More

    ತತ್ವಪದಗಳು ಭಾವೈಕ್ಯತೆ ಬೆಸೆಯುತ್ತವೆ – ಹಿರಿಯ ಸಾಹಿತಿ ರಮೇಶಬಾಬು ಯಾಳಗಿ ಅಭಿಮತ

    ಮಾನ್ವಿ: ರಾಯಚೂರು ಜಿಲ್ಲೆಯ ಪ್ರಥಮ ಮುಸ್ಲಿಂ ತತ್ವಪದಕಾರ ಆರೋಲಿಯ ಬಿಜಲಿ ವಸ್ತಾದಿ ಅವರ ತತ್ವಪದಗಳು ಸಮಾಜದಲ್ಲಿ ಭಾವೈಕ್ಯತೆ ಮೂಡಿಸುವ ಸಂಕೇತಗಳಾಗಿವೆ ಎಂದು ಹಿರಿಯ ಸಾಹಿತಿ ರಮೇಶಬಾಬು ಯಾಳಗಿ ಹೇಳಿದರು.

    ತಾಲೂಕಿನ ಹರನಹಳ್ಳಿ ಗ್ರಾಮದಲ್ಲಿ ಬುಧವಾರ ಕಲ್ಮಠ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕ ಆಯೋಜಿಸಿದ ವಿಶೇಷ ಶಿಬಿರದಲ್ಲಿ ತತ್ವಪದಗಳಲ್ಲಿ ನಿಜ ಜೀವನದ ಸಾರ ವಿಷಯ ಕುರಿತು ಉಪನ್ಯಾಸ ನೀಡಿದರು.

    ಧರ್ಮ ಸಮನ್ವಯಕ್ಕೆ ಪ್ರಮುಖ ಉದಾಹರಣೆಯಾಗಿರುವ ಬಿಜಲಿ ವಸ್ತಾದಿಯವರು ಸೂಗೂರೇಶ್ವರ ಹಾಗೂ ಮಟಮಾರಿ ವೀರಭದ್ರೇಶ್ವರ ಕುರಿತು ಭಾವೈಕ್ಯತೆ ಬೆಸೆಯುವ ಪದಗಳನ್ನು ರಚಿಸಿದ್ದಾರೆ. ಇವರ ತತ್ವಪದಗಳನ್ನು ಹೆಚ್ಚು ಹೆಚ್ಚು ಪ್ರಚುರ ಪಡಿಸಬೇಕಾದ ಅಗತ್ಯವಿದೆ. ಸಿಟ್ಟು ಬಂದರೆ ನಿಧಾನ ಮಾಡು ಹಸಿದು ಬಂದವರಿಗೆ ಅನ್ನವ ನೀಡು ಪರ ನಿಂದೆಯ ಬಿಟ್ಟು ಪ್ರೀತಿ ಮಾಡು ಎಂಬ ಬಿಜಲಿಯವರ ತತ್ವಪದಗಳು ಸರ್ವ ಕಾಲಕ್ಕೂ ಪ್ರಸ್ತುತವಾಗಿವೆ. ಮಾನ್ವಿ ತಾಲೂಕಿನ ಮದ್ಲಾಪುರ ಗ್ರಾಮದ ಬಸನಗೌಡ ಬುರಾನಪುರ ತತ್ವಪದವನ್ನು ಹಾಡಿ ತತ್ವಪದದಲ್ಲಿನ ಸಾರವನ್ನು ಸಾದರಪಡಿಸಿದರು.

    ಕಲ್ಮಠ ಕಾಲೇಜಿನ ಪ್ರಾಚಾರ್ಯ ಎಸ್.ಎಸ್.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.ಮುಖ್ಯಶಿಕ್ಷಕ ಮಂಜುನಾಥ ಕಮತರ, ಮುಖಂಡರಾದ ನಾಗರಾಜ ಪೊಲೀಸ್ ಪಾಟೀಲ್, ರಾಚಪ್ಪಗೌಡ, ರಮೇಶಪ್ಪಗೌಡ, ಅಮರಯ್ಯಸ್ವಾಮಿ, ಚಾಂದ್‌ಪಾಷಾ, ವೀರಯ್ಯಸ್ವಾಮಿ, ಶಿಕ್ಷಕ ಹನುಮಂತಪ್ಪ, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ನರಸಣ್ಣ, ಉಪನ್ಯಾಸಕರಾದ ಮಾರ್ಟಿನ್, ಆನಂದಕುಮಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts