More

    ಹೊಲ-ಗದ್ದೆಗಳಿಗೆ ನುಗ್ಗಿದ ನೀರು

    ಮಾನ್ವಿ: ಮಳೆಯ ಅಬ್ಬರದಿಂದಾಗಿ ತಾಲೂಕಿನ ಹಳ್ಳ-ಕೊಳ್ಳಗಳು ಭರ್ತಿಯಾಗಿದ್ದು, ಹೊಲ-ಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹತ್ತಿ ಹಾಗೂ ಇತರ ಬೆಳೆ ಹಾನಿಗೊಂಡಿವೆ.

    ಭಾರಿ ಮಳೆಯಿಂದ ಹಲವು ಕಡೆ ಸೇತುವೆ ಮೇಲ್ಭಾಗದಲ್ಲಿ ನೀರು ಹರಿದ ಕಾರಣ ಸಂಚಾರ ಸ್ಥಗಿತವಾಗಿತ್ತು. ಕಳೆದ 3-4 ದಿನಗಳಿಂದ ಸುರಿದ ಮಳೆಯಿಂದಾಗಿ ತಾಲೂಕಿನಲ್ಲಿನ ಎಲ್ಲ ಹಳ್ಳಗಳು ಭೋರ್ಗರೆಯುತ್ತಿವೆ. ಹತ್ತಿ, ತೊಗರಿ, ಸೂರ್ಯಕಾಂತಿ ಬೆಳೆದಿದ್ದ ಹೊಲಗಳಲ್ಲಿ ನೀರು ನಿಂತು ಬೆಳೆಗಳು ಹಾನಿಯಾಗಿದೆ.

    ನಗರದ ಹಿರೇಹಳ್ಳ ತುಂಬಿ ಹರಿಯುತ್ತಿದೆ. ನೂರಾರು ಎಕರೆ ಜಮೀನಿಗೆ ಹಳ್ಳದ ನೀರು ನುಗ್ಗಿದೆ. ತುಂಗಭದ್ರಾ ನದಿ ಪಕ್ಕದಲ್ಲಿನ ನೂರಾರು ಎಕರೆಯಲ್ಲಿ ನಾಟಿ ಮಾಡಿದ್ದ ಹತ್ತಿ, ಭತ್ತ ನೀರಲ್ಲಿ ಮುಳುಗಿದೆ. ಮುಷ್ಟೂರು, ಧೋತರಬಂಡಿ, ಗವಿಗಟ್ಟು ಇತರ ವಿವಿಧ ಹಳ್ಳಗಳೂ ತುಂಬಿ ಹರಿಯುತ್ತಿವೆ.

    ಬೈಲ್‌ಮರ್ಚೆಡ್ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಹಳ್ಳದ ಪಕ್ಕದ ಜಮೀನಿನಲ್ಲಿ ಬೆಳೆದಿದ್ದ ಹತ್ತಿ ಬೆಳೆ ಸಂಪುರ್ಣ ನೀರಲ್ಲಿ ಮುಳುಗಿದೆ. ಹಳ್ಳದಲ್ಲಿ ಜಾಲಿ ಬೆಳೆದಿದ್ದು, ಹೂಳು ತುಂಬಿರುವುದರಿಂದ ನೀರು ಸರಿಯಾಗಿ ಹರಿಯದೆ ರೈತರ ಜಮೀನಿಗೆ ನುಗ್ಗಿದೆ. ರಾಜಲಬಂಡಾ ಅಣೆಕಟ್ಟೆಯಲ್ಲಿ ನೀರಿನ ರಭಸ ಕಣ್ತುಂಬಿಕೊಳ್ಳಲು ಜನತೆ ಸಾಲುಗಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts