More

    ನಿಯಮ ಉಲ್ಲಂಘಿಸಿದ 177 ವಾಹನ ವಶ

    ಮಂಗಳೂರು/ಉಡುಪಿ: ಕರ್ಫ್ಯೂ ವಿನಾಯಿತಿ ಅವಧಿಯಲ್ಲಿ ಮತ್ತು ಆ ಬಳಿಕವೂ ಶನಿವಾರ ಜನರ ಓಡಾಟ ಹೆಚ್ಚಾಗಿತ್ತು. ತಪಾಸಣೆ ನಡೆಯುತ್ತಿದ್ದರೂ ನಾನಾ ಕಾರಣಗಳನ್ನು ಹೇಳಿಕೊಂಡು ಓಡಾಡುವವರ ಸಂಖ್ಯೆ ಹೆಚ್ಚಿದ್ದು, ದ.ಕ, ಉಡುಪಿ ಜಿಲ್ಲೆಗಳಲ್ಲಿ ಪೊಲೀಸರು 177 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

    ಮಂಗಳೂರು ನಗರ ಪೊಲೀಸ್ ಕಮೀಷನರೆಟ್ ವ್ಯಾಪ್ತಿಯಲ್ಲಿ 69 ದ್ವಿಚಕ್ರ, 2 ತ್ರಿಚಕ್ರ ಹಾಗೂ 5 ಚತುಷ್ಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ. 366 ಮಾಸ್ಕ್ ಧರಿಸಿದವರ ವಿರುದ್ಧ ಹಾಗೂ ಅಂಗಡಿ, ರೆಸ್ಟೋರೆಂಟ್‌ಗಳಲ್ಲಿ ನಿಯಮ ಉಲ್ಲಂಘಿಸಿದ 8 ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

    ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ 9, ಮಾಸ್ಕ್ ಧರಿಸದವರ ವಿರುದ್ಧ 310 ಪ್ರಕರಣ ಹಾಗೂ 53 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಋಷಿಕೇಶ್ ಸೋನಾವಣೆ ತಿಳಿಸಿದ್ದಾರೆ.

    ಉಡುಪಿ ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ಸಹಿತ 48 ವಾಹನಗಳನ್ನು (ಉಡುಪಿ 8, ಕಾರ್ಕಳ 1, ಕುಂದಾಪುರ 39) ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿಯಮ ಉಲ್ಲಂಘಿಸಿದ್ದಕ್ಕೆ ಉಡುಪಿಯಲ್ಲಿ 9, ಕಾರ್ಕಳ 4, ಕುಂದಾಪುರ 1 ಸಹಿತ 14 ಪ್ರಕರಣ ದಾಖಲಾಗಿದೆ.

    ಬೆಳಗ್ಗೆ 6ರಿಂದ 10 ಗಂಟೆವರೆಗೆ ಅಂಗಡಿಗಳಲ್ಲಿ ದಿನಸಿ ಖರೀದಿ ವಹಿವಾಟು ಹೆಚ್ಚಿತ್ತು. ಈ ಅವಧಿಯಲ್ಲಿ ಮಂಗಳೂರಿನ ಕೆಲವು ವಾಣಿಜ್ಯ ಮಳಿಗೆಗಳ ಎದುರು ದಿನಸಿ, ತರಕಾರಿ ಖರೀದಿಗೆ ಸರತಿ ಸಾಲು ಕಂಡು ಬಂತು. 10 ಗಂಟೆಯಾಗುತ್ತಿದ್ದಂತೆ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆದವು. ಆದರೆ ರಸ್ತೆಗಳಲ್ಲಿ ವಾಹನ ಓಡಾಟ ಮುಂದುವರಿದಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts