಸ್​ಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 354ಕ್ಕೆ ಏರಿದೆ.

    ಇಂದು ಶಿರಸಿಯ ಪ್ರಸಿದ್ಧ ಮಾರಿಕಾಂಬಾ ದೇವಸ್ಥಾನದ ಪಕ್ಕದಲ್ಲೇ ಇರುವ ಮನೆಯ ವ್ಯಕ್ತಿಯೋರ್ವನಲ್ಲಿ ಕರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ದೇಗುಲವನ್ನು ಒಂದು ವಾರಗಳ ಕಾಲ ಸೀಲ್​ಡೌನ್​ ಮಾಡಲಾಗಿದೆ.
    ಇವರು ಕಿರಾಣಿ ಖರೀದಿಗಾಗಿ ಹುಬ್ಬಳ್ಳಿಗೆ ತೆರಳಿದ್ದರು. ಜೂ.26ರಂದು ಶಿರಸಿಗೆ ವಾಪಸ್​ ಬಂದಿದ್ದರು. ನಂತರ ತಾವು ಹುಬ್ಬಳ್ಳಿಯಿಂದ ತಂದಿದ್ದ ಕಿರಾಣಿ ವಸ್ತುಗಳನ್ನು ನಗರದ ಹಲವು ಅಂಗಡಿಗಳಿಗೆ ವಿತರಣೆ ಮಾಡಿದ್ದರು. ಅಷ್ಟೇ ಅಲ್ಲ ಪ್ರತಿದಿನ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆಯುತ್ತಿದ್ದರು. ಇದನ್ನೂ ಓದಿ: ರಕ್ಷಣಾ ಪಡೆಗಳ ದಾಳಿಗೆ ನಾಲ್ವರು ಮಾವೋವಾದಿಗಳು ಉಡೀಸ್​…; ಓರ್ವ ಮಹಿಳಾ ನಕ್ಸಲ್​ ಕೂಡ ಬಲಿ

    ಜು.1ರಂದು ಈ ವ್ಯಕ್ತಿಯಲ್ಲಿ ಜ್ವರ ಕಾಣಿಸಿಕೊಂಡಿತ್ತು. ನಗರದ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆಯನ್ನೂ ಪಡೆದಿದ್ದರು. ಬಳಿಕ ಆ ಆಸ್ಪತ್ರೆ ವೈದ್ಯರು ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿದ್ದರು. ನಂತರ ವ್ಯಕ್ತಿಯ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿತ್ತು. ಇಂದು ಬಂದ ವರದಿಯಲ್ಲಿ ಕರೊನಾ ದೃಢಪಟ್ಟಿದೆ. ಹಾಗಾಗಿ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಇದನ್ನೂ ಓದಿ: ಕೇಳಿದಷ್ಟು ಬೆಡ್​​ಗಳನ್ನು ಕೊಟ್ಟಿಲ್ಲ ಖಾಸಗಿ ಆಸ್ಪತ್ರೆಗಳು; ಚಿಕಿತ್ಸೆ ಕೊಡದಿದ್ರೆ ಕ್ರಿಮಿನಲ್​ ಕೇಸ್​ ಎಂದ್ರು ಸಚಿವ ಸುಧಾಕರ್​

    ಇವರು ಪ್ರತಿದಿನ ದೇವಸ್ಥಾನಕ್ಕೆ ಬರುತ್ತಿದ್ದುದರಿಂದ ದೇಗುಲವನ್ನು ಸೀಲ್​ಡೌನ್​ ಮಾಡಲಾಗಿದೆ. ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತಿದೆ. ಇನ್ನು ಒಂದು ವಾರ ದೇಗುಲದಲ್ಲಿ ಅರ್ಚಕರು ಪೂಜೆ ಮಾಡಬಹುದು ವಿನಃ ಭಕ್ತರಿಗೆ ಪ್ರವೇಶ ಇರುವುದಿಲ್ಲ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟೇಶ್​ ನಾಯ್ಕ್​ ತಿಳಿಸಿದ್ದಾರೆ.

    ಗರ್ಭಿಣಿಯ ತುಂಬಿದ ಹೊಟ್ಟೆಯನ್ನು ಮುತ್ತಿಕೊಂಡ ಜೇನು ನೊಣಗಳು…; ದಿಗಿಲಾಗುವಂಥ ಫೋಟೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts