More

    ಸಿಎಂ ಮೇಲೆ ನರ್ಸ್​ಗಳು ಗರಂ: ಪಶ್ಚಿಮ ಬಂಗಾಳದಲ್ಲಿ ಏರುತ್ತಲೇ ಇದೆ ರಾಜೀನಾಮೆ- ಸುಸ್ತಾದ ದೀದಿ!

    ಕೋಲ್ಕತಾ: ಸದಾ ಕೇಂದ್ರ ಸರ್ಕಾರದ ಮೇಲೆ ಟೀಕಾಪ್ರಹಾರ ಮಾಡುತ್ತಲೇ ಕಾಲ ಕಳೆಯುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕರೊನಾ ವಾರಿಯರ್ಸ್​ ಮೇಲೆ ಹೆಚ್ಚಿಗೆ ಗಮನ ಕೊಡದ ಕಾರಣ ಇದೀಗ ನರ್ಸ್​ಗಳ ಕೋಪಕ್ಕೆ ಗುರಿಯಾಗಿದ್ದಾರೆ.

    ಪಶ್ಚಿಮ ಬಂಗಾಳದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ನೂರಾರು ನರ್ಸ್​ಗಳು ಸರ್ಕಾರದ ಕ್ರಮದಿಂದ ಬೇಸತ್ತು ಕಳೆದ 2-3 ದಿನಗಳಿಂದ ರಾಜೀನಾಮೆ ನೀಡುತ್ತಲೇ ಇದ್ದಾರೆ. ಈ ರಾಜೀನಾಮೆ ಸರಣಿ ಇವತ್ತಿಗೂ ಮುಂದುವರೆದಿದೆ.

    ಇದನ್ನೂ ಓದಿ: ಒಂದು ಲಕ್ಷ ದಾಟಿದ ಕರೊನಾ ಸೋಂಕು! ಯಾವ್ಯಾವ ರಾಜ್ಯ, ದೇಶಗಳ ಸ್ಥಿತಿ ಹೇಗಿದೆ? ಇಲ್ಲಿದೆ ಮಾಹಿತಿ

    ಇದಾಗಲೇ 300ಕ್ಕೂ ಅಧಿಕ ಶುಶ್ರೂಷಕಿಯರು ರಾಜೀನಾಮೆ ನೀಡಿರುವುದಾಗಿ ತಿಳಿದುಬಂದಿದೆ. ಈ ಪೈಕಿ ಕಳೆದ ಶನಿವಾರ (ಮೇ 16) ಒಂದೇ ದಿನ 169 ಮಂದಿ ರಾಜೀನಾಮೆ ನೀಡಿ ತಮ್ಮೂರಿಗೆ ವಾಪಸಾಗುತ್ತಿದ್ದಾರೆ.

    ಪಶ್ಚಿಮ ಬಂಗಾಳದಲ್ಲಿ ಹೆಚ್ಚುತ್ತಿರುವ ಕರೊನಾ ಸೋಂಕಿಗೆ ಹೆದರಿ ಅವರು ಜಾಗ ಖಾಲಿ ಮಾಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ಇದು ನಿಜವಾದರೂ ಸೋಂಕಿತರ ಚಿಕಿತ್ಸೆ ಮಾಡುವ ಆರೋಗ್ಯ ಸಿಬ್ಬಂದಿಗೆ ಸೂಕ್ತ ರಕ್ಷಣೆ ಒದಗಿಸದೇ ಇರುವುದು ನರ್ಸ್​ಗಳ ಕೋಪಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ಬಗ್ಗೆ ಕೆಲವು ನರ್ಸ್​ಗಳು ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಕೂಡ ತಿಳಿಸಿರುವುದಾಗಿ ಮೂಲಗಳು ಹೇಳಿವೆ.

    ಈ ನರ್ಸ್​ಗಳ ಪೈಕಿ 100ಕ್ಕೂ ಅಧಿಕ ಮಂದಿ ಮಣಿಪುರಕ್ಕೆ ಹೋಗಿದ್ದಾರೆ. ಮಣಿಪುರದ ಸರ್ಕಾರ ನರ್ಸ್​ಗಳಿಗೆ ಹೆಚ್ಚಿನ ಹಣದ ಆಮಿಷ ಒಡ್ಡುತ್ತಿದೆ ಎಂಬ ಆರೋಪವೂ ಬಂದಿದೆ. ಆದರೆ ಅಲ್ಲಿಯ ಸರ್ಕಾರ ಇದಾಗಲೇ ಈ ಆರೋಪವನ್ನು ತಳ್ಳಿಹಾಕಿದೆ. ಮಣಿಪುರ ಹೊರತುಪಡಿಸಿದರೆ, ತ್ರಿಪುರ, ಝಾರ್ಖಂಡ್​, ಒಡಿಶಾದವರು ಆಗಿದ್ದಾರೆ.

    ಇದನ್ನೂ ಓದಿ:  ‘ನಮ್ಮ ಮೆಟ್ರೊ’ ಸಂಚಾರಕ್ಕೆ ಕಾಯುತ್ತಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ…

    ಅಲ್ಲಿನ ಸರಕಾರ ಅವರಿಗೆ ತವರಿಗೆ ವಾಪಸು ಬಂದರೆ ಹೆಚ್ಚಿನ ಸಂಬಳ ನೀಡುವುದಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಆಮಿಷ ಒಡ್ಡಿರುವುದರಿಂದ ಶುಶ್ರೂಷಕಿಯರು ವಲಸೆ ಹೋಗಿದ್ದಾರೆ. ಬೇರೆ ಕಾರಣಗಳು ಇಲ್ಲವೇ ಇಲ್ಲ’ ಎಂದು ಅವರು ರವಿವಾರ ಪ್ರತಿಪಾದಿಸಿದ್ದಾರೆ.

    ಈ ನಡುವೆ, ನರ್ಸ್​ಗಳು ತಮಗೆ ಸೂಕ್ತ ಸೌಲಭ್ಯ ಹಾಗೂ ರಕ್ಷಣೆ ನೀಡಿದರೆ, ತಾವು ವಾಪಸ್​ ಬರಲು ಸಿದ್ಧ ಇರುವುದಾಗಿ ಪಶ್ಚಿಮ ಬಂಗಾಳದ ಆರೋಗ್ಯ ಇಲಾಖೆಗೆ ಹೇಳಿದ್ದಾರೆ ಎಂದು ತಿಳಿದುಬಂದಿದೆ. ತಮಗೆ ಯಾವ ರೀತಿಯ ರಕ್ಷಣೆ ಇರಬೇಕು ಎನ್ನುವ ಬಗ್ಗೆಯೂ ನರ್ಸ್​ಗಳು ಷರತ್ತು ವಿಧಿಸಿದ್ದಾರೆ. ಆದರೆ ಸದ್ಯ ಅಂತೂ ರಾಜೀನಾಮೆ ಪ್ರಕ್ರಿಯೆ ಮುಂದುವರೆದಿದೆ.

    ಈಗಾಗಲೇ ಪಶ್ಚಿಮ ಬಂಗಾಳದಲ್ಲಿ 2,677 ಕರೊನಾ ಸೋಂಕು ಪತ್ತೆಯಾಗಿದ್ದು ಒಬ್ಬರೂ ಗುಣಮುಖರಾಗಿಲ್ಲ. ಸೋಂಕಿಗೆ ಇದಾಗಲೇ 238 ಮಂದಿ ಮೃತಪಟ್ಟಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts