More

    ಐ ಡ್ರಾಪ್ಸ್​ನಿಂದ ಕರೊನಾದಿಂದ ಗುಣಮುಖನಾದೆ ಎಂದು ವಿಡಿಯೋ ಮಾಡಿದ್ದ ವ್ಯಕ್ತಿ… ಆಸ್ಪತ್ರೆಯಲ್ಲಿ ನಿಧನ

    ಹೈದರಾಬಾದ್​ : ‘ಪವಾಡ’ಸದೃಶವಾದ ಆಯುರ್ವೇದ ಔಷಧಿಯನ್ನು ಸೇವಿಸಿ ಸುಮಾರು 10 ನಿಮಿಷಗಳ ನಂತರ ಕರೊನಾದಿಂದ ಗುಣಮುಖನಾದೆ ಎಂದು ಹೇಳಿಕೊಂಡಿದ್ದ ವ್ಯಕ್ತಿಯೊಬ್ಬರು ಇಂದು ಆಂಧ್ರಪ್ರದೇಶದ ನೆಲ್ಲೋರಿನಲ್ಲಿ ನಿಧನರಾಗಿದ್ದಾರೆ. ನಿವೃತ್ತ ಮುಖ್ಯೋಪಾಧ್ಯಾಯ ಎನ್​.ಕೋಟಯ್ಯ ಎಂಬುವರು ಮೃತರು.

    ವೆಲ್ಲೋರಿನ ಕೃಷ್ಣಪಟ್ನಂನಲ್ಲಿ ಬೊನಿಗಿ ಆನಂದಯ್ಯ ಎಂಬ ಆಯುರ್ವೇದ ವೈದ್ಯರು ನೀಡಿದ ‘ಹರ್ಬಲ್ ಐ ಡ್ರಾಪ್’ ಪಡೆದ ಮೇಲೆ ತಾವು ಥಟ್ಟನೆ ಕೋವಿಡ್​ನಿಂದ ಗುಣಮುಖರಾಗಿದ್ದಾಗಿ ಕೆಲವು ದಿನಗಳ ಹಿಂದೆ ಕೋಟಯ್ಯ ವಿಡಿಯೋ ಮಾಡಿ ಶೇರ್ ಮಾಡಿದ್ದರು. ವೈರಲ್ ಆದ ಈ ವಿಡಿಯೋದಿಂದ ಪ್ರಭಾವಿತರಾಗಿ ಸಾವಿರಾರು ಜನರು ಈ ಪವಾಡಸದೃಶ ಔಷಧಿಗಾಗಿ ಕೃಷ್ಣಪಟ್ನಂನಲ್ಲಿ ಸಾಲುಗಟ್ಟಲು ಆರಂಭಿಸಿದ್ದರು.

    ಇದನ್ನೂ ಓದಿ: ಕರೊನಾ ರೂಪದಲ್ಲಿ ಎರಗಿದ ದುರಾದೃಷ್ಟ… ಎರಡನೇ ಬಾರಿ ತಬ್ಬಲಿಯಾದ ಅಂಧ ಬಾಲಕ !

    “ಮೇ 28 ರ ರಾತ್ರಿ ಕೋಟಯ್ಯ ಅವರ ಆಕ್ಸಿಜನ್ ಮಟ್ಟ ಇಳಿದ ಕಾರಣದಿಂದ ನೆಲ್ಲೋರ್​ ಸರ್ಕಾರಿ ಜನರಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಅವರಿಗೆ ಹಲವು ಇತರ ಆರೋಗ್ಯ ಸಮಸ್ಯೆಗಳೂ ಇದ್ದವು. ಇಂದು ಮುಂಜಾನೆ ಮೃತಪಟ್ಟರು” ಎಂದು ಜನರಲ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಸುಧಾಕರ್​ ರೆಡ್ಡಿ ಇಂಡಿಯಾ ಟುಡೆ ಟಿವಿಗೆ ತಿಳಿಸಿದ್ದಾರೆ.

    ಮತ್ತೊಂದೆಡೆ, ಆನಂದಯ್ಯ ಅವರ ತಂಡದ ಮೂವರು ಸದಸ್ಯರಿಗೆ ರಾಪಿಡ್ ಆ್ಯಂಟಿಜನ್ ಟೆಸ್ಟ್​ನಲ್ಲಿ ಕರೊನಾ ಪಾಸಿಟಿವ್ ಬಂದಿದೆ. ಸುಮಾರು 20 ಗ್ರಾಮಸ್ಥರು ಕರೊನಾ ರೋಗಲಕ್ಷಣಗಳನ್ನು ಪ್ರದರ್ಶಿಸಿದ್ದು, ಅವರ ಸ್ಯಾಂಪಲ್​ಗಳನ್ನು ಆರ್​ಟಿಪಿಸಿಆರ್ ಪರೀಕ್ಷೆಗೆ ಕಳುಹಿಸಲಾಗಿದೆ ಎನ್ನಲಾಗಿದೆ. ಆಂಧ್ರಪ್ರದೇಶ ಸಿಎಂ ವೈ.ಎಸ್.ಜಗನ್ಮೋಹನ್ ರೆಡ್ಡಿ ಅವರು ಸ್ಥಳೀಯವಾದ ಆಯುರ್ವೇದಿಕ್​ ಔಷಧಿಗೆ ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್​ ಇನ್ ಆಯುರ್ವೇದಿಕ್ ಸೈನ್ಸಸ್​ನ ಅಧ್ಯಯನ ವರದಿಯ ಆಧಾರದ ಮೇಲೆ ಅನುಮತಿ ನೀಡಿದ್ದಾರೆ. ಆದಾಗ್ಯೂ ಆನಂದಯ್ಯ ಅವರು ತಯಾರಿಸಿರುವ ಐ ಡ್ರಾಪ್ಸ್​ಗೆ ಅನುಮತಿ ಸಿಕ್ಕಿಲ್ಲ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. (ಏಜೆನ್ಸೀಸ್)

    ಅಂಧ ದಂಪತಿಯ ಕುಟುಂಬಕ್ಕೆ ಪೊಲೀಸ್​ ಅಧಿಕಾರಿಯ ಸಹಾಯಹಸ್ತ

    “ಕೇಜ್ರಿವಾಲ್ ಸರ್ಕಾರ ಕರೊನಾ ಸಾವಿನ ಅಸಲಿ ಸಂಖ್ಯೆಯನ್ನು ಮರೆಮಾಚಿದೆ”

    “ಜೂನ್​ ತಿಂಗಳಲ್ಲಿ 10 ಕೋಟಿ ಡೋಸ್ ಕೋವಿಶೀಲ್ಡ್​ ಪೂರೈಕೆ”

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts