More

    ಭಾರತದ ಅತಿದೊಡ್ಡ ಆಸ್ತಿ ಎಂದರೆ ಪಾಕಿಸ್ತಾನಿಗಳು; ಅವರ ಮುಂದೆ ಕುಳಿತು ಮಾತನಾಡುವ ಧೈರ್ಯ ನಮಗಿಲ್ಲ: ಹಿರಿಯ ಕಾಂಗ್ರೆಸ್​ ನಾಯಕ

    ವದೆಹಲಿ: ಕಾಂಗ್ರೆಸ್​ ನಾಯಕರಿಗೂ ವಿವಾದಾತ್ಮಕ ಹೇಳಿಕೆಗಳಿಗೂ ಅವಿನಾಭಾವ ಸಂಬಂಧ ಇದೆ ಎಂದು ಹೇಳಬಹುದಾಗಿದೆ. ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್​ ನಾಯಕರ ಹೇಳಿಕೆ ಹಲವಾರು ವಿವಾದಗಳಿಗೆ ಆಸ್ಪದ ಮಾಡಿಕೊಡುತ್ತಿದ್ದು, ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮಣಿಶಂಕರ್​ ಅಯ್ಯರ್​ ಪಾಕಿಸ್ತಾನಿಗಳು ಭಾರತದ ದೊಡ್ಡ ಆಸ್ತಿ ಎಂದು ಹೇಳುವ ಮೂಲಕ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ.

    ಕಳೆದ ಕೆಲ ದಿನಗಳ ಹಿಂದೆ ಲಾಹೋರ್​ನ ಅಲ್ಹಮ್ರಾದಲ್ಲಿ ನಡೆದ ಫೈಜ್ ಉತ್ಸವವನ್ನು ಉದ್ಧೇಶಿಸಿ ಮಾತನಾಡಿದ ಅಯ್ಯರ್, ನನ್ನ ಅನುಭವದ ಪ್ರಕಾರ ಹೇಳಬೇಕಾದರೆ ಪಾಕಿಸ್ತಾನಿಗಳು ನಾವು ಸ್ನೇಹಪರರಾಗಿದ್ದರೆ, ಅವರು ಅತಿಯಾದ ಸ್ನೇಹಪರರು, ಮತ್ತು ನಾವು ಪ್ರತಿಕೂಲರಾಗಿದ್ದೇವೆ, ಅವರು ಅತಿಯಾಗಿ ಪ್ರತಿಕೂಲರಾಗುತ್ತಾರೆ.

    ನಾನು (ಪಾಕಿಸ್ತಾನದ) ಜನರಿಗೆ ಕೇಳಿಕೊಳ್ಳುವುದೆಂದರೆ (ಪಿಎಂ) ಮೋದಿ ಅವರು ಎಂದಿಗೂ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಮತಗಳನ್ನು ಪಡೆದಿಲ್ಲ. ಆದರೆ, ನಮ್ಮ ವ್ಯವಸ್ಥೆಯು ಮೂರನೇ ಒಂದು ಭಾಗದಷ್ಟು ಮತಗಳನ್ನು ಹೊಂದಿದ್ದರೆ, ಅವರು ಮೂರನೇ ಎರಡರಷ್ಟು ಮತಗಳನ್ನು ಹೊಂದಿದ್ದಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಆದ್ದರಿಂದ ಮೂರನೇ ಎರಡರಷ್ಟು ಭಾರತೀಯರು ನಿಮ್ಮ (ಪಾಕಿಸ್ತಾನದವರು) ಕಡೆಗೆ ಬರಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಸಿದ್ದರಾಮಯ್ಯನವರೇ ಏನಿಲ್ಲ… ಏನಿಲ್ಲ; ಸಿಎಂರನ್ನು ಬೆಂಬಿಡದ ಕಾಡಿದ ಉಪ್ಪಿ ಹಾಡು

    ಭಾರತದಲ್ಲಿನ ಹಿಂದುತ್ವವಾದಿ ಸರ್ಕಾರವು ಪಾಕಿಸ್ತಾನದ ಜತೆ ಮಾತನಾಡಲು ಬಯಸುತ್ತದೆ ಎಂದು ನಿರೀಕ್ಷಿಸುವುದು ಸಿಲ್ಲಿ ಎನಿಸುತ್ತದೆ. ಹಿಂದುತ್ವದ ಅಡಿಯಲ್ಲಿ ಅವರು ಇಸ್ಲಾಮಿಕ್ ಗಣರಾಜ್ಯವಾಗಿರುವ ಪಾಕಿಸ್ತಾನವನ್ನು ಅನುಕರಿಸಲು ಪ್ರಯತ್ನಿಸುತ್ತಿದ್ದಾರೆ.ಎಲ್ಲಾ ಧರ್ಮಗಳನ್ನು ಆಧರಿಸಿದ ದೇಶ ಗಣರಾಜ್ಯವಾಗುತ್ತದೆ. ಆದರೆ, ಅವರ ತತ್ವಾದರ್ಶವನ್ನು 65 ವರ್ಷಗಳ ಬಳಿಕ 2014ರಲ್ಲಿ ಕಿತ್ತು ಎಸೆಯಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ನಾವು ದಿಲ್ಲಿಯಲ್ಲಿ ಇದೇ ಮನಸ್ಥಿತಿಯನ್ನು ಅಳವಡಿಸಿಕೊಳ್ಳಲಿದ್ದೇವೆ

    ಕಳೆದ 10 ವರ್ಷಗಳಲ್ಲಿ ನಾವು ಮಾಡಿದ ದೊಡ್ಡ ತಪ್ಪು ನಿಮ್ಮ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸುವ ಧೈರ್ಯ ನಮಗಿದೆ ಆದರೆ ನಿಮ್ಮಮುಂದೆ ಕುಳಿತು ಮಾತನಾಡುವ ಧೈರ್ಯ ನಮಗಿಲ್ಲ ಎಂದು ಹೇಳುವ ಮೂಲಕ ಮಣಿಶಂಕರ್ ಅಯ್ಯರ್​ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್​ ಹಾಗೂ ಇಂಡಿಯಾ ಒಕ್ಕೂಟದ ನಾಯಕರು ಇದಕ್ಕೆ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts