More

    ಮರಾಠ ನಿಗಮ ಸ್ಥಾಪನೆ ವಿರೋಧಿಸಿ ಕರ್ನಾಟಕ ಬಂದ್: ರಾಜಧಾನಿಯಲ್ಲಿ ಹಲವೆಡೆ ಕಟ್ಟೆಚ್ಚರ

    ಬೆಂಗಳೂರು: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ನಗರವ್ಯಾಪಿ 15 ಸಾವಿರಕ್ಕಿಂತ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದ್ದಾರೆ.

    ಐವರು ಹೆಚ್ಚುವರಿ ಪೊಲೀಸ್ ಆಯುಕ್ತರು, ಡಿಸಿಪಿಗಳು, ಎಸಿಪಿಗಳ ನೇತೃತ್ವದಲ್ಲಿ ಭದ್ರತೆ ನಿಯೋಜನೆ ಮಾಡಲಾಗುತ್ತದೆ. 35 ಕೆಎಸ್​ಆರ್​ಪಿ, 32 ಸಿಎಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಬೆಳಗ್ಗೆಯಿಂದಲೇ ಪ್ರತಿ ಏರಿಯಾದಲ್ಲಿ ಅಧಿಕಾರಿಗಳು, ಹೊಯ್ಸಳ, ಚೀತಾ ಗಸ್ತು ತಿರುಗಲಿದ್ದು, ಬಂದ್ ನೆಪದಲ್ಲಿ ಕಾನೂನು ಭಂಗ ಮಾಡುವಂತಿಲ್ಲ. ಬಂದ್ ಮಾಡಲು ಯಾರೂ ಅನುಮತಿ ಕೇಳಿಲ್ಲ. ಯಾರಿಗೂ ಕೊಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

    ಇದನ್ನೂ ಓದಿ: ಜನರಿಗೆ ತೊಂದರೆಯಾಗದಿರಲಿ; ಪ್ರತಿಭಟನೆಯ ಹಕ್ಕು ಚೌಕಟ್ಟು ಮೀರಬಾರದು…

    ಬಲವಂತವಾಗಿ ಅಂಗಡಿ, ಕಚೇರಿ, ರಸ್ತೆ ತಡೆ ಮಾಡುವಂತಿಲ್ಲ. ಮಾಡಿದರೆ ಅಂಥವರ ವಿರುದಟಛಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಜನಸಾಮಾನ್ಯರು ನಿರ್ಭಯವಾಗಿ ಓಡಾಟ ನಡೆಬಹುದು. ಬಿಎಂಟಿಸಿ, ಕೆಎಸ್​ಆರ್​ಟಿಸಿ, ಮೆಟ್ರೋ ಸೇವೆ ಇರಲಿದೆ. ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಕಮಲ್ ಪಂತ್ ಎಚ್ಚರಿಕೆ ನೀಡಿದರು.

    ಮರಾಠ ನಿಗಮ ವಿವಾದ: ಕರ್ನಾಟಕ ಬಂದ್ ಪರಿಣಾಮ ಹೇಗಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts