More

    ನೌಕರಿ ಕಾಯಂಗೊಳಿಸುವಂತೆ ಒತ್ತಾಯಿಸಿ ದಿನಗೂಲಿ ನೌಕರರು ಸಂಸದ ದೇವೇಂದ್ರಪ್ಪಗೆ ಮನವಿ

    ಮರಿಯಮ್ಮನಹಳ್ಳಿ: ಗ್ರಾಪಂನಲ್ಲಿ 15 ವರ್ಷಗಳಿಂದ ಕರ ವಸೂಲಿ, ನೀರು ಬಿಡುವ ಕಾಯಕದಲ್ಲಿ ನಿರತರಾದ ಹತ್ತಕ್ಕೂ ಹೆಚ್ಚು ದಿನಗೂಲಿ ನೌಕರನ್ನು ಕಾಯಂಗೊಳಿಸಿ ಆರ್ಥಿಕ ಭದ್ರತೆ ಕಲ್ಪಿಸುವಂತೆ ಒತ್ತಾಯಿಸಿ ದಿನಗೂಲಿ ನೌಕರರು ಸಂಸದ ದೇವೇಂದ್ರಪ್ಪಗೆ ಬುಧವಾರ ಮನವಿ ಸಲ್ಲಿಸಿದರು.

    ಗ್ರಾಪಂನಿಂದ ಪಪಂ ಆಗಿ ಮೇಲ್ದರ್ಜೆಗೇರಿದಾಗಿನಿಂದ ಈವರೆಗೂ ಸಂಬಳವಿಲ್ಲದೆ ಕೆಲಸ ಮಾಡುತ್ತಿದ್ದೇವೆ. ಬಾಕಿ ವೇತನ ನೀಡಿ ಕಾಯಂ ನೌಕರರೆಂದು ನೇಮಿಸಿಕೊಳ್ಳಬೇಕು. ಈ ಹಿಂದೆ ಕಾಯಂ ನೌಕರರಾಗಿ ಮಾಡಿಕೊಳ್ಳುವಂತೆ ಡಿಸಿಯವರಿಗೆ ಮನವಿ ಸಲ್ಲಿಸಲಾಗಿತ್ತು. ಈವರೆಗೂ ಡಿಸಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಕ್ಕ ಪಕ್ಕದ ಗ್ರಾಪಂಗಳಲ್ಲಿ ಕರ ವಸೂಲಿಗೆ ಸೇರಿಕೊಂಡ ಹತ್ತಾರು ಕಾರ್ಮಿಕರು ಇಂದು ಗ್ರಾಪಂ ಕಾರ್ಯದರ್ಶಿ, ಪಿಡಿಒಗಳಾಗಿದ್ದಾರೆ. ಸಾರ್ವಜನಿಕವಾಗಿ ಸೇವೆ ಸಲ್ಲಿಸಿದ ದಿನಗೂಲಿ ನೌಕರರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.

    ಸಂಸದ ದೇವೇಂದ್ರಪ್ಪ ಮಾತನಾಡಿ, ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ, ಕ್ರಮಕೈಗೊಳ್ಳಲು ಸೂಚಿಸುವುದಾಗಿ ತಿಳಿಸಿದರು.

    ಪಪಂ ಉಪಾಧ್ಯಕ್ಷ ಎಲ್.ಮಂಜುನಾಥ, ಪಪಂ ಸದಸ್ಯರಾದ ಗುಂಡಾ ಸ್ವಾಮಿ, ಪ್ರಕಾಶ್ ನಾಯ್ಕ, ಮುಖಂಡರಾದ ಬಿಎಂಎಸ್ ಪ್ರಕಾಶ್, ಪೂಜಾರ್ ಪ್ರಕಾಶ್, ಬಿ.ಆನಂದ್, ದಿನಗೂಲಿ ಕಾರ್ಮಿಕರಾದ ಗುರುರಾಜ, ಕನಕಪ್ಪ, ಸಮಾದೇಪ್ಪ, ಬಿ.ಹುಲುಗಪ್ಪ, ಕನ್ನಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts