More

    ಮಂಗಳೂರು-ಬೆಂಗಳೂರು ರೈಲು ಸಂಚಾರ ಇಂದಿನಿಂದ ಪುನರಾರಂಭ

    ಮಂಗಳೂರು: ಕರೊನಾ ಕಾರಣದಿಂದ ಮಾರ್ಚ್‌ನಿಂದಲೇ ಬೆಂಗಳೂರು-ಮಂಗಳೂರು/ ಕಾರವಾರ ಮಧ್ಯೆ ಸಂಚಾರ ಸ್ಥಗಿತಗೊಳಿಸಿದ್ದ ರೈಲುಗಳು ಮತ್ತೆ ಓಡಲಿವೆ. ಈ ರೈಲುಗಳನ್ನು ಸೆ.4ರಿಂದ ವಿವಿಧ ಹಂತಗಳಲ್ಲಿ ಪರೀಕ್ಷಾ ವಿಶೇಷ ರೈಲು ಹೆಸರಿನಲ್ಲಿ ಓಡಿಸಲು ರೈಲ್ವೆ ಇಲಾಖೆ ಮುಂದಾಗಿದೆ.

    ಸೆ.4ರಿಂದ ಶುರುವಾಗಿ ಮುಂದಿನ ಸೂಚನೆ ವರೆಗೂ ನಂ.06585 ಯಶವಂತಪುರ -ಕಾರವಾರ ಹಾಗೂ ಸೆ.5ರಿಂದ ನಂ.06586 ಕಾರವಾರ-ಯಶವಂತಪುರ ರೈಲು ಕಾರ್ಯಾರಂಭಿಸಲಿದೆ. ಹಿಂದೆ ಸಂಚರಿಸುತ್ತಿದ್ದ ನಂ.16595/16596 ರೈಲುಗಳದ್ದೇ ವೇಳಾಪಟ್ಟಿ ಇವುಗಳಿಗೂ ಅನ್ವಯವಾಗಲಿದೆ. ಸೆ.4ರಂದು ಸಂಜೆ 6.45ಕ್ಕೆ ಯಶವಂತಪುರದಿಂದ ಹೊರಡುವ ರೈಲು ಕಾರವಾರಕ್ಕೆ ಮರುದಿನ ಬೆಳಗ್ಗೆ 8.25ಕ್ಕೆ ತಲುಪುವುದು. ಸೆ.5ರಂದು ಸಂಜೆ 6ಕ್ಕೆ ಕಾರವಾರದಿಂದ ರೈಲು ಹೊರಡಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
    ಈ ರೈಲುಗಳಲ್ಲಿ 7 ಸ್ಲೀಪರ್, ಒಂದು 3ಟೈರ್ ಎಸಿ, ಒಂದು 2 ಟೈರ್ ಎಸಿ 4 ಸಾಮಾನ್ಯ ಸಹಿತ 15 ಬೋಗಿಗಳು ಇರಲಿವೆ. ರೈಲುಗಳಿಗೆ ಸ್ಟೇಷನ್‌ನಲ್ಲಿ ಟಿಕೆಟ್ ನೀಡಲಾಗುವುದಿಲ್ಲ. ಪೂರ್ವ ಕಾಯ್ದಿರಿಸಿದ ಟಿಕೆಟ್‌ನಲ್ಲೇ ಪ್ರಯಾಣಿಸಬೇಕಾಗುತ್ತದೆ.

    ಬೆಂಗಳೂರು-ಮಂಗಳೂರು ರೈಲು: ನಂ.06515 ಬೆಂಗಳೂರು ಸಿಟಿ – ಮಂಗಳೂರು (ವಾರದಲ್ಲಿ ನಾಲ್ಕು ದಿನ) ರೈಲು ಸೆ.4ರಿಂದ ಹಾಗೂ ನಂ.06516 ಮಂಗಳೂರು-ಬೆಂಗಳೂರು ಸಿಟಿ(ವಾರದಲ್ಲಿ ನಾಲ್ಕು ದಿನ) ರೈಲು ಸೆ.6ರಿಂದ ಸಂಚರಿಸಲಿದೆ. ಇವುಗಳಿಗೆ ನಂ.16511/16512 ರೈಲುಗಳ ನಿಲುಗಡೆ ಅನ್ವಯವಾಗಲಿದೆ.
    ನಂ.06517 ಬೆಂಗಳೂರು-ಮಂಗಳೂರು (ವಾರದಲ್ಲಿ ಮೂರು ದಿನ) ರೈಲು ಸೆ.6ರಿಂದ ಹಾಗೂ ನಂ.06518 ಮಂಗಳೂರು- ಬೆಂಗಳೂರು (ವಾರದಲ್ಲಿ ಮೂರು ದಿನ) ಸೆ.5ರಿಂದ ಸಂಚಾರ ಆರಂಭಿಸಲಿದೆ. ಈ ರೈಲುಗಳಿಗೆ ನಂ.16517/16518ರ ನಿಲುಗಡೆಯೇ ಅನ್ವಯವಾಗಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts