More

    ಪಕ್ಕದ ಮನೆಯ ಬಾಲಕಿಯನ್ನೇ ರೇಪ್​ ಮಾಡಿದ 61 ವರ್ಷದ ವೃದ್ಧ! ಬಾಲಕಿ ಹೇಳಿದರೂ ತಲೆಯೇ ಕೆಡಿಸಿಕೊಳ್ಳದ ಪೋಷಕರು

    ಮಂಡ್ಯ: ತಾತ ಎಂದು ಪ್ರೀತಿಯಿಂದ ಕರೆಯುತ್ತಿದ್ದ ನೆರೆ ಮನೆಯೆ ವೃದ್ಧನೇ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಬಾಲಕಿ ಗರ್ಭಿಣಿಯಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

    ಇದನ್ನೂ ಓದಿ: ಭಾರತಕ್ಕೂ ಬರಲಿದೆ ಬ್ರಿಟನ್​ನ ಫೈಜರ್ ಕರೊನಾ ಲಸಿಕೆ; ಕೇಂದ್ರ ಸರ್ಕಾರದ ಜತೆ ಒಪ್ಪಂದಕ್ಕೆ ಕಂಪನಿ ಉತ್ಸುಕ

    ಮಂಡ್ಯದ ಗಾಂಧಿನಗರ ನಿವಾಸಿ ವೆಂಕಟೇಶ್ ಎಂಬಾತ ಈ ಕೃತ್ಯವೆಸಗಿದ್ದಾನೆ. ಪಕ್ಕದ ಮನೆಯ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾನೆ. ಶಾಲೆಗೆ ರಜೆ ಇರುವುದರಿಂದ ಬಾಲಕಿ ಮನೆಯಲ್ಲೇ ಇರುತ್ತಿದ್ದಳು. ಆಕೆಯ ತಂದೆ ತಾಯಿ ಕೆಲಸಕ್ಕೆ ಹೋದ ಸಮಯದಲ್ಲಿ ಮನೆಗೆ ತೆರಳುತ್ತಿದ್ದ ಆತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಒಂದು ವೇಳೆ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

    ಇದನ್ನೂ ಓದಿ: ಆರು ತಿಂಗಳ ಸಂಬಳದಷ್ಟು ದಂಡ ಸಂಗ್ರಹಿಸಿದ ಮಾರ್ಷಲ್​ಗಳು! ಬೆಂಗಳೂರೊಂದರಲ್ಲೇ ಸಂಗ್ರಹವಾದ ಮೊತ್ತ ಎಷ್ಟು ಗೊತ್ತಾ?

    ಪಕ್ಕದ ಮನೆ ತಾತ ಕೆಟ್ಟದೃಷ್ಟಿಯಿಂದ ನೋಡುತ್ತಾರೆ, ಮೈಕೈ ಮುಟ್ಟುತ್ತಾರೆ ಎಂದು ಬಾಲಕಿ ತಂದೆ ತಾಯಿಯ ಬಳಿ ಹೇಳಿಕೊಂಡಿದ್ದಳು. ಆದರೆ ಅದರ ಬಗ್ಗೆ ಅಷ್ಟೇನು ಗಮನ ಕೊಡದ ಪೋಷಕರು, ಆತ ಹಿರಿಯರು, ಬಾಲಕಿಯೇ ತಪ್ಪಾಗಿ ಅರ್ಥೈಸಿಕೊಂಡಿದ್ದಾಳೆಂದು ಸುಮ್ಮನಾಗಿದ್ದಾರೆ. ಈ ಮಧ್ಯೆ ಬಾಲಕಿ ಗರ್ಭಿಣಿಯಾಗಿದ್ದು, ಘಟನೆಯ ಸೂಕ್ಷ್ಮತೆ ಪೋಷಕರ ಅರಿವಿಗೆ ಬಂದಿದೆ. ವೆಂಕಟೇಶ್​ ವಿರುದ್ಧ ಮಂಡ್ಯ ಪಶ್ಚಿಮ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಅಧಿವೇಶನಕ್ಕೆ ಮುನ್ನ ಸಚಿವ ಸಂಪುಟ ವಿಸ್ತರಣೆ ಆಗತ್ತಾ? ಏನಂತಾರೆ ಸಿಎಂ?

    ಅಣ್ಣನ ಹೆಂಡತಿ ಜತೆ ತಮ್ಮನ ರೊಮ್ಯಾನ್ಸ್​! ಮೈದುನನಿಗೆ ಮದುವೆ ಫಿಕ್ಸ್​ ಆಗಿದ್ದಕ್ಕೆ ಅತ್ತಿಗೆ ಮಾಡಿದ್ದೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts