More

    ಮಂಗಳೂರಿನಲ್ಲಿ ಆಟೋ ಸ್ಫೋಟ ಪ್ರಕರಣ: ತುಮಕೂರಿನ ರೈಲ್ವೆ ಸಿಬ್ಬಂದಿ ಹೆಸರಲ್ಲಿ ಆಧಾರ್​ ಕಾರ್ಡ್ ಪತ್ತೆ!

    ತುಮಕೂರು: ಮಂಗಳೂರಿನಲ್ಲಿ ಆಟೋ ಸ್ಫೋಟ ಪ್ರಕರಣ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಇದೊಂದು ವಿದ್ವಂಸಕ ಕೃತ್ಯ ಎಂಬ ಅಂಶ ಗೊತ್ತಾಗಿದ್ದು, ಎನ್​ಐಎ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಇನ್ನು ಈ ಆಟೋದಲ್ಲಿ ಪತ್ತೆಯಾದ ಆಧಾರ್​ ಕಾರ್ಡ್​, ತುಮಕೂರಿನಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿಯ ಹೆಸರಲ್ಲಿದೆ!

    ಹುಬ್ಬಳಿ ಮೂಲದ ಪ್ರೇಮರಾಜ್ ಹುಟಗಿ ಎಂಬುವವರು ತುಮಕೂರಿನಲ್ಲಿ ರೈಲ್ವೆ ಸಿಬ್ಬಂದಿ. ರೈಲ್ವೆ ಟ್ರ್ಯಾಕ್ ಮೈನ್ ಟೈನರ್ ಆಗಿ ಕೆಲಸ ಮಾಡ್ತಿರುವ ಪ್ರೇಮರಾಜ್ ಹುಟಗಿ, ಸದ್ಯ ತುಮಕೂರಿನ ಹಿರೇಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಕಳೆದ ಎರಡು ವರ್ಷದಲ್ಲಿ ಎರಡು ಬಾರಿ ಆಧಾರ್ ಕಾರ್ಡ್ ಕಳೆದುಕೊಂಡಿದ್ದರು. ಒಮ್ಮೆ ಧಾರವಾಡದಿಂದ ಬೆಳಗಾವಿಗೆ ಬಸ್​ನಲ್ಲಿ ಹೋಗುವಾಗ ಆಧಾರ್ ಕಾರ್ಡ್ ಕಳೆದುಕೊಂಡಿದ್ದರು. ಬಳಿಕ ಮತ್ತೊಂದು ಆಧಾರ್ ಕಾರ್ಡ್ ಪಡೆದಿದ್ದರು. ಕಳೆದ ಆರು ತಿಂಗಳ ಹಿಂದೆ ಹುಬ್ಬಳ್ಳಿಯಿಂದ ಬಸ್​ನಲ್ಲಿ ಬರುವಾಗ ಮತ್ತೊಮ್ಮೆ ಆಧಾರ್ ಕಾರ್ಡ್ ಕಳೆದುಕೊಂಡಿದ್ದರು. ಇದೀಗ ಇವರ ಹೆಸರಲ್ಲಿದ್ದ ಆಧಾರ್​ ಕಾರ್ಡ್​ ಸ್ಫೋಟಗೊಂಡ ಆಟೋದಲ್ಲಿ ಸಿಕ್ಕಿದೆ!

    ಈ ಕುರಿತು ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದ ಪ್ರೇಮರಾಜ್​ ಹುಟಗಿ, ‘ನಿನ್ನೆ ರಾತ್ರಿ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಅವರು ಪ್ರೇಮರಾಜ್ ಹುಟಗಿ ಅವರು ಕಾಲ್ ಮಾಡಿ, ಕೂಡಲೇ ತುಮಕೂರು ಎಸ್​ಪಿ ಅವರನ್ನ ಸಂಪರ್ಕಿಸುವಂತೆ ಸೂಚಿಸಿದ್ದರು. ಅದರಂತೆ ತುಮಕೂರು ಎಸ್​​ಪಿ ರಾಹುಲ್ ಕುಮಾರ್ ಅವರನ್ನ ಸಂಪರ್ಕಿಸಿ, ನನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ನನ್ನ ಹೆಸರಲ್ಲಿ ಈ ರೀತಿಯಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದೆ. ನಿನ್ನೆಯೇ ನಮ್ಮ ಮನೆಗೆ ಪೊಲೀಸರು ಬಂದು ಪರಿಶೀಲನೆ ಮಾಡಿದ್ದರು’ ಎಂದು ಹೇಳಿದರು.

    ಮಂಗಳೂರಿನಲ್ಲಿ ಆಟೋ ಸ್ಫೋಟ: ಪ್ರಯಾಣಿಕನೇ ತನಿಖೆಯ ಮೂಲ ವ್ಯಕ್ತಿ! ಅನುಮಾನ ಹುಟ್ಟಿಸಿದೆ ಪಂಪ್‌ವೆಲ್​ಗೆ ಪ್ರಯಾಣ

    ಮಂಗಳೂರು ಆಟೋ ಸ್ಫೋಟ ಪ್ರಕರಣ: ಭಯೋತ್ಪಾದಕ ಕೃತ್ಯ ಎಂದು ಖಚಿತಪಡಿಸಿದ ಡಿಜಿಪಿ ಪ್ರವೀಣ್ ಸೂದ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts