More

    ಉತ್ತಮವಾಗಿ ಸುರಿದ ಮುಂಗಾರು ಮಳೆಗೆ ಕೃಷಿ ಚಟುವಟಿಕೆಗಳು ಜೋರು

    ಮಾನ್ವಿ: ತಾಲೂಕಿನಲ್ಲಿ ಕೆಲವು ದಿನಗಳಿಂದ ಉತ್ತಮ ಮಳೆ ಸುರಿದಿದ್ದು, ರೈತರು ಹತ್ತಿ ಬಿತ್ತನೆಗೆ ಮುಂದಾಗಿದ್ದಾರೆ.

    ಈ ವರ್ಷ ಆರಂಭದಲ್ಲೇ ಮಳೆ ಉತ್ತಮ ಮುನ್ಸೂಚನೆ ನೀಡಿದೆ. ಈಗಾಗಲೇ ರೈತರು ವಿವಿಧ ತಳಿಯ ಹತ್ತಿ ಬೀಜಗಳನ್ನು ತಂದು ಬಿತ್ತನೆ ಮಾಡುವುದಕ್ಕೆ ಆರಂಭಿಸಿದ್ದಾರೆ. 10-15 ದಿನಗಳ ಹಿಂದೆ ಅಲ್ಪಸ್ವಲ್ಪ ಮಳೆ ಬಿದ್ದಿತ್ತು. ಮಳೆ ಬಂದ ಬಳಿಕ ಬಿತ್ತನೆ ಕಾರ್ಯಕ್ಕೆ ಭೂಮಿಯನ್ನು ಸಿದ್ಧ ಮಾಡಿಕೊಂಡಿದ್ದರು. ಶನಿವಾರ ರಾತ್ರಿ ಸುರಿದ ಜಿಟಿಜಿಟಿ ಮಳೆಗೆ ಭೂಮಿ ಹದವಾಗಿದ್ದರಿಂದ ಹೊಲಗಳಲ್ಲಿ ಕೃಷಿ ಚಟಿವಟಿಕೆಗಳು ಭರದಿಂದ ಸಾಗಿವೆ.

    ಕರೊನಾ ವೈರಸ್‌ನಿಂದ ಎರಡು ತಿಂಗಳಿಂದ ಕೂಲಿ ಕಾರ್ಮಿಕರಿಗೆ ಕೆಲಸಗಳು ಕಡಿಮೆಯಾಗಿದ್ದವು. ಅಲ್ಪಸ್ವಲ್ಪ ಕೆಲಸ ದೊರೆಯುತ್ತಿದ್ದವು. ಈಗ ಮಳೆ ಬಿದ್ದು, ಒಕ್ಕಲುತನ ಚುರುಕುಗೊಂಡಿದ್ದು, ಕೃಷಿ ಕೂಲಿ ಕಾರ್ಮಿಕರಿಗೆ ಬೇಡಿಕೆ ಹೆಚ್ಚುತ್ತ್ತಿದೆ. ಹತ್ತಿ ಬೀಜ ಹಾಕಲು ಕೂಲಿ ಕಾರ್ಮಿಕರು ಎಕರೆಗೆ ಇಂತಿಷ್ಟೆಂದು ಗುತ್ತಿಗೆ ಹಿಡಿಯಲು ಮುಂದಾಗಿದ್ದಾರೆ.

    ಬಾಡಿಗೆ ಎತ್ತುಗಳಿಗೆ ಬೇಡಿಕೆ: ಕೃಷಿ ಚಟುವಟಿಕೆಗಳಿಗೆ ಯಂತ್ರಗಳ ಬಳಕೆ ಹೆಚ್ಚಾಗಿದೆ. ಉಳ್ಳವರು ಬಿತ್ತನೆ ಮತ್ತು ಇತರ ಕೃಷಿ ಚಟುವಟಿಕೆಗಳಿಗೆ ಯಂತ್ರಗಳು ಬಳಕೆ ಮಾಡಿದರೆ, ಸಣ್ಣ ರೈತರು ಲಭ್ಯವಿರುವ ಕಡೆ ಎತ್ತುಗಳನ್ನು ಬಾಡಿಗೆ ರೂಪದಲ್ಲಿ ಪಡೆದು ಬೇಸಾಯ ಮಾಡುತ್ತಿದ್ದಾರೆ. ದಿನದ ಬಾಡಿಗೆ ರೂಪದಲ್ಲಿ ಬೇಸಾಯ ಮಾಡುತ್ತಿದ್ದು, ತಾಲೂಕಿನಲ್ಲಿ ಎತ್ತುಗಳಿಗೆ ಬೇಡಿಕೆ ಹೆಚ್ಚಿದೆ.

    ದುಬಾರಿ: ಕೂಲಿ ಕಾರ್ಮಿಕರು ಕೃಷಿ ಕೆಲವಿಲ್ಲದೆ ಜೀವನ ಸಾಗಿಸಲು ಬೆಂಗಳೂರು, ನೆರೆ ರಾಜ್ಯಗಳಾದ ಆಂಧ್ರ, ಗೋವಾ ಮಹಾನಗರಗಳಿಗೆ ಗುಳೆ ಹೋಗಿದ್ದರಿಂದ ಇರುವ ಕೂಲಿ ಕಾರ್ಮಿಕರಿಗೆ ಸದ್ಯ ಭಾರಿ ಬೇಡಿಕೆ ಬಂದಿದೆ. ಮಹಿಳಾ ಕೂಲಿ ಕಾರ್ಮಿಕರಿಗೆ 200 ರೂ.ದಿನದ ಕೂಲಿ ಹಾಗೂ ಪುರುಷರಿಗೆ 300ರೂ.ಯಿಂದ 500 ರೂ.ವರೆಗೆ ಕೊಡಲಾಗುತ್ತಿದೆ. ಬಿತ್ತನೆಗೆ ಬೇಕಾದ ಗಳೇವು-ಕೂರ್ಗಿಗೆ ದಿನವೊಂದಕ್ಕೆ 1100 ರೂ. ತೆಗೆದುಕೊಳ್ಳುತ್ತಿದ್ದು, ಖರ್ಚು ಹೆಚ್ಚಾದರೂ ರೈತರು ಬಿತ್ತನೆಯಲ್ಲಿ ತೊಡಗಿದ್ದಾರೆ.

    ತಾಲೂಕಿನಲ್ಲಿನ ಪ್ರಸಕ್ತ 56,625 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈ ಬಾರಿ 23 ಸಾವಿರ ಹೆಕ್ಟೇರ್ ಹತ್ತಿ ಬಿತ್ತನೆ ಮಾಡಲಾಗುತ್ತಿದೆ. 26 ಸಾವಿರ ಹೆಕ್ಟೇರ್‌ನಲ್ಲಿ ಭತ್ತ, 60 ಸಾವಿರ ಹೆಕ್ಟೇರ್‌ನಲ್ಲಿ ಜೋಳ, 1920 ಸಾವಿರ ಹೆಕ್ಟೇರ್ ಸೂರ್ಯಕಾಂತಿ, 70 ಸಾವಿರ ಹೆಕ್ಟೇರ್ ಹೆಸರು, 4670 ಹೆಕ್ಟೇರ್ ತೊಗರಿ ಹಾಗೂ 850 ಸಾವಿರ ಹೆಕ್ಟೇರ್‌ನಲ್ಲಿ ಸಜ್ಜೆ ಬಿತ್ತನೆಯಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts