More

    18 ವರ್ಷದವರೆಗೆ ಅನಕ್ಷರಸ್ಥನಾಗಿದ್ದ ವ್ಯಕ್ತಿ ಈಗ ಕೇಂಬ್ರಿಡ್ಜ್‌ ವಿವಿ ಪ್ರಾಧ್ಯಾಪಕ!

    ಲಂಡನ್: 18 ವರ್ಷದವರೆಗೆ ಅನಕ್ಷರಸ್ಥನಾಗಿದ್ದ ಲಂಡನ್ ಮೂಲದ ಜೇಸನ್ ಅರ್ಡೆ, ಯುಕೆಯ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಕಪ್ಪುವರ್ಣೀಯ ಸಮುದಾಯದ ಅತ್ಯಂತ ಕಿರಿಯ ಪ್ರಾಧ್ಯಾಪಕ ಆಗುವ ಮೂಲಕವಾಗಿ ಸುದ್ದಿಯಲ್ಲಿದ್ದಾರೆ.

    ಜೇಸನ್ ಅರ್ಡೆ ಅವರಿಗೆ 18ನೇ ವರ್ಷದ ತನಕ ಓದಲು ಅಥವಾ ಬರೆಯಲು ಬರುತ್ತಿರಲಿಲ್ಲ. ಸಣ್ಣ ಪ್ರಾಯದಲ್ಲೇ ದೈಹಿಕ ಬೆಳವಣಿಗೆಯಲ್ಲಿ ನಿಧಾನಗತಿ ಮತ್ತು ಮೆದುಳಿನ ಬೆಳವಣಿಗೆಯಲ್ಲಿ ವ್ಯತ್ಯಾಸ ಕಂಡುಬಂದ ಪರಿಣಾಮ 11 ವರ್ಷ ವಯಸ್ಸಿನವರೆಗೆ ಮಾತನಾಡಲು ಸಹ ಬರುತ್ತಿರಲಿಲ್ಲ. ಮಾತು ಬಾರದ ಸಮಯದಲ್ಲಿ ಸಂವಹನಕ್ಕಾಗಿ ಕೈ ಭಾಷೆಯಲ್ಲಿ ಮಾತನಾಡಿ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದರು. ಬರೀ ಸೈನ್ ಲ್ಯಾಂಗ್ವೇಜ್‌ನಲ್ಲಿ ಮಾತನಾಡುತ್ತಲೇ ಎರಡು ಸ್ನಾತಕೋತ್ತರ ಪದವಿ ಪಡೆದರು ಆರ್ಡೆ, 2018ರಲ್ಲಿ ಗ್ಲಾಸ್ಗೋ ಸ್ಕೂಲ್ ಆಫ್ ಎಜ್ಯುಕೇಶನ್ ವಿವಿಯಲ್ಲಿ ಕೆಲಸಕ್ಕೆ ಸೇರಿ ನಂತರ ಯುಕೆನಲ್ಲಿ ಪ್ರಾಧ್ಯಾಪಕರಾದರು. ಮುಂದಿನ ತಿಂಗಳಿಂದ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಜೇಸನ್ ಆರ್ಡೆ ಸಮಾಜ ಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಲಿದ್ದಾರೆ.

    ಇದನ್ನೂ ಓದಿ: ಶ್ವಾನ ಪ್ರಿಯರಿಗೆ ಸಿಹಿ ಸುದ್ದಿ; ನಾಯಿಗಳ ಬರ್ತ​ಡೇ ಸೆಲೆಬ್ರೇಟ್​​​​ ಮಾಡಲು ಶುರುವಾಯ್ತು ಡಾಬಾ!

    ಈ ಬಗ್ಗೆ ಮಾತನಾಡಿದ ಅವರು, ‘ಮುಂದೊಂದು ದಿನ ನಾನು ಕೇಂಬ್ರಿಡ್ಜ್ ಅಥವಾ ಆಕ್ಸ್‌ಫರ್ಡ್‌ ಯೂನಿವರ್ಸಿಟಿಯಲ್ಲಿ ಕೆಲಸ ಮಾಡುವುದು ನನ್ನ ಗುರಿ’ ಎಂದು ತನ್ನ ಜೀವನದ ಕನಸನ್ನು ತಾನು ಮಲಗುವ  ಕೋಣೆಯ ಗೋಡೆಯಲ್ಲಿ ಬರೆಯುತ್ತಿದ್ದೆನು. ಕನಸು ನನಸಾಗಿದೆ ಎಂದು ಹೇಳಿದ್ದಾರೆ.

    ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ 23000 ಸಾವಿರ ಪ್ರಾಧ್ಯಾಪಕರ ಪೈಕಿ ಕೇವಲ 155 ಕಪ್ಪುವರ್ಣ ಸಮುದಾಯದ ಪ್ರಾಧ್ಯಾಪಕರಿದ್ದಾರೆ. ಇದೀಗ ಆ ಸಾಲಿಗೆ ಅತ್ಯಂತ ಕಿರಿಯ ಪ್ರಾಧ್ಯಾಪಕರಾಗಿ ಜೇಸನ್ ಆರ್ಡೆ ಅವರ ಸೇರ್ಪಡೆ ಆಗಿದ್ದಾರೆ.

    ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ನಿತ್ಯಾನಂದನ ಕೈಲಾಸ ದೇಶದ ಪ್ರತಿನಿಧಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts