More

    122 ವರ್ಷಗಳಲ್ಲಿ ಯಾವತ್ತೂ ಇರಲಿಲ್ಲ ಇಷ್ಟೊಂದು ತಾಪಮಾನ!; ದಾಖಲೆಯ ಉಷ್ಣಾಂಶ ದಾಖಲು..

    ನವದೆಹಲಿ: ಏಪ್ರಿಲ್ ಫೂಲ್ ದಿನವಾದ ನಿನ್ನೆ ಕೆಲವರು ಏಪ್ರಿಲ್ ಫೂಲ್​ ಮಾಡುವ ಬದಲು ಒಬ್ಬೊಬ್ಬರು ಒಂದೊಂದು ಸಸಿ ನೆಟ್ಟು ಏಪ್ರಿಲ್​ ಕೂಲ್ ಆಗುವಂತೆ ಮಾಡಿ ಎಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದರು. ಆ ಮಾತು ಈಗ ಹೆಚ್ಚು ಪ್ರಸ್ತುತ ಎನಿಸುವಂಥ ವಿದ್ಯಮಾನವೊಂದು ನಡೆದಿದೆ.

    ದೇಶದಲ್ಲಿ ದಾಖಲೆಯ ಸರಾಸರಿ ಉಷ್ಣಾಂಶ ದಾಖಲಾಗಿದ್ದು, ಅದರ ಪರಿಣಾಮ ಏಪ್ರಿಲ್​ನಲ್ಲೂ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ. ಅದರಲ್ಲೂ ಏಪ್ರಿಲ್​ನ ಮೊದಲ 10-15 ದಿನಗಳಲ್ಲಿ ಅತ್ಯಂತ ಉಷ್ಣಹವೆ ಇರಲಿದ್ದು, ತೀವ್ರವಾದ ಶಾಖದ ಅಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ.

    ಇನ್ನು 2022ರ ಈ ಮಾರ್ಚ್​ನಲ್ಲಿ ಮಾಸಿಕ ಸರಾಸರಿ ಉಷ್ಣಾಂಶ 122 ವರ್ಷಗಳಲ್ಲೇ ಅತ್ಯಧಿಕ ಎನಿಸುವಷ್ಟು ದಾಖಲಾಗಿದೆ. 1901ರ ಮಾರ್ಚ್​ನಲ್ಲಿ ಮಾಸಿಕ ಸರಾಸರಿ ಉಷ್ಣಾಂಶ 33.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಅದಾದ ಬಳಿಕ ಈ ವರ್ಷ ಮತ್ತೆ ಅಷ್ಟೇ ಮಾಸಿಕ ಸರಾಸರಿ ಉಷ್ಣಾಂಶ ಕಂಡುಬಂದಿದೆ.
    ಈ ಮಧ್ಯೆ 2010ರ ಮಾರ್ಚ್​ನಲ್ಲಿ 33.09 ಡಿಗ್ರಿ ಸೆಲ್ಸಿಯಸ್ ಮಾಸಿಕ ಸರಾಸರಿ ಉಷ್ಣಾಂಶ ದಾಖಲಾಗಿದ್ದರೂ ಈಗಿನ 33.1 ಡಿಗ್ರಿ ಸೆಲ್ಸಿಯಸ್ ಸರಾಸರಿ ಮಾಸಿಕ ಉಷ್ಣಾಂಶ 122 ವರ್ಷಗಳಲ್ಲೇ ಅತ್ಯಧಿಕ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಈ ಅಧಿಕ ತಾಪಮಾನದಿಂದ ಅತಿ ಹೆಚ್ಚು ಬಾಧಿಸಲ್ಪಡುವುದು ವಾಯವ್ಯ ಭಾರತ ಎಂದು ಹೇಳಿರುವ ಹವಾಮಾನ ಅಧಿಕಾರಿಗಳು, ಅಧಿಕ ಉಷ್ಣಾಂಶದಿಂದಾಗಿ ಕಾಳ್ಗಿಚ್ಚು ಉಂಟಾಗುವ ಸಾಧ್ಯತೆ ಇರುವುದರಿಂದ ಅರಣ್ಯ ಇಲಾಖೆಯವರಿಗೆ ಮುನ್ನೆಚ್ಚರಿಕೆ ಸಂದೇಶ ನೀಡಿದ್ದಾಗಿ ತಿಳಿಸಿದ್ದಾರೆ.

    ಹಬ್ಬದಂದೇ ನವವಿವಾಹಿತೆಯ ಸಾವು; ವಿಷ ಕುಡಿಸಿ ಸಾಯಿಸಿದ್ರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts