More

    ನ.2 ರಿಂದ ವಿಜಯದಾಸರ ಆರಾಧನೆ

    ಮಾನ್ವಿ: ದಾಸಶ್ರೇಷ್ಠ ವಿಜಯದಾಸರ 267 ನೇ ಆರಾಧನಾ ಮಹೋತ್ಸವ ನ.2 ರಿಂದ ಚೀಕಲಪರ್ವಿಯಲ್ಲಿ ನಡೆಯಲಿದೆ ಎಂದು ಗೌರವ ವಿಚಾರಣಾಕರ್ತ ವಿಜಯೀಂದ್ರಾಚಾರ್ ಇಬ್ರಾಂಪುರ ತಿಳಿಸಿದ್ದಾರೆ.

    ನ.1 ರಂದು ಸಂಜೆ 6ಕ್ಕೆ ಧ್ವಜಾರೋಹಣ, ಗೋಪೂಜೆ, ಧಾನ್ಯಪೂಜೆ, ಸ್ವಸ್ತಿವಾಚನ ಮತ್ತು ಮಹಾ ಮಂಗಳಾರತಿ ಇರಲಿದೆ. ನ.2 ರಂದು ಪೂರ್ವರಾಧನೆ ಇದ್ದು, ಬೆಳಗ್ಗೆ 5ಕ್ಕೆ ಸುಪ್ರಭಾತ ಸೇವೆ, ಅಷ್ಟೋತ್ತರ ಪಾರಾಯಣ, ವಿಜಯ ಕವಚ ಪಾರಾಯಣ, ಫಲಪಂಚಾಮೃತ, ಕನಕಮಹಾಪೂಜೆ, 10ಕ್ಕೆ ವಿದ್ವಾಂಸರಿಂದ ಪ್ರವಚನ, ನಂತರ ಅರ್ಚನೆ, ಅಲಂಕಾರ, ಹಸ್ತೋದಕ, ಮಹಾ ಮಂಗಳಾರತಿ ನಡೆಯಲಿದೆ. ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠದ ಸುಬುಧೇಂದ್ರತೀರ್ಥ ಸ್ವಾಮೀಜಿಯಿಂದ ಸಂಸ್ಥಾನ ಪೂಜೆ ಹಾಗೂ ಅನುಗ್ರಹ ಸಂದೇಶ ಇರಲಿದೆ. ಬಳಿಕ ಶ್ರೀಗಳ ಪಾದಪೂಜೆ ಹಾಗು ತಪ್ತಮುದ್ರಾಧಾರಣೆ ನೆರವೇರಲಿದೆ. ಸಂಜೆ ಪಲ್ಲಕಿ ಸೇವೆ, ಸ್ವಸ್ತಿವಾಚನ, ಮಹಾಮಂಗಳಾರತಿ ಶ್ರೇಯ ಪ್ರಾರ್ಥನೆ ನೆರವೇರಲಿದೆ.

    ನ.3 ರಂದು ಮಧ್ಯಾರಾಧನೆ ಅಂಗವಾಗಿ ಬೆಳಗ್ಗೆ 11ಕ್ಕೆ ಭಜನೆಯೊಂದಿಗೆ ಮಹಾರಥೋತ್ಸವ, ಲಕ್ಷ ಕಾರ್ತೀಕ ದೀಪೋತ್ಸವ ನಡೆಯಲಿದೆ. ನ.4 ರಂದು ಶುಕ್ರವಾರ ಸರ್ವೇಷಾಮೇಕಾದಶಿ ನಿಮಿತ್ತ ವಿವಿಧ ಪಂಡಿತರಿಂದ ಉಪನ್ಯಾಸ ಹಾಗೂ ಜಾಗರಣೆ, ನ.5ರಂದು ಉತ್ತಾರಾಧನೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ತಿರುಮಲ ತಿರುಪತಿ ದೇವಸ್ಥಾನ ಹಾಗೂ ದಾಸಸಾಹಿತ್ಯ ಪ್ರಾಜೆಕ್ಟ್, ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಮಂತ್ರಾಲಯದ ವಿದ್ವಾಂಸರಿಂದ, ಕಲಾವಿದರಿಂದ ನಿತ್ಯ ಜ್ಞಾನಸತ್ರ, ಧಾರ್ಮಿಕ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿಜಯೀಂದ್ರಾಚಾರ್ ಇಬ್ರಾಂಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts