More

    ಮಾವು, ಅಡಕೆ ಗಿಡ ಬೆಂಕಿಗಾಹುತಿ

    ಹಾನಗಲ್ಲ: ಬೆಂಕಿ ತಗುಲಿ ಐವರು ರೈತರ ಸುಮಾರು 8 ಎಕರೆಯಷ್ಟು ಮಾವು ಹಾಗೂ ಅಡಕೆ ತೋಟ ಬೆಂಕಿಗಾಹುತಿಯಾದ ಘಟನೆ ಬುಧವಾರ ರಾತ್ರಿ ನಡೆದಿದೆ.

    ಪಟ್ಟಣದ ಆನೆಕೆರೆ ಸಮೀಪ ಅಗ್ನಿ ಅವಘಡ ಸಂಭವಿಸಿದ್ದು, ವಾರ್ಷಿಕ ಸುಮಾರು 8 ಲಕ್ಷ ರೂಪಾಯಿ ಆದಾಯ ತರಬೇಕಿದ್ದ ಬೆಳೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಇನ್ನು ಕೆಲವೇ ತಿಂಗಳಲ್ಲಿ ಮಾವಿನ ಫಸಲು ಕೈಗೆ ಬರುವುದರಲ್ಲಿತ್ತು. ಗಿಡದ ತುಂಬೆಲ್ಲ ಹೂವು ಬಿಟ್ಟು ಕಾಯಿ ಕಟ್ಟಿದ್ದ ಮಾವಿನ ಗಿಡಗಳು ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಮಾವು ಬೆಳೆಗಾರ ರೈತರು ಕಂಗಾಲಾಗಿದ್ದಾರೆ. ಅಗ್ನಿ ದುರಂತಕ್ಕೆ ಕಾರಣ ತಿಳಿದು ಬಂದಿಲ್ಲ.

    ಘಟನಾ ಸ್ಥಳಕ್ಕೆ ಹಾನಗಲ್ಲ ಅಗ್ನಿಶಾಮಕ ಸಿಬ್ಬಂದಿ ತೆರಳಿ ಬೆಂಕಿ ನಂದಿಸಿದರಾದರೂ 8 ಎಕರೆ ಪ್ರದೇಶದಲ್ಲಿನ ಮಾವಿನ ಗಿಡಗಳು ಹಾಗೂ ಅಡಕೆ ಗಿಡಗಳು ಸುಟ್ಟಿವೆ. ರೈತರಾದ ಗಂಗಮ್ಮ ಕಂಚಿಗೊಲ್ಲರ, ಕೊಟ್ರೇಶ ಚನ್ನಬಸವ ತೊಪ್ಪಲದ, ಗೌಸ್‌ಮೊಹಿದ್ದೀನ್ ಸರ್ಖಾಜಿ, ತಾಜುದ್ದೀನ್ ಬಾಳೂರ ಇತರರಿಗೆ ಸೇರಿದ್ದ ಮಾವಿನತೋಟ, ಅಡಕೆ ತೋಟಗಳು ಸಂಪೂರ್ಣ ಹಾನಿಗೀಡಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts