More

    ಆಲ್ಬಂಡಜೋಲ್ ಮಾತ್ರೆ ಉಚಿತ ವಿತರಣೆ

    ಮಾನ್ವಿ: ದೇಹದಲ್ಲಿರುವ ಜಂತು ಹುಳುಗಳು ನಾಶವಾಗುವುದರಿಂದ ಮಕ್ಕಳು ಸೇವಿಸುವ ಆಹಾರ, ದೇಹದ ಬೆಳವಣಿಗೆಗೆ ಸಂಪೂರ್ಣ ವಿನಿಯೋಗವಾಗಿ ಮಕ್ಕಳಲ್ಲಿ ಅಪೌಷ್ಟಿಕ ನಿವಾರಣೆಯಾಗಲಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ತಿಳಿಸಿದರು.

    ಮುದಂಗುಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತು ಹುಳು ನಿವಾರಣೆ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ಜಂತು ನಿವಾರಕ ಆಲ್ಬಂಡಜೋಲ್ ಮಾತ್ರೆಯನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿದೆ ಎಂದರು.

    ಮೇ 13 ರಿಂದ 27 ರವರೆಗೆ ಸಮುದಾಯ ಆಧಾರಿತ ರಾಷ್ಟ್ರೀಯ ಜಂತುಹುಳು ನಿವಾರಣೆ ಕಾರ್ಯಕ್ರಮವನ್ನು ಅರೋಗ್ಯ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದೆ, ಎರಡು ವರ್ಷದೊಳಗಿನ ಮಕ್ಕಳಿಗೆ ಅರ್ಧ ಹಾಗೂ 19 ವರ್ಷದೊಳಗಿನವರಿಗೆ ಪ್ರತಿ ಆರು ತಿಂಗಳಿಗೊಮ್ಮೆ ಒಂದು ಆಲ್ಬಂಡಜೋಲ್ ಮಾತ್ರೆ ಉಚಿತವಾಗಿ ವಿತರಿಸಲಾಗುವುದು ಎಂದು ಬಾಲಪ್ಪ ನಾಯಕ ಮಾಹಿತಿ ನೀಡಿದರು. ಪ್ರಮುಖರಾದ ಹನುಮಂತಪ್ಪ, ಮಂಜುಳಾ, ಮರಿಯಮ್ಮ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts