More

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಅನಾರೋಗ್ಯ: ರಜೆ ಕೋರಿ ರಾಜ್ಯಸಭೆಗೆ ಅರ್ಜಿ

    ನವದೆಹಲಿ: ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಅನಾರೋಗ್ಯ ಕಾರಣ ರಜೆ ಕೋರಿ ರಾಜ್ಯಸಭೆ ಚೇರ್​ಮನ್​ಗೆ ಅರ್ಜಿ ಸಲ್ಲಿಸಿದ್ದಾರೆ. ಈ ವಿಷಯವನ್ನು ರಾಜ್ಯಸಭೆಯ ಚೇರ್​ಮನ್ ಕೂಡ ಆಗಿರುವ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಸೋಮವಾರ ಸದನದಲ್ಲಿ ಪ್ರಸ್ತಾಪಿಸಿದ್ದರು.

    ರಾಜ್ಯಸಭೆ ಕಲಾಪ ಆರಂಭವಾದ ಬೆನ್ನಲ್ಲೆ ರಾಜ್ಯಸಭೆಯ ಚೇರ್​ಮನ್​ ಎಂ.ವೆಂಕಯ್ಯ ನಾಯ್ಡು ಅವರು ಈ ವಿಷಯ ಪ್ರಸ್ತಾಪಿಸಿದ್ದು, ಅನಾರೋಗ್ಯ ನಿಮಿತ್ತ ಮಾರ್ಚ್​ 19ರಿಂದ ರಾಜ್ಯಸಭೆಯ ಕಲಾಪದಲ್ಲಿ ಕುಳಿತಿರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಲಾಪದ ಉಳಿದ ದಿನಗಳ ಅವಧಿಗೆ ರಜೆಯನ್ನು ಮಂಜೂರು ಮಾಡುವಂತೆ ಡಾ.ಮನಮೋಹನ್ ಸಿಂಗ್ ಅವರು ಕೋರಿದ್ದಾರೆ. ಅವರ ಕೋರಿಕೆಯ ಪ್ರಕಾರ ಅವರಿಗೆ ರಜೆಯನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಇದಾದ ನಂತರದಲ್ಲಿ ಕರೊನಾ ವೈರಸ್ ಸೋಂಕು ಹರಡುತ್ತಿರುವ ಕಾರಣ ರಾಜ್ಯಸಭೆಯ ಕಲಾಪವನ್ನು ಅನಿರ್ದಿಷ್ಟಾವಧಿಗೆ ಉಪರಾಷ್ಟ್ರಪತಿಗಳು ಮುಂದೂಡಿದ್ದಾರೆ. ಪೂರ್ವ ನಿಗದಿತ ವೇಳಾಪಟ್ಟಿ ಪ್ರಕಾರ ರಾಜ್ಯಸಭೆಯ ಕಲಾಪದಲ್ಲಿ ಮುಂಗಡಪತ್ರಕ್ಕೆ ಸಂಬಂಧಿಸಿದ ಚರ್ಚೆ ಆಗಬೇಕಾಗಿತ್ತು. ಇದು ಏಪ್ರಿಲ್ 3 ರ ತನಕ ನಡೆಯಬೇಕಾಗಿತ್ತು. (ಏಜೆನ್ಸೀಸ್)

    ‘ಸೈಕೋ’ ಡೈರೆಕ್ಟರ್​ಗೆ ಅದ್ವಿತಿ ಶೆಟ್ಟಿ ‘ಎಸ್’;  ‘ಶಿಕಾರಿಯ’ ಅಭಿಮನ್ಯು ನಾಯಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts