More

    ದ.ಕ. ಜಿಲ್ಲೆಗೆ ಸೌದಿ ಆಘಾತ, ಒಂದೇ ದಿನ 79 ಪ್ರಕರಣ, 11 ಮಂದಿ ಬಿಡುಗಡೆ

    ಮಂಗಳೂರು: ದ.ಕ ಜಿಲ್ಲೆಯಲ್ಲಿ ಮೊದಲ ಬಾರಿಗೆ ಅತ್ಯಧಿಕ ಸಂಖ್ಯೆಯ ಕರೊನಾ ಪಾಸಿಟಿವ್ ಪ್ರಕರಣಗಳು ಮಂಗಳವಾರ ಪತ್ತೆಯಾಗಿವೆ.
    79 ಮಂದಿಗೆ ಸೋಂಕು ದೃಢಗೊಂಡಿದ್ದು, ಇದರಲ್ಲಿ 75 ಮಂದಿ ಸೌದಿಯಿಂದ ಮರಳಿದವರು ಎನ್ನುವುದು ಸಮಾಧಾನ. ಉಳಿದ ಮೂವರು ಮಹಾರಾಷ್ಟ್ರದಿಂದ ಮರಳಿದವರಾಗಿದ್ದು, ಒಂದು ಪ್ರಕರಣ ಇನ್‌ಪ್ಲುಯೆಂಜಾ ಮಾದರಿಯ ಲಕ್ಷಣಗಳಿರುವಂಥದ್ದು. ಸೋಂಕಿತರಲ್ಲಿ ನಾಲ್ವರು ಗರ್ಭಿಣಿಯರೂ ಸೇರಿದ್ದಾರೆ.

    ಜೂನ್ 5, 7, 8, 11 ಹಾಗೂ 12ರಂದು ಸೌದಿ ಅರೇಬಿಯಾದಿಂದ ಬಂದಿರುವ 2 ವರ್ಷದ ಹೆಣ್ಣು ಮಗು ಸೇರಿದಂತೆ ಒಟ್ಟು 75 ಮಂದಿಗೆ ಕರೊನಾ ಟೆಸ್ಟ್‌ನಲ್ಲಿ ಪಾಸಿಟಿವ್ ಬಂದಿದೆ. ಅವರೆಲ್ಲರನ್ನೂ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಮುಂಬೈ ಹಾಗೂ ಓರ್ವ ಪುಣೆಯಿಂದ ಬಂದಿರುವವರ ಗಂಟಲ ದ್ರವ ಪರೀಕ್ಷೆಯೂ ಪಾಸಿಟಿವ್ ಆಗಿದೆ.

    ಪುತ್ತೂರಿನ 25ರ ಯುವಕರೊಬ್ಬರು ಇನ್‌ಪ್ಲುಯೆಂಜಾ ಲಕ್ಷಣಗಳೊಂದಿಗೆ ದಾಖಲಾಗಿದ್ದು, ಅವರಿಗೂ ಕರೊನಾ ದೃಢಪಟ್ಟಿದೆ. ಅವರ ಸಂಪರ್ಕದ ವಿವರಗಳನ್ನು ಪಡೆಯಲಾಗುತ್ತಿದೆ.

    11 ಮಂದಿ ಬಿಡುಗಡೆ: ಚಿಕಿತ್ಸೆ ಪೂರ್ಣಗೊಂಡು ಗುಣವಾದ 11 ಮಂದಿಯನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಮಂಗಳವಾರ ಬಿಡುಗಡೆ ಮಾಡಲಾಗಿದೆ. ಮಂಗಳವಾರ ಒಟ್ಟು 136 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದೆ. 84 ಗಂಟಲ ದ್ರವ ಮಾದರಿ ಟೆಸ್ಟ್‌ಗೆ ಕಳುಹಿಸಿದ್ದು, ಬಂದಿರುವ 296ರಲ್ಲಿ 79 ಪಾಸಿಟಿವ್ ಹಾಗೂ 217 ನೆಗೆಟಿವ್. ಒಟ್ಟು ಪ್ರಕರಣಗಳ ಸಂಖ್ಯೆ 340ಕ್ಕೆ ಏರಿಕೆಯಾಗಿದ್ದು, 201 ಸಕ್ರಿಯ ಪ್ರಕರಣಗಳಿವೆ.

    ಇಬ್ಬರು ಐಸಿಯುನಲ್ಲಿ: ಆಸ್ಪತ್ರೆಯಲ್ಲಿ ದಾಖಲಾಗಿರುವವರಲ್ಲಿ 70 ವರ್ಷದ ರೋಗಿ ಮಧುಮೇಹ, ನ್ಯುಮೋನಿಯಾದಿಂದ ಬಳಲುತ್ತಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಗಂಭೀರವಾಗಿದೆ. 52 ವರ್ಷದ ಗಂಡಸು ಮಧುಮೇಹ ಹಾಗೂ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಇಂದು ಕುವೈತ್‌ನಿಂದ ಪ್ರಥಮ ವಿಮಾನ: ಲಾಕ್‌ಡೌನ್ ಬಳಿಕ ಕುವೈತ್‌ನಿಂದ ಪ್ರಥಮ ಚಾರ್ಟರ್ ವಿಮಾನ 17ರಂದು ಸಾಯಂಕಾಲ 5 ಗಂಟೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಇದು ಕುವೈತ್‌ನಿಂದ ಕರ್ನಾಟಕಕ್ಕೆ ಬರುವ ಮೊದಲ ವಿಮಾನವೂ ಹೌದು. ಅಕ್ಬರ್ ಟ್ರಾವೆಲ್ಸ್ ಸಂಸ್ಥೆ ಜಝೀರ ಏರ್‌ವೇಸ್ ಸಹಯೋಗದೊಂದಿಗೆ ಈ ವಿಮಾನ ವ್ಯವಸ್ಥೆ ಮಾಡಿದ್ದು, 180 ಮಂದಿಗ ಸ್ವದೇಶಕ್ಕೆ ಮರಳಲಿದ್ದಾರೆ.

    ವಿದೇಶದಿಂದ ಬಂದ 165 ಮಂದಿಯಲ್ಲಿ ಸೋಂಕು: ಲಾಕ್‌ಡೌನ್ ಬಳಿಕ ದ.ಕ. ಜಿಲ್ಲೆಗೆ ಆಗಮಿಸಿದ 1,074 ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ 165 ಮಂದಿಯಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ಸೌದಿ ಅರೇಬಿಯಾದಿಂದ 6 ವಿಮಾನಗಳಲ್ಲಿ 1024 ಪ್ರಯಾಣಿಕರು ಆಗಮಿಸಿದ್ದು, ಇವರಲ್ಲಿ 160 ಸೋಂಕಿತರಾಗಿದ್ದಾರೆ. ದುಬೈಯಿಂದ ಏಕೈಕ ವಿಮಾನ ಆಗಮಿಸಿದ್ದು, ಇದರಲ್ಲಿದ್ದ 50ರಲ್ಲಿ 5 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

    ಇಬ್ಬರಿಗೆ ಸೋಂಕು:
    ಕಾಸರಗೋಡು: ಜಿಲ್ಲೆಯಲ್ಲಿ ಮಂಗಳವಾರ ಇಬ್ಬರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts