More

    ಮನಕತ್ತೂರು ಶ್ರೀ ಕಾಲಭೈರವೇಶ್ವರ ರಥೋತ್ಸವ

    ಅರಸೀಕೆರೆ: ತಾಲೂಕಿನ ಮನಕತ್ತೂರು ಶ್ರೀ ಕಾಲಭೈರವೇಶ್ವರ ಸ್ವಾಮಿ ರಥೋತ್ಸವ ಭಾನುವಾರ ಸಹಸ್ರಾರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

    ಮುಂಜಾನೆ ಶ್ರೀ ವೀರಭದ್ರಸ್ವಾಮಿ ಕೆಂಡೋತ್ಸವ ಸೇರಿದಂತೆ ಹಲವು ಧಾರ್ಮಿಕ ವಿಧಿ-ವಿಧಾನಗಳು ಪೂರ್ಣಗೊಂಡವು. ನಿಗದಿತ ಮಹೂರ್ತಕ್ಕೆ ಶ್ರೀ ಕಾಲಭೈರವೇಶ್ವರ ಸ್ವಾಮಿಯನ್ನು ರಥದಲ್ಲಿ ಪ್ರತಿಷ್ಠಾಪಿಸುತ್ತಿದ್ದಂತೆ ನೆರದಿದ್ದ ಜನಸ್ತೋಮ ಜಯಘೋಷ ಮೊಳಗಿಸುತ್ತ ರಥ ಎಳೆಯುವ ಜತೆಗೆ ದವನ, ಹಣ್ಣು ತೂರಿ ಭಕ್ತಿ ಸಮರ್ಪಿಸಿದರು. ರಥೋತ್ಸವದಲ್ಲಿ ಪಾಲ್ಗೊಂಡಿದ್ದವರಿಗೆ ಪ್ರಸಾದ ವಿತರಿಸಲಾಯಿತು.

    ದೇಗುಲದ ಸುತ್ತ ಪಾನಕದ ಗಾಡಿ ಓಟ ಗಮನ ಸೆಳೆಯಿತು. ದೇವರ ಆಶೀರ್ವಾದದ ತೆಂಗಿನ ಕಾಯಿ ಹಾಗೂ ಅಡಕೆ, ಕಲ್ಲುಸಕ್ಕರೆಯನ್ನು ಹರಾಜು ಹಾಕಲಾಯಿತು. ಬಿ.ಮಲ್ಲಾಪುರ, ಕೋಡಿಹಳ್ಳಿ, ಯರೇಹಳ್ಳಿ, ತೊಂಡಿಗನಹಳ್ಳಿ, ಗಂಜಿಗೆರೆ, ಎ.ಮಲ್ಲಾಪುರ, ಬಾಣಾವರ, ಶ್ಯಾನೆಗೆರೆ, ಕೆಂಗುರುಬರ ಹಟ್ಟಿ, ಉಪ್ಪಿನಹಳ್ಳಿ, ಬಸವನಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳ ಭಕ್ತರು ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಆಗಮಿಸಿ ವಿವಿಧ ಪೂಜೆ ಪುನಸ್ಕಾರಗಳಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಚುನಾಯಿತ ಜನಪ್ರತಿನಿಧಿಗಳು, ಸಂಘ, ಸಂಸ್ಥೆಗಳ ಪದಾಧಿಕಾರಿಗಳು ದೇವರ ದರ್ಶನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts