ಬೀದಿ ರಂಪಾಟ; ಗಾಡಿ ಅಡ್ಡ ನಿಲ್ಲಿಸಿದ್ದಕ್ಕೆ ಪ್ರಾಣ ತೆಗೆದರು

Crime

ನವದೆಹಲಿ: ಇಬ್ಬರು ಯುವಕರು ಡೆಲಿವರಿ ಬಾಯ್​ ಒಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ದೆಹಲಿಯ ರಂಜಿತ್​ನಗರ ಮಾರುಕಟ್ಟೆಯಲ್ಲಿ ನಡೆದಿದೆ.

blank

ಮೃತ ದುರ್ದೈವಿ ಹೆಸರು ಪಂಕಜ್​ ಠಾಕೂರ್​(39) ಎಂದು ತಿಳಿದು ಬಂದಿದದ್ದು. ಮನೀಶ್​ ಕುಮಾರ್​(19) ಹಾಗೂ ಲಾಲ್​ಚಂದ್​(18) ಬಂಧಿತ ಯುವಕರು ಎಂದು ತಿಳಿದು ಬಂದಿದೆ.

ಕ್ಷುಲಕ ವಿಚಾರಕ್ಕೆ ಹತ್ಯೆ

ಇನ್ನು ಬಂಧಿತ ಆರೋಪಿಗಳು ಪೊಲೀಸರ ಬಳಿ ನೀಡಿರುವ ಹೇಳಿಕೆ ಪ್ರಕಾರ ತಮ್ಮ ಕಾರಿಗೆ ಪಂಕಜ್​ ತಮ್ಮ ಬೈಕನ್ನು ಅಡ್ಡವಾಗಿ ನಿಲ್ಲಿಸಿದ್ದರು ಮತ್ತು ತೆರಳಲು ದಾರಿ ಮಾಡಿ ಕೊಡಲಿಲ್ಲ ಎಂಬ ಕಾರಣಕ್ಕೆ ಹಲ್ಲೆ ನಡೆಸಿದ್ದಾಗಿ ತಿಳಿಸಿದ್ದಾರೆ.

ಪ್ರಜ್ಞಾಹೀನರಾಗಿ ಪಂಕಜ್​ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ವೈದ್ಯರು ಠಾಕೂರ್​ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ ಎಂದು ಪೊಲೀಸ್​ ಅಧಿಕಾರಿ ಒಬ್ಬರು ಮಾಹಿತಿ ನೀಡಿದ್ದಾರೆ.

Police

ಇದನ್ನೂ ಓದಿ: ಸೇನಾ ವಾಹನದ ಮೇಲೆ ದಾಳಿ; ಬುಲೆಟ್​ ನಿರ್ಮಿಸಿದ್ದು ಅಮೆರಿಕನಾ?

ಸಿಸಿಟಿವಿ ಫೂಟೇಜ್​ ಆಧರಿಸಿ ಬಂಧನ

ಇನ್ನು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆ ನಡೆದ ಸ್ಥಳದ ಸುತ್ತ ಅಳವಡಿಸಿದ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಇಬ್ಬರು ಯುವಕರು ಠಾಕೂರ್​ ಮೇಲೆ ಹಲ್ಲೆ ನಡೆಸಿರುವುದು ತಿಳಿದು ಬಂದಿದೆ.

ಪೊಲೀಸರು ಆರೋಪಿಗಳು ಸಂಚರಿಸಿದ ಕ್ಯಾಬ್ ನಂಬರ್​ ಮೂಲಕ ಅಪರಾಧಿಗಳನ್ನು ಪತ್ತೆ ಹಚ್ಚಿದ್ಧಾರೆ. ಆರೋಪಿಗಳನ್ನು ಹುಡುಕುತ್ತಾ ಪೊಲೀಸರು ಅವರ ಮನೆಗೆ ತೆರಳಿದಾಗ ತಲೆಮಾರಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ವಿಶೇಷ ತಂಡ ರಚನೆ

ಇನ್ನು ಆರೋಪಿಗಳು ತಲೆಮಾರಿಸಿಕೊಂಡಿರುವ ಕುರಿತು ಮಾಹಿತಿ ಪಡೆದ ಪೊಲೀಸರು ಅವರ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು. ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಅಪರಾಧಿಗಳನ್ನು 24 ಘಂಟೆಯೊಳಗೆ ಬಂಧಿಸಿರುವುದಾಗಿ ತಿಳಿಸಿದ್ಧಾರೆ.

ಮೃತ ಪಂಕಜ್​ ಠಾಕೂರ್ ದಿನಸಿ ಅಂಗಡಿ ಒಂದರಲ್ಲಿ ಡೆಲಿವರಿ ಬಾಯ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೃತರಿಗೆ ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿ ಇದ್ಧಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article
blank

ನಿಮ್ಮ ಬೆಳಿಗ್ಗೆಯನ್ನು ಹೀಗೆ ಆರಂಭಿಸಿ.. ಈ ಅಭ್ಯಾಸಗಳು ನಿಮ್ಮ ಜೀವನವನ್ನು ಬದಲಾಯಿಸುತ್ತವೆ..! healthy morning

healthy morning: ನಾವು ನಮ್ಮ ಬೆಳಿಗ್ಗೆಯನ್ನು ಹೇಗೆ ಪ್ರಾರಂಭಿಸುತ್ತೇವೆ ಎಂಬುದು ದಿನವಿಡೀ ನಮ್ಮ ಆಲೋಚನೆಗಳು ಮತ್ತು…

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

blank