More

    ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ, ವಾಲ್ಮೀಕಿ ಸಮುದಾಯದ ವಿವಿಧ ಸಂಘಟನೆಗಳ ಒತ್ತಾಯ

    ಉಪತಹಸೀಲ್ದಾರ್ ಮಹೇಶ್‌ಗೆ ಮನವಿ

    ಮಾನ್ವಿ: ಉತ್ತರ ಪ್ರದೇಶದ ಹಥರಾಸ್ ನಗರದ ಯುವತಿ ಅಪಹರಣ, ಅತ್ಯಾಚಾರ ಮತ್ತು ಕೊಲೆ ಅಮಾನವೀಯ ಕೃತ್ಯವಾಗಿದ್ದು, ಈ ಕೃತ್ಯ ಎಸಗಿದವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಹಾಗೂ ಕರ್ನಾಟಕ ಪರಿಶಿಷ್ಠ ಪಂಗಡ ವಾಲ್ಮೀಕಿ ನೌಕರರ ಒಕ್ಕೂಟ, ಮಾನವ ಬಂಧುತ್ವ ವೇದಿಕೆ ಕರ್ನಾಟಕ, ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಂಘ ಒತ್ತಾಯಿಸಿದವು.

    ಪಟ್ಟಣದ ವಾಲ್ಮೀಕಿ ವೃತ್ತದ ಬಳಿ ಶನಿವಾರ ಪ್ರತಿಭಟನೆ ನಡೆಸಿ, ಉಪತಹಸೀಲ್ದಾರ್ ಮಹೇಶ್‌ಗೆ ಮನವಿ ಸಲ್ಲಿಸಿದವು. ಯುವತಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಸಂತ್ರಸ್ತಳ ಕುಟುಂಬಕ್ಕೆ ಪರಿಹಾರ ಒದಗಿಸಿ, ರಕ್ಷಣೆ ನೀಡಬೇಕು. ದೇಶದಲ್ಲಿ ಇಂತಹ ಘಟನೆ ಜರುಗದಂತೆ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

    ವಿವಿಧ ಸಂಘಟನೆಗಳ ಕಾರ್ಯಕರ್ತರಾದ ಬಿ.ಶಿವರಾಜ ನಾಯಕ, ಮಂಜುನಾಥ ನಾಯಕ ಜಾನೇಕಲ್, ಹನುಮಯ್ಯ ನಾಯಕ, ಕೆ.ಶುಕಮುನಿ, ವೆಂಕಟೇಶ ನಾಯಕ, ಪಿ.ರವಿ ನಾಯಕ, ನಾಗರಾಜ ಕಬ್ಬೇರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts