More

    ಭಕ್ತರನ್ನು ಗೌರವಿಸಿ ಸರಿದಾರಿಯಲ್ಲಿ ನಡೆಸಲಿ;ಅಭಿನವ ಮಹಾಂತ ಶ್ರೀಗಳ ಹೇಳಿಕೆ ಚೀಕಲಪರ್ವಿಯಲ್ಲಿ ಸದಾಶಿವ ಸ್ವಾಮೀಜಿ ಚಿನ್ಮಯಾನುಗ್ರಹ


    ಮಾನ್ವಿ: ಮಠಕ್ಕೆ ಬರುವ ಭಕ್ತರನ್ನು ಗೌರವಿಸಿ, ಅವರಿಗೆ ಸರಿಯಾದ ಮಾರ್ಗದಲ್ಲಿ ನಡೆಸುವುದು ಗುರುವಿನ ಕರ್ತವ್ಯವಾಗಿದೆ ಎಂದು ಹಾಲ್ವಿ ಚರಣಗಿರಿ ಸಂಸ್ಥಾನಮಠದ ಅಭಿನವ ಮಹಾಂತ ಸ್ವಾಮೀಜಿ ಹೇಳಿದರು.

    ತಾಲೂಕಿನ ಚೀಕಲಪರ್ವಿ ರುದ್ರಮುನೀಶ್ವರ ಮಠದಲ್ಲಿ ಸೋಮವಾರ ಸದಾಶಿವ ಸ್ವಾಮೀಜಿಗೆ ಚಿನ್ಮಯಾನುಗ್ರಹ ಹಾಗೂ ಷಟಸ್ಥಲ ಬ್ರಹ್ಮೋಪದೇಶ ಅನುಗ್ರಹಿಸಿ ಮಾತನಾಡಿದರು. ಅನ್ನದಾನೀಶ್ವರ ದೇವರು ಸದಾಶಿವ ಸ್ವಾಮೀಜಿ ಆಗಿ ಶ್ರೀ ಮಠದ ಪೂಜ್ಯರಾಗಿದ್ದಾರೆ. ಭಕ್ತರು ಸದಾಶಿವ ಸ್ವಾಮೀಜಿರನ್ನು ಗೌರವದಿಂದ ಕಾಣಬೇಕು ಎಂದರು.

    ಶೂನ್ಯ ಪೀಠಾರೋಹಣ ಅಧಿಕಾರ ಸ್ವೀಕರಿಸಿದ ಸದಾಶಿವ ಸ್ವಾಮೀಜಿ ಮಾತನಾಡಿ, ಹಾಲ್ವಿಯ ಮಹಾಂತ ಸ್ವಾಮೀಜಿ, ರುದ್ರಮುನೀಶ್ವರ ಸ್ವಾಮೀಜಿ ಹಾಗೂ ಮಠದ ಭಕ್ತರ ಆಶಯದಂತೆ ಕಾರ್ಯನಿರ್ವಹಿಸಿ, ಶ್ರೀಮಠದ ಪರಂಪರೆಗೆ ಧಕ್ಕೆಯಾಗದಂತೆ, ಎಲ್ಲರ ವಿಶ್ವಾಸದೊಂದಿಗೆ ಮುನ್ನಡೆಯುತ್ತೇನೆ ಎಂದು ತಿಳಿಸಿದರು.

    ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಸಮಾಜ ಸುಧಾರಣೆಗೆ ಮಠಗಳು ಅವಶ್ಯವಾಗಿವೆ. ಶಿಕ್ಷಣ ಕ್ಷೇತ್ರಕ್ಕೆ ಮಠಗಳ ಕೊಡುಗೆ ಅಪಾರವಾಗಿದೆ. ಚೀಕಲಪರ್ವಿ ಲಿಂ.ವಿರೂಪಾಕ್ಷ ತಾತನವರು ತ್ರಿವಿಧ ದಾಸೋಹಿಗಳಾಗಿದ್ದರು, ಶಾಸಕನಾಗಿ ಶ್ರೀಮಠದ ಸೇವೆ ಮಾಡಿದ್ದೇನೆ. ಗ್ರಾಮದ ರಸ್ತೆಯನ್ನು ಅಭಿವೃದ್ಧಿ ಮಾಡಲಾಗಿದೆ. ಭಕ್ತರ ಅನುಕೂಲಕ್ಕಾಗಿ ಶ್ರೀಮಠಕ್ಕೆ ಯಾತ್ರಿ ನಿವಾಸ ಮಂಜೂರು ಮಾಡಿಸಿರುವುದಾಗಿ ತಿಳಿಸಿದರು.

    ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಸ್ವಾಮೀಜಿ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ರಾಯಚೂರು ಗ್ರಾಮೀಣ ಶಾಸಕ ದದ್ದಲ ಬಸನಗೌಡ, ಮಾಜಿ ಶಾಸಕರಾದ ಎನ್.ಎಸ್. ಬೋಸರಾಜು, ಹಂಪಯ್ಯನಾಯಕ, ಗಂಗಾಧರ ನಾಯಕ, ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಮುಖಂಡರಾದ ತಿಮ್ಮರಡ್ಡಿ ಭೋಗಾವತಿ, ರಾಜಾ ರಾಮಚಂದ್ರ ನಾಯಕ, ಶರಣಪ್ಪಗೌಡ ಸಿರವಾರ, ಡಾ.ಶರಣಪ್ಪ ಬಲ್ಲಟಗಿ, ಶರಣಪ್ಪಗೌಡ ನಕ್ಕುಂದಿ, ಮಲ್ಲಿಕಾರ್ಜುನಗೌಡ ಬಲ್ಲಟಗಿ, ವೀರನಗೌಡ ಪೋತ್ನಾಳ, ಡಾ.ಶಂಕರಗೌಡ, ಡಾ.ಚಂದ್ರಶೇಖರ ಸುವರ್ಣಗಿರಿಮಠ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts