More

    ಕರೊನಾದಿಂದ ಮೃತಪಟ್ಟಿದ್ದ ವ್ಯಕ್ತಿ ಎರಡು ವರ್ಷಗಳ ಬಳಿಕ ಪ್ರತ್ಯಕ್ಷನಾದ!

    ಮಧ್ಯಪ್ರದೇಶ: ಆಸ್ಪತ್ರೆ ಸಿಬ್ಬಂದಿಗಳು ಈತ ಕರೊನಾದಿಂದಾಗಿ ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದರು. ಬಳಿಕ ಕುಟುಂಬದ ಸದಸ್ಯರು ಅಂತಿಮ ವಿಧಿ ವಿಧಾನ ನೆರವೇರಿಸಿ ಸುಮ್ಮನಾಗಿದ್ದಾರೆ. ಆದರೆ ಅಚ್ಚರಿ ಎಂಬಂತೆ ಎಲ್ಲರೂ ಸಾವನ್ನಪ್ಪಿದ್ದಾನೆ ಎಂದು ನಿರ್ಧರಿಸಿದ್ದ ವ್ಯಕ್ತಿ ಎರಡು ವರ್ಷಗಳ ನಂತರ ಪ್ರತ್ಯಕ್ಷನಾಗಿದ್ದಾನೆ.

    ಕಮಲೇಶ್ ಪಾಟಿದಾರ್ (35) ಎಂಬಾತ ಕರೊನಾ ಸಂದರ್ಭದಲ್ಲಿ ಮೃತಪಟ್ಟಿದ್ದಾನೆ ಎಂದು ಭಾವಿಸಿದ್ದರು. ಆದರೆ ಎರಡು ವರ್ಷಗಳ ನಂತರ ನಿನ್ನೆ(ಏ.15) ಬೆಳಿಗ್ಗೆ 6 ಗಂಟೆ ಸುಮಾರಿಗೆ ಕರೋಡ್ಕಳ ಗ್ರಾಮದ ತನ್ನ ತಾಯಿಯ ಚಿಕ್ಕಮ್ಮನ ಮನೆಯ ಬಾಗಿಲು ತಟ್ಟಿದ್ದಾನೆ. ಕುಟುಂಬಸ್ಥರು ಬಾಗಿಲು ತೆಗೆಯುತ್ತಿದ್ದಂತೆ ಒಂದು ಕ್ಷಣ ಗಾಬರಿಯಾಗಿದ್ದಾರೆ.

    ಇದನ್ನೂ ಓದಿ: ಮರ್ಯಾದಾ ಹತ್ಯೆ; ಪ್ರೀತಿಯ ವಿಷಯ ತಿಳಿದು ಹೆಣ್ಣು ಮಕ್ಕಳಿಬ್ಬರನ್ನು ಕೊಂದೇ ಬಿಟ್ಟ ದಂಪತಿ!

    ಕುಟುಂಬಸ್ಥರಿಂದ ಅಂತಿಮ ವಿಧಿ ವಿಧಾನ!

    ಕಮಲೇಶ್ ಪಾಟಿದಾರ್ ಕರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಸೋಂಕಿಗೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದ. ಚಿಕಿತ್ಸೆ ಪಡೆಯುತ್ತಿದ್ದ ಕಮಲೇಶ್ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದರು. ಆಸ್ಪತ್ರೆ ಸಿಬ್ಬಂದಿ ಮೃತದೇಹವನ್ನು ಹಸ್ತಾಂತರಿಸಿದ ನಂತರ, ಕುಟುಂಬ ಸದಸ್ಯರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದರು ಎಂದು ಕಮಲೇಶ್ ಸೋದರಸಂಬಂಧಿ ಮುಖೇಶ್ ಪಾಟಿದಾರ್ ತಿಳಿಸಿದ್ದಾರೆ.

    ಎರಡು ವರ್ಷಗಳ ನಂತರ ಮನೆಗೆ ಬಂದಿರುವ ಕಮಲೇಶ್ ಇಷ್ಟು ಸಮಯ ಎಲ್ಲಿದ್ದ? ಏನು ಮಾಡುತ್ತಿದ್ದ ಎಂಬುದರ ಬಗ್ಗೆ ಆತನ ಸೋದರ ಸಂಬಂಧಿ ಮುಖೇಶ್ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ ಎಂದು ವರದಿಯಾಗಿದೆ.

    ಇದನ್ನೂ ಓದಿ: ಪೊಲೀಸರಿಗೆ ಗುಡ್​ ನ್ಯೂಸ್; ಚುನಾವಣೆ ಕರ್ತವ್ಯ ಭತ್ಯೆ ಹೆಚ್ಚಳ

    ತನಿಖೆ ನಡೆಸಲಾಗುತ್ತಿದೆ…

    ಕಮಲೇಶ್ ಪಾಟಿದಾರ್ 2021 ರಲ್ಲಿ ಕರೊನಾ ಸೋಂಕಿನಿಂದ ಬಳಲುತ್ತಿದ್ದ. ವಡೋದರಾದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾನೆ ಎಂದು ಕಾನ್ವಾನ್ ಪೊಲೀಸ್ ಠಾಣಾಧಿಕಾರಿ ರಾಮ್ ಸಿಂಗ್ ರಾಥೋಡ್ ಹೇಳಿದ್ದಾರೆ. ಮೃತಪಟ್ಟಿದ್ದ ಎಂದು ಭಾವಿಸಿದ್ದ ವ್ಯಕ್ತಿ ಎರಡು ವರ್ಷಗಳ ಬಳಿಕ ಪ್ರತ್ಯಕ್ಷನಾಗಿದ್ದಾನೆ. ಈ ಬಗ್ಗೆ ಕಮಲೇಶ್​ನನ್ನು ವಿಚಾರಣೆಗೆ ಒಳಪಡಿಸಲಾಗುವುದು. ಬಳಿಕವಷ್ಟೇ ಎಲ್ಲಾ ಅನುಮಾನಗಳಿಗೆ ಉತ್ತರ ಸಿಗಲಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)

    ಇದನ್ನೂ ಓದಿ: 19 ವರ್ಷದ ಬಿ.ಟೆಕ್ ವಿದ್ಯಾರ್ಥಿನಿಗೆ ಕಾಲೇಜು ಕೊಠಡಿಯಲ್ಲೇ ಗರ್ಭಪಾತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts