More

    ಮಂಗಳೂರಿನಲ್ಲಿ ಆಟೋ ಸ್ಫೋಟ: ಪ್ರಯಾಣಿಕನೇ ತನಿಖೆಯ ಮೂಲ ವ್ಯಕ್ತಿ! ಅನುಮಾನ ಹುಟ್ಟಿಸಿದೆ ಪಂಪ್‌ವೆಲ್​ಗೆ ಪ್ರಯಾಣ

    ಬೆಂಗಳೂರು: ಮಂಗಳೂರು ನಗರದ ನಾಗುರಿಯ ಕಂಕನಾಡಿ ಪೊಲೀಸ್ ಠಾಣೆ ಬಳಿ ಶನಿವಾರ ಸಂಜೆ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ ಆಕಸ್ಮಿಕವಲ್ಲ, ಇದೊಂದು ವಿಧ್ವಂಸಕ ಕೃತ್ಯ ಎಂಬ ಆಘಾತಕಾರಿ ವಿಷಯ ಬಯಲಾಗಿದೆ. ಮಂಗಳೂರಿಗೆ ಐಎನ್​ಎ ಅಧಿಕಾರಿಗಳು ಆಗಮಿಸಿದ್ದು ತನಿಖೆ ಚುರುಕುಗೊಳಿಸಿದ್ದಾರೆ.

    ನಾಗುರಿಯಿಂದ ಪಂಪ್‌ವೆಲ್ ಕಡೆಗೆ ಸಂಚರಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಕೈಯಲ್ಲಿದ್ದ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡಿತ್ತು. ಘಟನೆಯಲ್ಲಿ ಗಾಯಗೊಂಡ ಪ್ರಯಾಣಿಕನೇ ತನಿಖೆಯ ಮೂಲ ವ್ಯಕ್ತಿ!

    ಪ್ರಯಾಣಿಕ ಸದ್ಯ ಪೊಲೀಸ್ ವಶದಲ್ಲಿಯೇ ಇದ್ದಾನೆ. ಇದೊಂದು ಆತ್ಮಾಹುತಿ ಬಾಂಬ್ ಸ್ಫೋಟವಂತೂ ಅಲ್ಲ, ಬೇರೆ ಎಲ್ಲೋ ಇಟ್ಟು ಸ್ಫೋಟ ನಡೆಸಲು ಸಂಚು ರೂಪಿಸಲಾಗಿತ್ತು. ಆದರೆ ಅನಿರೀಕ್ಷಿತವಾಗಿ ಮಾರ್ಗಮಧ್ಯೆ ಆಟೋದಲ್ಲಿ ಸ್ಫೋಟವಾಗಿದೆ. ಈತನ ಬಳಿ ದೊರಕಿರುವ ಆಧಾರ್ ಕಾರ್ಡ್ ನಕಲಿ ಅನ್ನೋದು ಗೊತ್ತಾಗಿದೆ. ಇದೀಗ ಪ್ರಯಾಣಿಕನ ಸೋಗಿನಲ್ಲಿದ್ದ ವ್ಯಕ್ತಿಯ ವಿಚಾರಣೆಯೇ ಪ್ರಮುಖವಾದದ್ದು. ಗಾಯಗೊಂಡಿರುವ ಪ್ರಯಾಣಿಕ ಅರೆಪ್ರಜ್ಞಾವಸ್ಥೆಯಲ್ಲಿದ್ದು, ಈತ ಸ್ವಲ್ಪ ಸುಧಾರಿಸಿಕೊಂಡ ಬಳಿಕ ವಿಚಾರಣೆ ಆರಂಭವಾಗಲಿದೆ.

    ರೈಲ್ವೆ ನಿಲ್ದಾಣದಿಂದ ಆಟೋ ಹತ್ತಿಕೊಂಡಿದ್ದ ಪ್ರಯಾಣಿಕ, ಪಂಪ್‌ವೆಲ್‌ಗೆ ಹೋಗಬೇಕು ಎಂದಿದ್ದ. ಪಂಪ್‌ವೆಲ್‌ ವಾಹನದಟ್ಟಣೆ ಇರುವ ಜನನಿಬಿಡ ಪ್ರದೇಶ. ಪಂಪ್‌ವೆಲ್ ಬಳಿ ಸ್ಫೋಟ ನಡೆಸಲು ಪ್ಲ್ಯಾನ್ ಇತ್ತಾ? ಅಥವಾ ಪಂಪ್‌ವೆಲ್‌ನಿಂದ ಬೇರೆ ಕಡೆ ಹೋಗುವ ಪ್ಲ್ಯಾನ್​ ಇತ್ತಾ? ಪಂಪ್‌ವೆಲ್ ಕರಾವಳಿಗರ ಪಾಲಿಗೆ ಪ್ರಮುಖ ಜಂಕ್ಷನ್. ನಿಲ್ದಾಣದಿಂದ ಹೊರಡುವ ಬಸ್‌ಗಳು ಪಂಪ್‌ವೆಲ್​ಗೆ ಬಂದು ಬೇರೆ ಕಡೆಗೆ ಹೋಗುತ್ತವೆ. ಹಾಗಾಗಿ ಪ್ರಯಾಣಿಕನ ಪಂಪ್‌ವೆಲ್ ಪ್ರಯಾಣ ಅನುಮಾನಕ್ಕೆ ಕಾರಣವಾಗಿದೆ.

    ಮಂಗಳೂರು ಆಟೋ ಸ್ಫೋಟ ಪ್ರಕರಣ: ಭಯೋತ್ಪಾದಕ ಕೃತ್ಯ ಎಂದು ಖಚಿತಪಡಿಸಿದ ಡಿಜಿಪಿ ಪ್ರವೀಣ್ ಸೂದ್

    3 ಮಕ್ಕಳ ತಾಯಿಯ ಮೋಹಕ್ಕೆ ಸಿಲುಕಿ ಇಸ್ಲಾಂಗೆ ಮತಾಂತರ ಆದ ಶರಣಪ್ಪ! ಗಂಡನಿಗಾಗಿ ಮೊದಲ ಪತ್ನಿ ಕಣ್ಣೀರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts