ಕಮಲಾಪುರ: ಮಾರುತಿ ಮಾನ್ಪಡೆ ಅವರು ಜೀವನದುದ್ದಕ್ಕೂ ಹಿಂದುಳಿದವರು, ಬಡವರು ಹಾಗೂ ಕಾರ್ಮಿಕ ಧ್ವನಿಯಾಗಿ ಕೆಲಸ ಮಾಡಿದ್ದಾರೆ ಎಂದು ಮಾಜಿ ಸಚಿವ ರೇವುನಾಯಕ ಬೆಳಮಗಿ ಬಣ್ಣಿಸಿದರು.
ಅಂಬಲಗಾದಲ್ಲಿ ಕಾಮ್ರೇಡ್ ಮಾರುತಿ ಮಾನ್ಪಡೆ ಅವರ ಅಭಿಮಾನಿಗಳ ಸಂಘ ಹಾಗೂ ಗ್ರಾಮ ಪಂಚಾಯಿತಿ ನೌಕರರ ಸಂಘದಿAದ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಮಿಕ ನಾಯಕ ಮಾರುತಿ ಮಾನ್ಪಡೆ ಅವರ ಮೂರನೇ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಡೀ ಜೀವನವನ್ನೇ ಹೋರಾಟಕ್ಕೆ ಮೀಸಲಿಟ್ಟಿದ್ದರು. ಮಾನ್ಪಡೆ ಅವರ ಸರಳ ವ್ಯಕ್ತಿತ್ವ ಹಾಗೂ ಹೋರಾಟ ಮನೋಭಾವ ಇಂದಿನ ಯುವಜನತೆಗೆ ಮಾದರಿ ಎಂದು ತಿಳಿಸಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಹಾಯಕ ಆಯುಕ್ತ ಸಿ.ಬಿ.ಪಾಟೀಲ್ ಓಕಳಿ ಮಾತನಾಡಿ, ಹೋರಾಟಗಾರರ ಬದುಕು ಮುಳ್ಳಿನ ಹಾಸಿಗೆಯಂತೆ. ಮಾನ್ಪಡೆ ಅದೆಷ್ಟೋ ಬಾರಿ ಪೊಲೀಸರಿಂದ ಏಟು ತಿಂದರೂ ಹಿಂಜರಿದಯದೆ ಜನತೆಗೆ ನ್ಯಾಯ ಒದಗಿಸಿಕೊಟ್ಟಿದ್ದರು ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಶರಣಬಸ್ಸಪ್ಪ ಪಾಟೀಲ್ ಅಷ್ಟಗಿ, ಜಿ¯್ಲÁ ಕಾರ್ಮಿಕ ಮುಖಂಡ ಸುನೀಲ್ ಮಾನ್ಪಡೆ, ಕಸಾಪ ತಾಲೂಕು ಅಧ್ಯP್ಷÀ ಸುರೇಶ ಲೇಂಗಟಿ ಮಾತನಾಡಿದರು. ಪ್ರಮುಖರಾದ ರೇವಪ್ಪ ಚಿಲಿ, ಕುಪೆಂದ್ರ ದಂಡಿನ್, ಬಂಡಪ್ಪ ಚಿಲಿ, ರಾಬಿಯಾ ಬೇಗಂ, ಅಂಬಾರಾಯ ಲೇಂಗಟಿ, ನಾಗಪ್ಪ ನಾಗೂರೆ, ಭೀಮಶಾ ಭಾಲ್ಕಿ, ಸಂಗಮೇಶ ಕಲಬುರಗಿ, ಬಸವರಾಜ ಸರಡಗಿ, ಅನಂತ ಪಾಟೀಲ್, ನಾಗಪ್ಪ ಛತ್ರಿ, ಮಲ್ಲಿನಾಥ ಅಂಬಲಗಿ, ಅವಿನಾಶ ಸಿಂಗೆ, ಪಂಡಿತ ಒಡೆಯರಾಜ ಇತರರಿದ್ದರು. ದಿಲೀಪ್ ಪೂಜಾರಿ ನಿರೂಪಣೆ ಮಾಡಿದರು. ಗುಂಡಪ್ಪ ಕೊಳ್ಳುರೆ ಸ್ವಾಗತಿಸಿದರು. ಸುಭಾಶಚಂದ್ರ ವಾಲಿ ವಂದಿಸಿದರು.