More

    ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಪತ್ತೆ: ಶಂಕಿತನ ಫೋಟೋ ಬಿಡುಗಡೆ ಮಾಡಿದ ಪೊಲೀಸರು

    ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ಶಂಕಿತ ವ್ಯಕ್ತಿ ಮತ್ತು ವಾಹನ ಚಿತ್ರಗಳನ್ನು ಮಂಗಳೂರು ಪೊಲೀಸರು ಬಿಡುಗಡೆ ಮಾಡಿದ್ದಾರೆ.

    ಶಂಕಿತ ವ್ಯಕ್ತಿ ಆಟೋದಲ್ಲಿ ಬಂದು ಬ್ಯಾಗ್​ ಇಟ್ಟು ತೆರಳಿದ್ದಾನೆ. ಆತ ಸ್ಟಿಲ್​ ಡಬ್ಬಿಯಲ್ಲಿ ಬಾಂಬ್​ ತುಂಬಿಟ್ಟಿದ್ದ. ಮಂಗಳೂರು ಬಸ್​ ನಿಲ್ದಾಣದಿಂದ ವಿಮಾನ ನಿಲ್ದಾಣದವರೆಗೂ ಬಸ್​ನಲ್ಲೇ ಪ್ರಯಾಣ ಮಾಡಿದ್ದಾನೆ. ನಂತರ ವಿಮಾನ ನಿಲ್ದಾಣಕ್ಕೆ ಆಟೋದಲ್ಲಿ ತೆರಳಿದ್ದಾನೆ.
    ಸಿಸಿಟಿವಿಯಲ್ಲಿ ಪತ್ತೆಯಾಗಿರುವ ಶಂಕಿತನ ಫೋಟೋವನ್ನು ಪೊಲೀಸರು ರಾಜ್ಯದ ಎಲ್ಲ ಠಾಣೆಗಳಿಗೂ ರವಾನಿಸಿದ್ದಾರೆ. ಅಲ್ಲದೆ ಮಂಗಳೂರಿನಿಂದ ಆತ ತಪ್ಪಿಸಿಕೊಳ್ಳುವ ಅಪಾಯ ಎದುರಾಗಿದ್ದು ನಾಕಾಬಂದಿ ಹಾಕಿ ಎಲ್ಲ ವಾಹನಗನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಈ ಮೊದಲು ಸುದ್ದಿಯಾಗಿತ್ತು. ಆರಂಭದಲ್ಲಿ ಹರಿದಾಡಿದ್ದ ಶಂಕಿತನ ಫೋಟೋ ನಕಲಿಯಾಗಿತ್ತು. 

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts