More

    ಚಾಟ್ ಮಸಾಲ ಮಾಡಿದ್ದಾರೆ ಮನೋಹರ್!

    ಲಾಕ್‌ಡೌನ್ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಲ್ಲಿ ಹಲವು ಪ್ರಯೋಗಗಳಾಗಿವೆ. ಕೆಲವರು ಮನೆಯಲ್ಲಿದ್ದುಕೊಂಡೇ ಹಾಡು ಮಾಡಿದರೆ, ಇನ್ನೂ ಕೆಲವರು ಕಿರುಚಿತ್ರ ಮಾಡಿದ್ದಾರೆ. ವೆಂಕಟ್ ಭಾರದ್ವಾಜ್ 90 ನಿಮಿಷದ ಚಿತ್ರ ನಿರ್ದೇಶಿಸಿದ್ದಾರೆ. ಈಗ ವಿ. ಮನೋಹರ್ 45 ನಿಮಿಷಗಳ ‘ಚಾಟ್ ಮಸಾಲ’ ಎಂಬ ಚಿತ್ರ ಮಾಡಿದ್ದಾರೆ. ವಿಶೇಷ ಎಂದರೆ, ಇದೊಂದು ಸಂಗೀತಮಯ ಚಿತ್ರ. ಮ್ಯೂಸಿಕಲ್ ಸಿನಿಮಾ ಎನ್ನುವುದಕ್ಕಿಂತ 20 ಹಾಡುಗಳ ಸಂಕಲನ ಎನ್ನುತ್ತಾರೆ ಅವರು.

    ಇದನ್ನೂ ಓದಿ: ಅವಮಾನ ಆಯ್ತು ಅಂತ ಕಂಪ್ಲೇಂಟ್ ಕೊಟ್ಟ ವಡಿವೇಲು!

    ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ವಿ. ಮನೋಹರ್, ‘ಇದೊಂದು ವಿಭಿನ್ನ ಸಿನಿಮಾ ಹಾಡುಗಳ ಮೂಲಕವೇ ಕಥೆ ಸಾಗುತ್ತದೆ. ಕಥೆ ಎನ್ನುವುದಕ್ಕಿಂತ, ಹಾಡಿನಿಂದ ಚಿತ್ರ ಶುರುವಾಗಿ, ಹಾಡಿನಿಂದ ಮುಗಿಯುತ್ತದೆ. ಲಾಕ್‌ಡೌನ್ ಸಮಯದಲ್ಲಿ ಮನುಷ್ಯನ ಇಂದ್ರಿಯಗಳು ಮತ್ತು ಅಂಗಾಂಗಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತವೆ. ಪ್ರತಿ ಅಂಗಾಂಗ ಸಹ ಮನುಷ್ಯನ ರೂಪದಲ್ಲಿ ಇರುವುದು ವಿಶೇಷ.

    ಉದಾಹರಣೆಗೆ ಎರಡು ಕಣ್ಣುಗಳ ಪಾತ್ರವನ್ನು ಇಬ್ಬರು ಹುಡುಗಿಯರು ಮಾಡಿದ್ದಾರೆ. ಮೂಗು ಪಾತ್ರದಲ್ಲಿ ಮೂಗು ಸುರೇಶ್ ಇದ್ದರೆ, ಹಲ್ಲುಗಳಾಗಿ ಮೈಸೂರು ರಮಾನಂದ್ ಮಾಡಿದ್ದಾರೆ. ಇನ್ನು ಮಿಮಿಕ್ರಿ ದಯಾನಂದ್, ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಸೇರಿದಂತೆ 23 ಕಲಾವಿದರಿದ್ದಾರೆ’ ಎನ್ನುತ್ತಾರೆ.

    ಇದನ್ನೂ ಓದಿ: 10ನೇ ಕ್ಲಾಸ್‌ನಲ್ಲಿ ಸಮಂತಾ ಪಡೆದ ಮಾರ್ಕ್ಸ್ ಎಷ್ಟು ಗೊತ್ತಾ?

    ಇಲ್ಲಿ ಕ್ಯಾಮೆರಾಮ್ಯಾನ್, ಲೈಟ್ಸ್, ಮೇಕಪ್, ಗ್ರಾಫಿಕ್ಸ್, ಸ್ಟುಡಿಯೋ ಯಾವುದೂ ಇಲ್ಲವಂತೆ. ‘ಇಂಥದ್ದೊಂದು ಚಿತ್ರ ಯಾಕೆ ಮಾಡಬಾರದು ಎಂದು ಯೋಚನೆ ಬಂದಿದ್ದೆ, ಕಲಾವಿದರನ್ನು ಸಂಪರ್ಕಿಸಿದೆ. ಎಲ್ಲರೂ ತಮ್ತಮ್ಮ ಮನೆಗಳಲ್ಲೇ ಶೂಟ್ ಮಾಡಿ ಕಳಿಸಿದ್ದಾರೆ. ಕಲಾವಿದರೆಲ್ಲಾ, ತಮ್ಮ ಸಂಬಂಧಿಕರ ಸಹಾಯದಿಂದ ಮೊಬೈನಲ್‌ನಲ್ಲಿ ಶೂಟ್ ಮಾಡಿ ಕಳಿಸಿದ್ದಾರೆ.

    ಅದಲ್ಲದೆ ಬಿ.ಆರ್. ಛಾಯಾ, ನಕುಲ್ ಅಭಯಂಕರ್, ರಮ್ಯಾ ಭಟ್, ಚೇತನ್ ನಾಯಕ್, ಬಿ.ಜೆ. ಭರತ್ ಸೇರಿದಂತೆ 14 ಮಂದಿ ಗಾಯಕ-ಗಾಯಕಿಯರು ಹಾಡಿದ್ದಾರೆ. ಒಂಬತ್ತು ಮಂದಿ ಸಂಗೀತಗಾರರು ಕೆಲಸ ಮಾಡಿದ್ದಾರೆ. ಇವರೆಲ್ಲರ ಶ್ರಮದಿಂದ ಈ ಚಿತ್ರ ಮೂಡಿ ಬಂದಿದೆ ಎಂದು ಹೇಳುವುದಕ್ಕೆ ಮನೋಹರ್ ಮರೆಯುವುದಿಲ್ಲ.

    ರವಿಚಂದ್ರನ್ ಅಭಿನಯದಲ್ಲಿ ಸಿನಿಮಾ ಮಾಡ್ತಾರಾ ಗಿರಿರಾಜ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts