More

    ಮಂಜುಗುಣಿ ವೆಂಕಟರಮಣ ದೇವರ ಮಹಾರಥೋತ್ಸವ

    ಶಿರಸಿ: ತಿರುಮಲ ಯೋಗಿಗಳಿಂದ ಸ್ಥಾಪಿಸಲ್ಪಟ್ಟ ಕರ್ನಾಟಕದ ತಿರುಪತಿ ಎಂದೇ ಪ್ರಸಿದ್ಧಿಯಿರುವ ಕ್ಷೇತ್ರ ಮಂಜುಗುಣಿ ಶ್ರೀ ವೆಂಕಟರಮಣ ದೇವರ ವಾರ್ಷಿಕ ಮಹಾರಥೋತ್ಸವ ಗುರುವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.

    ಬೆಳಗ್ಗೆ ಮಹಾರಥ ಶುದ್ಧಿ, ರಥಪೂಜಾ ಸೇರಿ ವಿವಿಧ ಧಾರ್ವಿುಕ ಕಾರ್ಯಕ್ರಮ ನಡೆದವು. ಪದ್ಮಾವತಿ ದೇವಿ ಹಾಗೂ ವೆಂಕಟರಮಣ ದೇವರ ಮೂರ್ತಿಯನ್ನು ರಥದ ಬೆಳ್ಳಿ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟ ಧಾರ್ವಿುಕ ವಿಧಿವಿಧಾನ ನೆರವೇರಿಸಿದರು. ರಥದ ಗಾಲಿಗೆ ಕಾಯಿ ಒಡೆದ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಟರು. ಹೊರ ಜಿಲ್ಲೆ, ನಗರ, ಪಟ್ಟಣಗಳಿಂದಲೂ ಸಾವಿರಾರು ಜನರು ಆಗಮಿಸಿ ಉತ್ಸವ ಮೂರ್ತಿಯ ದರ್ಶನ ಪಡೆದರು.

    ಇದೇ ವೇಳೆ ವಿವಿಧ ಹರಕೆಯನ್ನು ಭಕ್ತರು ಪೂರೈಸಿದರು. ಕರೊನಾ ನಿಮಿತ್ತ ರಥಬೀದಿಯಲ್ಲಿ ಯಾವುದೇ ಅಂಗಡಿ ಹಾಕಲು ಅವಕಾಶ ಇರಲಿಲ್ಲ. ಹಣ್ಣು, ಕಾಯಿ ಸೇವೆಗೆ ದೇವಾಲಯದ ವತಿಯಿಂದಲೇ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಜ. 29ರಂದು ಬೆಳಗ್ಗೆ ಅವಭೃತ, ಅಪರಾಹ್ನ ವಸಂತಪೂಜಾ ಸಂವಾದ, ಕಲಹ (ಬಾಳೆಹಣ್ಣು ಎಸೆಯುವುದು), ಅಂಕುರ ಸಮರ್ಪಣ, ಪೂಜಾ ಪ್ರಸಾದ ವಿತರಣೆ, ಅವಭೃತ ತೀರ್ಥ ಸ್ನಾನ, ಪೂರ್ಣಾಹುತಿ, ಧ್ವಜಾವರೋಹಣ ನಡೆಯಲಿದೆ. ಜ. 31ರಂದು ಸಂಪ್ರೋಕ್ಷಣ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts