More

    ಅಳಿಯನ ಕಿರುಕುಳ ತಾಳದ ತಂದೆ ನೇಣಿಗೆ ಕೊರಳೊಡ್ಡಿದ… ತಂದೆಯ ಸಾವನ್ನು ಅರಗಿಸಿಕೊಳ್ಳದ ಮಕ್ಕಳು ರೈಲಿಗೆ ತಲೆಯೊಡ್ಡಿದರು.

    ಹೈದರಾಬಾದ್: ಮಗಳಿಗೆ ಮತ್ತು ತನಗೆ ಅಳಿಯ ನೀಡುತ್ತಿದ್ದ ಹಿಂಸೆ ತಾಳಲಾರದೆ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
    ತಂದೆಯ ಸಾವನ್ನು ಅರಗಿಸಿಕೊಳ್ಳಲಾಗದೆ ಮಕ್ಕಳಿಬ್ಬರೂ ರೈಲಿಗೆ ತಲೆಯೊಡ್ಡಿ ಸಾವಿಗೀಡಾಗಿದ್ದಾರೆ.
    ತಮಿಳುನಾಡಿನ ಕಡಪಾ ಜಿಲ್ಲೆಯಲ್ಲಿ ಈ ದುರಂತ ಘಟನೆ ನಡೆದಿದೆ.
    ಬಾಬು ರೆಡ್ಡಿ (55) ಆತ್ಮಹತ್ಯೆಗೀಡಾದವ. ಮಕ್ಕಳನ್ನು ಶ್ವೇತಾ ಮತ್ತು ಸಾಯಿ ರೆಡ್ಡಿ ಎಂದು ಗುರುತಿಸಲಾಗಿದೆ.

    ಇದನ್ನೂ ಓದಿ: ಪಾಕಿಸ್ತಾನದ 11 ಹಿಂದು ನಿರಾಶ್ರಿತರ ಶವಗಳು ಜೋಧ್​ಪುರದಲ್ಲಿ ಪತ್ತೆ; ಓರ್ವ ನರ್ಸ್​ ಮೇಲೆ ತೀವ್ರ ಅನುಮಾನ !

    ಕಳೆದ ವರ್ಷ ಬಾಬು ಮಗಳು ಶ್ವೇತಾಳನ್ನು ಸಾಫ್ಟ್​ವೇರ್ ಇಂಜಿನಿಯರ್​​ ಆರ್. ಸುರೇಶ್​ಕುಮಾರ್ ರೆಡ್ಡಿಗೆ ಕೊಟ್ಟು ಮದುವೆ ಮಾಡಿದ್ದ. ಮದುವೆ ನಂತರ ಗಂಡ- ಹೆಂಡತಿ ಇಬ್ಬರ ಮಧ್ಯೆ ಜಗಳ ಶುರುವಾಯಿತು.
    ಭಿನ್ನಾಭಿಪ್ರಾಯ ತಾರಕಕ್ಕೇರುತ್ತಿದ್ದಂತೆ, ಶ್ವೇತಾ ಪ್ರೊದ್ದಾಪುರದಲ್ಲಿರುವ ತನ್ನ ತವರು ಮನೆಗೆ ಹೋಗಲು ನಿರ್ಧರಿಸಿದ್ದಾಳೆ. ಹೆಂಡತಿಗೆಯೊಂದಿಗೆ ಸುರೇಶನ ಜಗಳ ಮುಂದುವರಿದೇ ಇತ್ತು.
    ಈ ಕಲಹಕ್ಕೆ ಬೇಸತ್ತ ಶ್ವೇತಾ, ಸಹಿಸಲಾಗದೆ ಪೋಷಕರಿಗೆ ತನ್ನ ಗಂಡ ‘ನೀಡುತ್ತಿರುವ ಹಿಂಸೆಯನ್ನು ಎಳೆಎಳೆಯಾಗಿ ವಿವರಿಸಿದ್ದಾಳೆ. ಮಗಳು ಅನುಭವಿಸುತ್ತಿರುವ ಈ ನೋವನ್ನು ನೋಡಿ ಸಹಿಸಲಾಗದೆ ತಂದೆ ಬಾಬು, ಜೀವನವೇ ಸಾಕೆಂದು ನೇಣಿಗೆ ಶರಣಾಗಿದ್ದಾನೆ. ಇದನ್ನೂ ಮುನ್ನ ಸ್ವಂತ ವೀಡಿಯೋ ರೆಕಾರ್ಡ್ ಮಾಡಿದ್ದು, ಅದರಲ್ಲಿ ಆರೋಪಿ ಅಳಿಯನ ಹಿಂಸಾತ್ಮಕ ಕೃತ್ಯವನ್ನು ಬಯಲಿಗೆಳೆದಿದ್ದಾನೆ.

    ಇದನ್ನೂ ಓದಿ: ಅಗೌರವ ಹತ್ಯೆ ಮಾಡಿ ತರಾತುರಿಯಲ್ಲಿ ಅಂತ್ಯಸಂಸ್ಕಾರಕ್ಕೆ ಯತ್ನ; ಪೊಲೀಸರಿಗೆ ಸಿಕ್ಕಿದ್ದಾದರೂ ಏನು?

    ಬಾಬು ಅವರ ಮಕ್ಕಳಾದ ಶ್ವೇತಾ ಮತ್ತು ಸಾಯಿ ರೆಡ್ಡಿ ತಮ್ಮ ತಂದೆಯನ್ನು ಈ ಸ್ಥಿತಿಯಲ್ಲಿ ಕಂಡು ಅವರು ಕೂಡ ಸಾವಿಗೆ ಶರಣಾಗಲು ನಿರ್ಧರಿಸಿ ಯೆರ್ರಗುಂಟ್ಲಾದ ಸಮೀಪ ತಿಪ್ಪಲೂರು- ರಾಯುನಿಪೇಟಾ ಬಳಿ ಚಲಿಸುವ ರೈಲಿಗೆ ತಲೆಯೊಡ್ಡಿದರು.
    ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಮೃತರ ಕುಟುಂಬದವರು ಸುರೇಶನನ್ನು ಶೀಘ್ರದಲ್ಲಿಯೇ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ ಎನ್ನಲಾಗಿದೆ.

    ಕರ್ನಾಟಕದಲ್ಲಿ ಉದ್ಯೋಗ ಬಯಸುವ ಕನ್ನಡೇತರರಿಗಿನ್ನು ಕನ್ನಡ ಭಾಷಾ ಕೌಶಲ ಪರೀಕ್ಷೆ ಕಡ್ಡಾಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts