More

    1600 ರೂ.ತಲುಪಿದ ಮಲ್ಲಿಗೆ ಧಾರಣೆ

    ಉಡುಪಿ: ನವರಾತ್ರಿ ಹಿನ್ನೆಲೆಯಲ್ಲಿ ಮಲ್ಲಿಗೆ ಹೂವಿಗೆ ವಿಪರೀತ ಬೇಡಿಕೆಯಿದ್ದರೂ ಇಳುವರಿ ಕೊರತೆಯಿಂದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಇದರಿಂದ ಒಂದು ವಾರದಿಂದ ಮಲ್ಲಿಗೆ ದರ ಗರಿಷ್ಠ ಮಟ್ಟದಲ್ಲೇ ಇದೆ.

    ಶುಕ್ರವಾರ ಶಂಕರಪುರ ಮಲ್ಲಿಗೆಗೆ ಕಟ್ಟೆಯಲ್ಲಿ 1250 ರೂ. ನಿಗದಿಯಾಗಿದ್ದು, ಮಾರುಕಟ್ಟೆಯಲ್ಲಿ 1600 ರೂ.ಗೆ ಮಾರಾಟವಾಗಿದೆ. ಭಟ್ಕಳ ಮಲ್ಲಿಗೆ ಮಾರುಕಟ್ಟೆಗೆ ಬೇಡಿಕೆಯಷ್ಟು ಪೂರೈಕೆಯಾಗದ ಕಾರಣ ಕಟ್ಟೆಯಲ್ಲಿ 1250 ರೂ. ಹಾಗೂ ಮಾರುಕಟ್ಟೆಯಲ್ಲಿ 1400ಕ್ಕೆ ಮಾರಾಟವಾಗುತ್ತಿದೆ.

    ಉಡುಪಿ ಮಾರುಕಟ್ಟೆಗೆ ಬೇಡಿಕೆಯ ಶೇ.15ರಷ್ಟು ಮಾತ್ರ ಮಲ್ಲಿಗೆ ಬರುತ್ತಿರುವುದರಿಂದ ಹೆಚ್ಚಿನ ಜನರು ಜಾಜಿ ಖರೀದಿಗೆ ತೊಡಗಿದ್ದಾರೆ. ಇದರಿಂದ ದರ ಸಾವಿರದ ಗಡಿ ದಾಟಿದೆ. ಶಂಕರಪುರ ಕಟ್ಟೆಯಲ್ಲಿ ಅಟ್ಟೆಗೆ 850 ರೂ.ನಂತೆ ಹಾಗೂ ಮಾರುಕಟ್ಟೆಯಲ್ಲಿ 900ರಿಂದ 1100 ರೂ.ಗೆ ಮಾರಾಟವಾಗುತ್ತಿದೆ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಮಲ್ಲಿಗೆ ಗಿಡಗಳಿಗೆ ಹಾನಿಯಾಗಿದ್ದು, ಇಳುವರಿ ಕುಂಠಿತಗೊಂಡಿದೆ. ಆದರೆ ಜಾಜಿ ಬೆಳೆಗೆ ಹೆಚ್ಚಿನ ತೊಂದರೆಯಾಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts