More

    ಕಲರ್​ನಲ್ಲಿ ಮಂತ್ರಾಲಯ ಮಹಾತ್ಮೆ

    ಬೆಂಗಳೂರು: ತಾವು ಅಭಿನಯಿಸಿದ ಚಿತ್ರಗಳ ಪೈಕಿ, ತಮ್ಮ ಮನಸ್ಸಿಗೆ ಬಹಳ ಹತ್ತಿರವಾದ ಚಿತ್ರ ಯಾವುದಾದರೂ ಇದ್ದರೆ ಅದು ‘ಮಂತ್ರಾಲಯ ಮಹಾತ್ಮೆ’ ಎಂದು ಡಾ. ರಾಜಕುಮಾರ್ ಬಹಳಷ್ಟು ಬಾರಿ ಹೇಳಿಕೊಂಡಿದ್ದುಂಟು. 60ರ ದಶಕದಲ್ಲಿ ಬಿಡುಗಡೆಯಾದ ಈ ಬ್ಲಾಕ್ ಆಂಡ್ ವೈಟ್ ಚಿತ್ರವು, ಇದೀಗ ಕಲರ್​ನಲ್ಲಿ ತಯಾರಾಗುತ್ತಿದ್ದು, ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

    ಕೆಲವು ವರ್ಷಗಳ ಹಿಂದೆ, ಡಾ. ರಾಜಕುಮಾರ್ ಅಭಿನಯದ ‘ಸತ್ಯ ಹರಿಶ್ಚಂದ್ರ’ ಚಿತ್ರವನ್ನು ಕಪು್ಪ-ಬಿಳುಪಿನಿಂದ ವರ್ಣಕ್ಕೆ ಮಾರ್ಪಾಡು ಮಾಡಲಾಗಿತ್ತು. ಹೀಗೆ ಮಾರ್ಪಾಡಾದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ‘ಸತ್ಯ ಹರಿಶ್ಚಂದ್ರ’ ಪಾತ್ರವಾಗಿತ್ತು. ಆ ನಂತರ ‘ಕಸ್ತೂರಿ ನಿವಾಸ’ ಚಿತ್ರವನ್ನು ಕಲರ್​ನಲ್ಲಿ ಬಿಡುಗಡೆ ಮಾಡಲಾಯ್ತು. ಇದೀಗ ಮೂರನೆಯ ಚಿತ್ರವಾಗಿ ‘ಮಂತ್ರಾಲಯ ಮಹಾತ್ಮೆ’ ಹೊರಬರುತ್ತಿದೆ. ‘ಮಂತ್ರಾಲಯ ಮಹಾತ್ಮೆ’ ಚಿತ್ರವನ್ನು ಟಿ.ವಿ. ಸಿಂಗ್ ಠಾಕೂರ್ ನಿರ್ದೇಶನ ಮಾಡಿದ್ದರು. ಹಿರಿಯ ನಿರ್ದೇಶಕ ಭಗವಾನ್ ಅವರು ಈ ಚಿತ್ರದ ಸಹ-ನಿರ್ದೇಶನ ಮಾಡುವುದರ ಜತೆಗೆ ನಿರ್ವಣದಲ್ಲೂ ಮಹತ್ವದ ಪಾತ್ರ ವಹಿಸಿಕೊಂಡಿದ್ದರು. ಈಗ ಭಗವಾನ್ ಅವರ ಮೇಲ್ವಿಚಾರಣೆಯಲ್ಲೇ ಈ ಚಿತ್ರ ಸಹ ಕಲರ್ ಆಗುತ್ತಿದೆ.

    ಇದನ್ನೂ ಓದಿ: ಅಪಪ್ರಚಾರ ಮಾಡಿದ್ದಕ್ಕೆ ಹೆಂಡತಿಗೆ ನವಾಜುದ್ದೀನ್​ ಏನ್ಮಾಡಿದ್ರು ಗೊತ್ತಾ?

    ಈ ಕುರಿತು ‘ವಿಜಯವಾಣಿ’ಯ ಜತೆಗೆ ಮಾತನಾಡಿರುವ ಹಿರಿಯ ನಿರ್ದೇಶಕ ಭಗವಾನ್, ‘ಈ ಚಿತ್ರವನ್ನು ಕಲರ್​ನಲ್ಲಿ ಮಾಡುವುದು ಪಾರ್ವತಮ್ಮ ರಾಜಕುಮಾರ್ ಅವರ ಆಸೆಯಾಗಿತ್ತು. ‘ಕಸ್ತೂರಿ ನಿವಾಸ’ ಚಿತ್ರವನ್ನು ಕಲರ್​ನಲ್ಲಿ ಬಿಡುಗಡೆ ಮಾಡಿದಿರಿ, ‘ಮಂತ್ರಾಲಯ ಮಹಾತ್ಮೆ’ ಚಿತ್ರವನ್ನೂ ಮಾಡಿದರೆ ಚೆನ್ನಾಗಿರುತ್ತದೆ ಎಂದು ಅವರು ಹೇಳಿದ್ದರು. ಅವರ ಆಸೆ ಈಗ ಕಾರ್ಯರೂಪಕ್ಕೆ ಬರುತ್ತಿದೆ’ ಎನ್ನುತ್ತಾರೆ ಅವರು. ಲಾಕ್​ಡೌನ್ ಶುರುವಾಗುವುದಕ್ಕಿಂತ ಮುಂಚೆಯೇ, ‘ಮಂತ್ರಾಲಯ ಮಹಾತ್ಮೆ’ ಚಿತ್ರದ ಕಲರಿಂಗ್ ಕೆಲಸ ಬೆಂಗಳೂರಿನಲ್ಲಿ ಪ್ರಾರಂಭವಾಗಿದೆಯಂತೆ. ವರ್ಷದ ಕೊನೇ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಚಿತ್ರ ರಿಲೀಸ್ ಆಗುವ ಸಾಧ್ಯತೆ ಇದೆ.

    VIDEO: ಚಿನ್ನದ ಚೆಂಡಿನಂತೆ ಕಾಣುವ ಸೂರ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts