More

    ‘ಅದೃಷ್ಟ ಬೇಕೆಂದರೆ ಯಾವ ಕಡೆ ಹೋಗಬೇಕು’- ಹೀಗೆ ಎಂದಾದರೂ ಆಲೋಚಿಸಿದ್ದೀರಾ?

    ‘ಅದೃಷ್ಟ ಬೇಕೆಂದರೆ ಯಾವ ಕಡೆ ಹೋಗಬೇಕು’- ಹೀಗೆ ಎಂದಾದರೂ ಆಲೋಚಿಸಿದ್ದೀರಾ? ಜಯಶ್ರೀ ಜೆ. ಅಬ್ಬಿಗೇರಿ

    ಒಬ್ಬ ವ್ಯಕ್ತಿಯು ಕಾಡಿನಲ್ಲಿ ತಪಸ್ಸು ಮಾಡುತ್ತಿರುವ ಋಷಿಯನ್ನು- ‘ಅದೃಷ್ಟ ಬೇಕೆಂದರೆ ಯಾವ ಕಡೆ ಹೋಗಬೇಕು’ ಎಂದು ಕೇಳಿದ. ‘ಆ ಕಡೆ…’ ಎಂದು ದಾರಿ ತೋರಿಸಿದ ಋಷಿ. ಆ ವ್ಯಕ್ತಿ ಹೊರಟ. ಆದರೆ ‘ಅಲ್ಲೊಂದು ಮುಳ್ಳಿನ ಬೇಲಿಯಿದೆ’ ಎನ್ನುತ್ತ ಹಿಂತಿರುಗಿ ಬಂದ. ಆ ವಿಷಯ ಋಷಿಗೆ ಹೇಳಿದ. ಋಷಿ ನಗುತ್ತ-‘ಅದು ಬೇಲಿಯಾಚೆ ಇದೆ. ಈಗ ಅದನ್ನು ಬೇರೊಬ್ಬರು ತೆಗೆದುಕೊಂಡು ಹೋದರು. ಅತ್ತ ತಿರುಗಿ ಮನೆಗೆ ಹೋಗು…’ ಎಂದನಂತೆ. ಇದು ನಮ್ಮೆಲ್ಲರ ಕಥೆಯೂ ಹೌದು. ಅದೃಷ್ಟ ಅಲ್ಲಿದೆ, ಇಲ್ಲಿದೆ ಅಂತ ದಿನವೂ ಅರಸುತ್ತ, ಮಾಡಬೇಕಾದ ಕೆಲಸವನ್ನು ಮರೆತು ಬಿಡುತ್ತೇವೆ.

    ಇದನ್ನೂ ಓದಿ: ಎನ್​ಡಿಎಯಿಂದ ಎಲ್​ಜೆಪಿ ಔಟ್: ನಿತೀಶ್ ವಿರುದ್ಧ ತೊಡೆ ತಟ್ಟಿದ ಪಾಸ್ವಾನ್​

    ಒಬ್ಬ ಬುದ್ಧಿವಂತ ಅವಕಾಶವನ್ನು ಒಳ್ಳೆಯ ಭಾಗ್ಯವನ್ನಾಗಿ ಬದಲಾಯಿಸುತ್ತಾನೆ. ಮನಸ್ಸಿದ್ದಲ್ಲಿ ಮಾರ್ಗ ತಾನಾಗೇ ಕಾಣುತ್ತದೆ. ಅದೃಷ್ಟ, ಕರ್ಮ ಎಂದು ಎಣಿಸುತ್ತ ಕುಳಿತುಕೊಳ್ಳದೆ ಕಾರ್ಯಗಳು ಮಾತುಗಳಿಗಿಂತ ಗಟ್ಟಿಯಾಗಿ ಮಾತನಾಡುತ್ತವೆ ಎಂಬುದನ್ನು ಅರಿಯಬೇಕು. ಗುರಿಗೆ ಸಂಬಂಧಿಸಿದ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಕೆಟ್ಟ ವಸ್ತುಗಳನ್ನು ಸುಲಭವಾಗಿ ಪಡೆಯಬಹುದು. ಎಲ್ಲ ಒಳ್ಳೆಯ ವಸ್ತುಗಳನ್ನು ಸಾಧಿಸುವುದು ಕಷ್ಟ. ಅದೃಷ್ಟವೆನ್ನುವುದು ಎಲ್ಲ ಸಮಸ್ಯೆಗಳನ್ನು ತಪ್ಪಿಸುವ ಮಂತ್ರದಂಡವಲ್ಲ. ವಿಧಿ, ಅದೃಷ್ಟ ನಮ್ಮ ಕೈಯಲಿಲ್ಲ. ನಮ್ಮ ಕೈಯಲ್ಲಿರೋದು ಪ್ರಯತ್ನ ಮತ್ತು ನಮ್ಮ ಮೇಲೆ ನಮಗಿರುವ ನಂಬಿಕೆ. ಆದ್ದರಿಂದ ನಮ್ಮ ಶಕ್ತಿ ಸಾಮರ್ಥ್ಯವನ್ನು ಅದೃಷ್ಟದ ಆಟಕ್ಕೆ ವ್ಯಯಿಸದೆ, ಪ್ರಖರವಾದ ಪ್ರಯತ್ನಕ್ಕೆ ವ್ಯಯಿಸಬೇಕು. ‘ಸರಿಯಾದ ಸಮಯದಲ್ಲಿ ಸರಿಯಾದ ಕೆಲಸವನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ದೊರೆಯುವ ಫಲಿತಾಂಶವೇ ಒಂದು ಥರ ಅದೃಷ್ಟ ಇದ್ದಂತೆ’. ವಿಧಿ ಎಂಬುದು ಒಂದು ಅವಕಾಶದ ವಿಷಯವಲ್ಲ. ಅದು ಆಯ್ಕೆಯ ವಿಷಯ. ಬೇರೆ ಯಾರೋ ನಮ್ಮನ್ನು ನಂಬದೆ ಹೋದರೆ ಏನೂ ವ್ಯತ್ಯಾಸ ಆಗುವುದಿಲ್ಲ. ಆದರೆ ನಮ್ಮ ಸಾಮರ್ಥ್ಯವನ್ನು ನಾವೇ ನಂಬದೆ ಅದೃಷ್ಟದ ಕಡೆ ಕೈ ತೋರಿಸುತ್ತ ಕುಳಿತರೆ ಅದೃಷ್ಟವಂತೂ ಖುಲಾಯಿಸುವುದಿಲ್ಲ. ದುರಾದೃಷ್ಟ ತನ್ನ ಖಾತೆಯನ್ನು ತೆರೆದು ನಮ್ಮ ಜೊತೆಗೆ ನೆರಳಿನಂತೆ ಹಿಂಬಾಲಿಸುವುದು ಖಚಿತ. ಪ್ರಯತ್ನಿಸದಿದ್ದರೆ ದುರಾದೃಷ್ಟ ನಮ್ಮನ್ನು ಬಿಟ್ಟು ಕದಲಲ್ಲ ಎನ್ನುವುದು ಅನುಭವಿಕರ ನುಡಿ.

    ಇದನ್ನೂ ಓದಿ: ಕುಸುಮಾ ತಲೆ ಮೇಲೆ ‘ಕೈ’ ಇಟ್ರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ !

    ‘ಅದೃಷ್ಟ, ಸಂದರ್ಭ ಇವು ನಮಗೆ ಅಧೀನವಾಗುವಂತೆ ಪ್ರಯತ್ನಿಸಬೇಕಲ್ಲದೆ, ನೀವು ಅದಕ್ಕೆ ತುತ್ತಾಗಬಾರದು’ ಎನ್ನುತ್ತಾನೆ ಎ.ಎಂ ಜೊಸೆಫ್. ಭಾಗ್ಯದ ಬೆನ್ನು ಹತ್ತಿ ನಾವು ಓಡುವಂತೆ, ಭಾಗ್ಯವಂತರ ಬೆನ್ನು ಹತ್ತಿ ಭಾಗ್ಯ ಓಡುತ್ತಿರುತ್ತದೆ. ಬಹುತೇಕ ಜನರು ಅದೃಷ್ಟಕ್ಕಾಗಿ ತವಕಿಸುತ್ತಾರೆ. ಪ್ರಯತ್ನವೆಂಬ ಇಂಧನ ಹಾಕದೇ ಅದೃಷ್ಟ ಬಳಿ ಬರುವುದಿಲ್ಲ. ಪ್ರಪಂಚದ ಎಲ್ಲ ಗೆಲುವುಗಳೂ ‘ಪ್ರಯತ್ನ ನೀಡಿ ದಯವಿಟ್ಟು’ ಎನ್ನುತ್ತವೆ. ಆತ್ಮವಿಶ್ವಾಸ ಮತ್ತು ನಿರಂತರ ಪ್ರಯತ್ನವಿದ್ದರೆ ಅದೃಷ್ಟ ನಮ್ಮದಾಗುವುದು ನಿಶ್ಚಿತ.
    (ಲೇಖಕಿ ಆಂಗ್ಲಭಾಷಾ ಉಪನ್ಯಾಸಕಿ)

    ಬಿಹಾರ ಚುನಾವಣೆ | ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts