More

    ಕೋಟ್ಯಂತರ ರೂ. ಕಳಪೆ ಮಾಸ್ಕ್ ಖರೀದಿಸಿ ಸಿಕ್ಕಿಬಿದ್ದ ಉನ್ನತ ಅಧಿಕಾರಿ!

    ಇಂಫಾಲ್: ಕರೊನಾ ವಾರಿಯರ್‌ಗಳಿಗೆ ಪೂರೈಸುವುದಕ್ಕಾಗಿ ಖರೀದಿಸಿದ್ದ ಕೋಟ್ಯಂತರ ರೂಪಾಯಿ ಬೆಲೆಯ ಮಾಸ್ಕ್, ಪಿಪಿಇ ಕಿಟ್ ಮುಂತಾದವುಗಳು ಕಳಪೆಯಾಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಅವುಗಳ ಖರೀದಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಷ್ಟ್ರೀಯ ಹೆಲ್ತ್ ಮಿಷನ್‌ನ ಮಣಿಪುರ ರಾಜ್ಯ ಘಟಕದ ನೋಡಲ್ ಅಧಿಕಾರಿಯನ್ನು ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ.

    ಬಂಧಿತ ಮಣಿಪುರದ ಆರೋಗ್ಯ ನಿರ್ದೇಶನಾಲಯದ ಹಿರಿಯ ಅಧಿಕಾರಿ ಡಾ. ಎಂ. ದಿನೇಶ್‌ಸಿಂಗ್ ಅವರನ್ನು ರಾಜ್ಯ ವಿಚಕ್ಷಣೆ ಮತ್ತು ಭ್ರಷ್ಟಾಚಾರ ತಡೆ ವಿಭಾಗದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಚುರಾಚಂದ್ಪುರ ಜಿಲ್ಲಾ ಆಸ್ಪತ್ರೆಗೆ ಪೂರೈಸಿದ ಎನ್ 95 ಮಾಸ್ಕ್‌ಗಳು ಕಳಪೆಯಾಗಿವೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು 2 ತಿಂಗಳ ಹಿಂದೆಯೇ ವೈದ್ಯಕೀಯ ನಿರ್ದೇಶನಾಲಯದ ದಾಸ್ತಾನು ಮಳಿಗೆಗೆ ದಾಳಿ ಮಾಡಿ ಪರಿಶೀಲಿಸಿದ್ದರು. ಅಲ್ಲಿ ಸಾವಿರಾರು ಕಳಪೆ ಎನ್95 ಮಾಸ್ಕ್‌ಗಳನ್ನು ಮತ್ತು ಕರೊನಾಕ್ಕೆ ಸಂಬಂಧಿಸಿದ ಇತರ ಪರಿಕರಗಳನ್ನು ವಶಪಡಿಸಿಕೊಂಡಿದ್ದರು. ನಂತರ ಅವುಗಳನ್ನು ಪೂರೈಸಿದ ಕಂಪನಿಗಳ ಐವರು ಮಾಲೀಕರು ಮತ್ತು ಸಂಬಂಧಿಸಿದ ಸರ್ಕಾರಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಇದನ್ನೂ ಓದಿ; ಮಗಳಿಗೆ ಇಂಡಿಯಾ ಎಂದು ಹೆಸರಿಟ್ಟ ವ್ಯಕ್ತಿಯೀಗ ಭಾರತದಲ್ಲೇ ಇಂಗ್ಲೆಂಡ್​ ಹೈಕಮೀಷನರ್​

    ಈವರೆಗಿನ ತನಿಖೆಯಲ್ಲಿ ಡಾ. ದಿನೇಶ್ ಇದೆಲ್ಲದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದು ದೃಢಪಟ್ಟಿದೆ. ಈ ಅಧಿಕಾರಿ ಯಾವುದೇ ಕಂಪನಿಗೆ ಅಧಿಕೃತವಾಗಿ ಸರಬರಾಜು ಆರ್ಡರ್ ನೀಡದೇ ಪರಿಕರಗಳನ್ನು ತರಿಸಿಕೊಂಡು ಹಣ ಪಾವತಿ ಮಾಡಿಸಿದ್ದಾರೆ. ಇದರಲ್ಲಿ ಚುರಚಂದ್ಪುರ ಜಿಲ್ಲಾಸ್ಪತ್ರೆಗೆ ಸಾಗಿಸಿದ ಪರಿಕರಗಳೂ ಸೇರಿವೆ. ಅವ್ಯವಹಾರದ ಒಟ್ಟು ಮೌಲ್ಯ ಸಂಪೂರ್ಣ ತನಿಖೆಯ ಬಳಿಕವೇ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಅಧಿಕಾರಿಯನ್ನು ನಾಳೆ ಇಂಫಾಲ್‌ನ ವಿಶೇಷ ನ್ಯಾಯಾಧೀಶರೆದುರು ಹಾಜರುಪಡಿಸಲಾಗುವುದು ಎಂದೂ ಹೇಳಿದ್ದಾರೆ.

    ಮತ್ತೆ ಶುರುವಾಯ್ತಾ ಲಾಕ್​ಡೌನ್​ ಯುಗ..? ಕರೊನಾ ತಡೆಗೆ ರಾಜ್ಯಗಳಿಂದಲೇ ಕಠಿಣ ಕ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts