More

    ಮಾಡದ ಅಪರಾಧಕ್ಕೆ 37 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದ ವ್ಯಕ್ತಿ ಕೊನೆಗೂ ದೋಷಮುಕ್ತಿ; ಸರ್ಕಾರ ನೀಡಿದ ಪರಿಹಾರವೆಷ್ಟು?

    ನವದೆಹಲಿ: ಈ ವ್ಯಕ್ತಿ ತಾನು ಮಾಡದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ಜೈಲಿನಲ್ಲಿದ್ದ. 1983ರಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆತನಿಗೆ ಶಿಕ್ಷೆ ವಿಧಿಸಲಾಗಿತ್ತು. ಈ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ. ಶಿಕ್ಷೆಗೆ ಗುರಿಯಾಗಿದ್ದ ಆ ವ್ಯಕ್ತಿಯ ಹೆಸರು ರಾಬರ್ಟ್ ಡುಬೊಯಿಸ್. ಇದೀಗ ರಾಬರ್ಟ್ ಈ ಕೃತ್ಯ ಎಸಗಿಲ್ಲ ಎಂಬುದು ಬೆಳಕಿಗೆ ಬಂದಿದ್ದು, ಸರ್ಕಾರ ಅವರಿಗೆ 14 ಮಿಲಿಯನ್ ಡಾಲರ್ (ಸುಮಾರು 116 ಕೋಟಿ ರೂಪಾಯಿ) ಪರಿಹಾರ ನೀಡಲಿದೆ.

    ಮಾಡದ ಅಪರಾಧಕ್ಕೆ 37 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದ ವ್ಯಕ್ತಿ ಕೊನೆಗೂ ದೋಷಮುಕ್ತಿ; ಸರ್ಕಾರ ನೀಡಿದ ಪರಿಹಾರವೆಷ್ಟು?

    ಘಟನೆಯ ವಿವರ
    18 ನೇ ವಯಸ್ಸಿನಲ್ಲಿ ರಾಬರ್ಟ್​​​ಗೆ ಮೊದಲು ಮರಣದಂಡನೆ ವಿಧಿಸಲಾಯಿತು. ಅವರು 19 ವರ್ಷದ ಬಾರ್ಬರಾ ಗ್ರಾಮ್ಸ್ ಅವರ ಕೊಲೆಯ ಆರೋಪಿಯಾಗಿದ್ದರು. ನಂತರ ಈ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಬದಲಾಯಿಸಲಾಯಿತು.

    ಪ್ರಸ್ತುತ ರಾಬರ್ಟ್ ಅವರ ವಯಸ್ಸು 59 ವರ್ಷ. ಡಿಎನ್‌ಎ ಪರೀಕ್ಷೆಯಲ್ಲಿ ಇನ್ನಿಬ್ಬರು ಈ ಕೃತ್ಯದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದ ನಂತರ ರಾಬರ್ಟ್ 2020 ರಲ್ಲಿ ಜೈಲಿನಿಂದ ಬಿಡುಗಡೆಯಾದರು.

    ತದ ನಂತರ, ರಾಬರ್ಟ್ ತನಿಖಾಧಿಕಾರಿಗಳು ಮತ್ತು ಪ್ರಕರಣವನ್ನು ತನಿಖೆ ಮಾಡಿದ ಫೋರೆನ್ಸಿಕ್ ದಂತವೈದ್ಯರ ವಿರುದ್ಧ ಮೊಕದ್ದಮೆ ಹೂಡಿದರು. ಬಾರ್ಬರಾ ಗ್ರಾಮ್ಸ್ ದೇಹದಲ್ಲಿ ಕಂಡುಬಂದ ಕಚ್ಚಿದ ಗುರುತುಗಳು ಹಾಗೂ ರಾಬರ್ಟ್‌ನ ಕಚ್ಚುವಿಕೆಯ ಗುರುತುಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ವಿಧಿವಿಜ್ಞಾನ ದಂತವೈದ್ಯರು ಹೇಳಿದ್ದಾರೆ. ಆದರೆ 1980 ರ ದಶಕದಲ್ಲಿ ಡಿಎನ್ಎ ಪರೀಕ್ಷೆ ಲಭ್ಯವಿರಲಿಲ್ಲ.

    ಆಗಸ್ಟ್ 1983 ರಲ್ಲಿ, ಬಾರ್ಬರಾ ಗ್ರಾಮ್ಸ್ ಎಂಬ ಹುಡುಗಿಯ ಮೇಲೆ ಅತ್ಯಾಚಾರ ಮಾಡಲಾಯಿತು. ನಂತರ ಆಕೆಯನ್ನು ಹೊಡೆದು ಸಾಯಿಸಲಾಗಿತ್ತು. ಟ್ಯಾಂಪಾದಲ್ಲಿರುವ ರೆಸ್ಟೋರೆಂಟ್‌ನಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿತ್ತು.

    ಬಾರ್ಬರಾ ದೇಹದಲ್ಲಿ ಕಂಡುಬಂದಿರುವ ಗುರುತುಗಳನ್ನು ನಿರ್ಧರಿಸಲು, ರಾಬರ್ಟ್ ಸೇರಿದಂತೆ ಹಲವಾರು ಪುರುಷರಿಂದ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ. ಆಗ ಅದು ರಾಬರ್ಟ್ ಕಚ್ಚಿದ ಗುರುತಲ್ಲ ಎಂದು ವಿಧಿವಿಜ್ಞಾನ ದಂತವೈದ್ಯರು ಹೇಳಿದ್ದಾರೆ.

    ಅಷ್ಟೇ ಅಲ್ಲ, ಅವನಿಗೆ ಬಾರ್ಬರಾ ಗೊತ್ತಿರಲಿಲ್ಲ. ಬಾರ್ಬರಾ ಶವ ಪತ್ತೆಯಾದ ಪ್ರದೇಶದಲ್ಲಿ ಆತನಿದ್ದಷ್ಟೇ. ಮೊಕದ್ದಮೆಯನ್ನು ಜನವರಿ 11 ರಂದು ಇತ್ಯರ್ಥಗೊಳಿಸಲಾಯಿತು. ಗುರುವಾರ ಟ್ಯಾಂಪಾ ಸಿಟಿ ಕೌನ್ಸಿಲ್ ಅದನ್ನು ಅನುಮೋದಿಸಲು ಮತ್ತು ರಾಬರ್ಟ್ಸ್‌ಗೆ ಅಧಿಕೃತವಾಗಿ $14 ಮಿಲಿಯನ್‌ ನೀಡಲು ಆದೇಶಿಸಿತು. 

    ಸುಪ್ರೀಂಕೋರ್ಟ್​​​​​​​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts