More

    ಸೋಮಾರಿತನದಿಂದ ಆರೋಗ್ಯ ಹಾಳು: ಮಾನಸಿಕ ತಜ್ಞ ಡಾ.ಸಿ.ಆರ್.ಚಂದ್ರಶೇಖರ ಹೇಳಿಕೆ

    ಮಾನ್ವಿ: ಸೋಮಾರಿತನದಿಂದ ಜೀವನ ನಡೆಸುವವರು ಎಂದಿಗೂ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಮಾನಸಿಕ ತಜ್ಞ ಸಿ.ಆರ್.ಚಂದ್ರಶೇಖರ ತಿಳಿಸಿದರು.

    ಪಟ್ಟಣದ ಧ್ಯಾನ ಮಂದಿರದಲ್ಲಿ ಮಂಗಳವಾರ ಮಾನಸಿಕ ಆರೋಗ್ಯ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಹವನ್ನು ದಣಿಸದೇ ಕುಳಿತಲ್ಲೇ ಕುಳಿತರೆ, ಹತ್ತಾರು ರೋಗಗಳು ಬಾಧಿಸುತ್ತವೆ. ಸೋಮಾರಿತನ ಜೀವನದಿಂದ ದೂರವಿರಬೇಕು ಎಂದರು.

    ಮನುಷ್ಯರಲ್ಲಿ ನೆಮ್ಮದಿ, ಸಂಭ್ರಮ ಇಲ್ಲದಂತಾಗಿದ್ದು, ನಂಬಿಕೆಗಳು ದೂರವಾಗುತ್ತಿವೆ. ಇಲ್ಲಸಲ್ಲದ ಯೋಚನೆಗಳಿಂದ ನೋವು, ನಿಶ್ಯಕ್ತಿ, ಸಾಮರ್ಥ್ಯ ಅನೇಕರಲ್ಲಿ ಕಡಿಮೆಯಾಗಿ ಥೈರಾಯ್ಡ, ಎಸಿಡಿಟಿ, ಬಿಪಿ, ಸಕ್ಕರೆ ಕಾಯಿಲೆಗಳಿಂದ ಬಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

    ಕೆಲಸವಿಲ್ಲದೇ ಖಾಲಿ ಕುಳಿತಾಗ ಅನೇಕ ಯೋಚನೆಗಳು ನಮ್ಮನ್ನು ಕಾಡುತ್ತವೆ. ಆರೋಗ್ಯ ಜೀವನಕ್ಕೆ ಕೆಟ್ಟ ಚಟಗಳಿಂದ ದೂರವಿರಬೇಕು. ಯಾವುದೇ ಒತ್ತಡ ಬಂದರು ಅದನ್ನು ಸಮಾಧಾನದಿಂದ ಎದುರಿಸಿ ನಿಶ್ಚಿಂತೆಯಿಂದ ಬದುಕು ಸಾಗಿಸಬೇಕು ಎಂದರು.

    ಮಾನಸಿಕ ತೊಂದರೆಗಳ ಕುರಿತು ಡಾ.ಸಿ.ಆರ್.ಚಂದ್ರಶೇಖರ ಸಂವಾದ ನಡೆಸಿದರು. ಕಲಬುರಗಿ ಎಂ.ಆರ್.ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಎಸ್.ಎಸ್. ಹಿರೇಮಠ, ಕಲ್ಮಠ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ಉಮಾಶಂಕರ ಎಚ್.ಎಂ., ಮಾಂಟೆಸರಿ ಶಾಲೆಯ ಮುಖ್ಯಸ್ಥೆ ಶಶಿಕಲಾ ಪಾಟೀಲ್ ಹರವಿ, ಮಹಾನಂದ ಹಿರೇಮಠ, ಉಪನ್ಯಾಸಕ ಬಸವರಾಜ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts